More

    ಶಾಂತಿ, ನೆಮ್ಮದಿಯಿಂದಿರುವ ದೇಶ ಭಾರತ : ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಹೇಳಿಕೆ

    ಕೋಲಾರ : ವಿಶ್ವದಲ್ಲಿ ಯಾವುದಾರೊಂದು ದೇಶ ಶಾಂತಿ, ನೆಮ್ಮದಿಯಿಂದ ಇದೆ ಎಂದರೆ ಅದು ಭಾರತ, ಈ ವಾತಾವರಣ ಸದಾಕಾಲ ಇರಬೇಕೆಂದು ನನ್ನ ಆಸೆ ಎಂದು ತೋಗಾರಿಕೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಆಶಿಸಿದರು.

    ನಗರದ ಹಳೇ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ನೆಹರು ಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಇನ್ನಿತರ ಸಂಸ್ಥೆಗಳ ಆಶ್ರಯದಲ್ಲಿ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಫ್ರೀಡಂ ರನ್ 2.0 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮಹನೀಯರ ತ್ಯಾಗ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ದೊರೆತಿದೆ.

    ಯುವಕರು ನಮ್ಮ ದೇಶದ ಆಸ್ತಿಯಾಗಿದ್ದು, ಎಂದೆಂದಿಗೂ ನಮ್ಮ ದೇಶ ಸುಕ್ಷಿತವಾಗಿರುವಂತೆ ನೋಡಿಕೊಳ್ಳುವ ಜವಾಬ್ದಾರಿ ಯುವಕರ ಮೇಲಿದೆ ಎಂದರು. ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಅಲ್ಲಿನ ಜನ ಶಾಂತಿ ಮತ್ತು ನೆಮ್ಮದಿಗಾಗಿ ಹೋರಾಡುತ್ತಿದ್ದಾರೆ. ಆದರೆ ನಮ್ಮ ದೇಶದ ಜನತೆಗೆ ಸುರಕ್ಷತೆಯ ಭಯ ಇಲ್ಲದಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವವೇ ಕಾರಣ ಎಂದರು.

    ಜಿಲ್ಲಾ ಉಸ್ತುವಾರಿ ಸಚಿವನಾಗಿ ನಾನು ಕಳೆದ 2 ತಿಂಗಳಲ್ಲಿ ಜಿಲ್ಲೆಯಾಧ್ಯಂತ ಸಂಚರಿಸಿ ಎಲ್ಲ ಆಸ್ಪತ್ರೆಗಳಿಗೆ ಭೇಟಿ ನೀಡಿ ಜನರಿಗೆ ತೊಂದರೆ ತಪ್ಪಿಸಲು ಸರ್ಕಾರದಿಂದ ಅಗತ್ಯ ಸೌಲಭ್ಯ ಒದಗಿಸಿದ್ದೇನೆ. ಸುಮಾರು 20 ಕೋಟಿ ರೂ. ಸರ್ಕಾರದಿಂದ ಬಿಡುಗಡೆ ಮಾಡಿಸಿ ಆಸ್ಪತ್ರೆಗಳಲ್ಲಿ ಮೂಲ ಸೌಕರ್ಯ ಹೆಚ್ಚಿಸಲಾಗಿದೆ. ಅಮೃತ ಗ್ರಾಪಂ ಯೋಜನೆಯಡಿ ಜಿಲ್ಲೆಯ 41 ಗ್ರಾಪಂಗಳನ್ನು ಗುರುತಿಸಲಾಗಿದ್ದು, ಅಲ್ಲಿನ ಜನರಿಗೆ ಅಗತ್ಯವಾಗಿ ಬೇಕಾಗಿರುವ ಸೌಲಭ್ಯಕ್ಕಾಗಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

    ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಪ್ರತಿಜ್ಞಾವಿಧಿ ಬೋಧಿಸಿದರು. ಎಸ್ಪಿ ಡಿ.ಕಿಶೋರ್ ಬಾಬು, ಕುಡಾ ಅಧ್ಯಕ್ಷ ಓಂಶಕ್ತಿ ಚಲಪತಿ, ನಾಮನಿರ್ದೇಶಿತ ಸದಸ್ಯ ಅಪ್ಪಿನಾರಾಯಣಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್, ಬೀಜ ನಿಗಮದ ನಿರ್ದೇಶಕ ವಡಗೂರು ಡಿ.ಎಲ್.ನಾಗರಾಜ್, ಜಿಲ್ಲಾ ಯುವಜನ ಸಮನ್ವಯಾಧಿಕಾರಿ ಸರಣ್ಯಾ, ಜಿಪಂ ಮಾಜಿ ಸದಸ್ಯ ಮಹೇಶ್, ಗಾಯಕ ಗೊಲ್ಲಹಳ್ಳಿಶಿವಪ್ರಸಾದ್ ಇತರರು ಇದ್ದರು.

    ದೇಶದ ಭವಿಷ್ಯ ಯುವಕರ ಕೈಯಲ್ಲಿದ್ದು, ದೇಶಕ್ಕೆ ಅಪಾಯ ಎದುರಾಗದಂತೆ ಸಿಫಾಯಿಗಳಂತೆ ಕಾಯಬೇಕು. ಯುವಕರು ಸೇನೆಗೆ ಸೇರುವುದಕ್ಕೆ ಬೇಕಾದ ಅಗತ್ಯ ತರಬೇತಿ ವ್ಯವಸ್ಥೆ ಮಾಡಿಸಲಾಗುವುದು. ನಮ್ಮಸೇನೆ ಬಲಿಷ್ಠವಾಗಿದ್ದು, ಕೋಲಾರ ಲೋಕಸಭಾ ಕ್ಷೇತ್ರದ ಯುವಕರಿಂದ ಸೇನೆ ಇನ್ನಷ್ಟು ಬಲಗೊಳ್ಳಬೇಕೆಂಬುದು ನನ್ನ ಆಸೆ.
    ಎಸ್.ಮುನಿಸ್ವಾಮಿ, ಸಂಸದ

    ಯುವಕರಿಗಾಗಿ ಫೀಡಂ ರನ್: ಫೀಡಂ ರನ್ ಉದ್ದೇಶವೇ ಯುವಕರು ಮಾನಸಿಕ ಮತ್ತು ದೈಹಿಕ ಸದೃಢರಾಗಬೇಕೆಂಬುದಾಗಿದೆ. ಪ್ರಧಾನಿ ಮೋದಿ ಆಶಯದಂತೆ ದೇಶದಲ್ಲಿಂದು ಕೋಟ್ಯಾಂತರ ಯುವಕರು 2.0 ಕಿಮೀ ಓಡುವ ಮೂಲಕ ಆರೋಗ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಕಾರ್ಯಕ್ರಮ ಇನ್ನಷ್ಟು ಯಶಸ್ವಿಗೊಳ್ಳಲು ಜನರ ಸಹಕಾರ ಹೆಚ್ಚಿನ ರೀತಿಯಲ್ಲಿ ಬೇಕಾಗುತ್ತದೆ ಎಂದು ನೆಹರು ಯುವ ಕೇಂದ್ರದ ಪ್ರಾದೇಶಿಕ ನಿರ್ದೇಶಕ ಎಸ್.ಪಿ.ಪಾಟ್ನಾಯಕ್ ತಿಳಿಸಿದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts