More

    ಶಾಲೆಯೇ ದೇಗುಲ, ಶಿಕ್ಷಕನೇ ದೇವರು

    ಚನ್ನರಾಯಪಟ್ಟಣ: ಶಾಲೆಗಳು ದೇಗುಲವಾದಲ್ಲಿ ಶಿಕ್ಷಕರು ದೇವರಾಗಿರುತ್ತಾರೆ ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಹೇಳಿದರು.

    ಪಟ್ಟಣದ ಗುರುಭವನದಲ್ಲಿ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಸೋಮವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

    ಪ್ರತಿಯೊಬ್ಬ ಶಿಕ್ಷಕರು ತಮ್ಮ ಜವಾಬ್ದಾರಿ ಅರಿತು ಹಾಗೂ ತಮ್ಮ ವೃತ್ತಿಯ ಗೌರವ ಅರಿತು ಕರ್ತವ್ಯ ಶ್ರದ್ಧೆ ಮತ್ತು ಅಭಿಮಾನ ದೊಂದಿಗೆ ಕೆಲಸಕ್ಕೆ ಮುಂದಾಗಬೇಕು. ಒಂದು ಕಡೆ ಶಿಕ್ಷಕರು ಹಾಗೂ ಮತ್ತೊಂದೆಡೆ ಶಾಸಕರು ಈ ನಾಡಿನ ರಕ್ಷಕರಾಗಿದ್ದು ಜವಾಬ್ದಾರಿ ಮರೆತರೆ ಸಮಾಜ ಬರಿದಾಗಲಿದೆ ಎಂದರು.

    ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳ್ಳಲು ಪ್ರಜಾಪ್ರತಿನಿಧಿಯ ಆಯ್ಕೆಯಲ್ಲಿ ದೇಶದ ಪ್ರಜ್ಞಾವಂತರನ್ನು ಸೃಷ್ಟಿಸುವ ಕೆಲಸ ಶಿಕ್ಷಕರದ್ದಾಗಿದೆ. ಶಿಕ್ಷಣ ಕ್ಷೇತ್ರದಿಂದ ಪ್ರಜಾಪ್ರಭುತ್ವದ ಉಳಿವು ನಿಂತಿದೆ. ಬೀಗುವುದು ಬದುಕಲ್ಲ, ಬಾಗುವುದು ಮುಖ್ಯ ಎಂದು ತಿಳಿಸಿದರು.

    ದೇಶ, ಭಾಷೆ, ಸಮಾಜ ಹಾಗೂ ಸಂಸ್ಕೃತಿಯನ್ನು ಪ್ರೀತಿಸದಿದ್ದರೆ ಬದುಕಿಗೆ ಅರ್ಥವಿಲ್ಲ. ಮಾನವತ್ವದ ಪಾಠ ಬೋಧಿಸುವ ಕೆಲಸ ವಾಗಬೇಕು. ಈ ಮೂಲಕ ವಿಶ್ವಮಾನವನನ್ನಾಗಿಸುವ ಕೆಲಸವಾದರೇ ಈ ದೇಶ ವಿಜೃಂಭಿಸುತ್ತದೆ ಎಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು.

    ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಶಿಕ್ಷಕ ವೃತ್ತಿ ಸಮಾಜದಲ್ಲಿಯೇ ಅತಿಹೆಚ್ಚು ಗೌರವಾನ್ವಿತ ವೃತ್ತಿಯಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಸರಿದಾರಿಯಲ್ಲಿ ಸಾಗಲು ಶಿಕ್ಷಕರು ಮಾರ್ಗದರ್ಶಕರಾಗಿದ್ದು ವೃತ್ತಿಗೆ ಲೋಪವಾಗದ ರೀತಿಯಲ್ಲಿ ಪ್ರತಿಯೊಬ್ಬರು ಕರ್ತವ್ಯ ನಿರ್ವಹಿಸಬೇಕು ಎಂದರು.

    ಪುರಸಭೆಯ ಪ್ರಭಾರ ಅಧ್ಯಕ್ಷ ಎ.ಸಿ.ಧರಣೇಶ್, ಮಾಜಿ ಅಧ್ಯಕ್ಷ ಜಿ.ಆರ್.ಸುರೇಶ್, ಸ್ಥಾಯಿಸಮಿತಿ ಅಧ್ಯಕ್ಷೆ ಬನಶಂಕರಿ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅನಂದ್‌ಕುಮಾರ್, ಎಚ್‌ಎಸ್‌ಎಸ್‌ಕೆ ಅಧ್ಯಕ್ಷ ಸಿ.ಎನ್.ವೆಂಕಟೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ರಮೇಶ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ನಂಜುಂಡೇಗೌಡ, ಕಸಾಪ ಅಧ್ಯಕ್ಷ ಎಚ್.ಎನ್.ಲೋಕೇಶ್, ಬಿಇಒ ಎನ್.ಜೆ.ಸೋಮನಾಥ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣ ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts