More

    ಶಾಂತಿ,ನೆಮ್ಮದಿಗೆ ಪೊಲೀಸರ ಕರ್ತವ್ಯ ನಿಷ್ಠೆ ಕಾರಣ,ಜಿಲ್ಲಾ ನ್ಯಾಯಾಧೀಶೆ ಬಿ.ಎಸ್.ರೇಖಾ

    ಚಿತ್ರದುರ್ಗ:ಪೊಲೀಸರ ಕರ್ತವ್ಯ ನಿಷ್ಠೆಯಿಂದ ಪ್ರತಿಯೊಬ್ಬರು ಶಾಂತಿ,ನೆಮ್ಮಯಿಂದ ಜೀವನ ನಡೆಸಲು ಸಾಧ್ಯವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ.ಎಸ್.ರೇಖಾ ಹೇಳಿದರು. ನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಆವರಣದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಯಿಂದ ಶನಿವಾರ ಹಮ್ಮಿ ಕೊಂಡಿದ್ದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಹುತಾತ್ಮರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿ ದರು.ಪೊಲೀಸರು ಇಲ್ಲದಿದ್ದಿದ್ದರೆ ನಾವು ನೆಮ್ಮದಿಯಿಂದ ಮನೆಯಲ್ಲಿರಲು ಸಾಧ್ಯವಾಗುತ್ತಿರಲಿಲ್ಲ. ಯೋಧರು ದೇಶವನ್ನು,ಪೊಲೀಸರು ದೇಶದ ಒಳಗಡೆ ಇರುವ ನಮ್ಮನ್ನು ರಕ್ಷಿಸುತ್ತಿದ್ದಾರೆ. ನಮ್ಮ ರಕ್ಷಣೆಯಲ್ಲಿ ಯೋಧರ ಮತ್ತು ಪೊಲೀಸರ ಪಾತ್ರ ಬಹಳ ಮುಖ್ಯವಾಗಿದೆ. ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಹೋರಾಡುತ್ತಾರೆ. ಧೈರ್ಯದಿಂದ ಮುನ್ನುಗ್ಗುತ್ತಾರೆ. ಇಂತಹ ಸಂದರ್ಭದಲ್ಲಿ ಪೊಲೀಸರು ಹುತಾತ್ಮರಾಗುವ ಸಾಧ್ಯತೆಗಳು ಇವೆ. ಆದರೆ ಹೇಡಿತನ ಎಂಬುದು ನಮ್ಮ ಪೊಲೀಸರಿಗೆ ಗೊತ್ತಿಲ್ಲ.
    ಪೊಲೀಸ್ ಹುದ್ದೆಗೆ ನೇಮಕವಾದ ಸಮಯದಲ್ಲೇ ರಕ್ಷಣೆ ಜವಾಬ್ದಾರಿ ಒಪ್ಪಿರುತ್ತಾರೆ. ಕಡಿಮೆ ವೇತನವಿದ್ದರೂ,ದಿನದ 24 ತಾಸು ಶ್ರದ್ಧೆಯಿಂದ ಕಾರ್ಯನಿರ್ವಹಿಸುತ್ತಾರೆ. ಹಾಗಾಗಿ ನಮ್ಮ ಪೊಲೀಸರನ್ನು ನಾವು ಸಹೋದರ-ಸಹೋದರಿಯರು ಎಂದು ಸ್ವೀಕರಿಸಬೇಕಾಗಿದೆ. ಯಾವ ಪೊಲೀಸರಿಗೂ ಹಬ್ಬ-ಹರಿದನ ಸಂಭ್ರಮದಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ.
    ನಾವೆಲ್ಲರೂ ಸಂಭ್ರಮದಲ್ಲಿ ಭಾಗಿಯಾಗಲು ಪೊಲೀಸರು ನಮಗೆ ಅವಕಾಶ ಮಾಡಿಕೊಡುತ್ತಾರೆ ಎಂದ ಅವರು,ಕರ್ತವ್ಯದೊಂದಿಗೆ ಕುಟುಂಬ ವರ್ಗದವರ ಕಡೆಯೂ ಗಮನಹರಿಸುವಂತೆ ಪೊಲೀಸ್ ಅಧಿಕಾರಿ,ಸಿಬ್ಬಂದಿಗೆ ಸಲಹೆ ನೀಡಿದರು. ಪೊಲೀಸರನ್ನು ರಕ್ಷಣೆ ಕರ್ತವ್ಯಕ್ಕೆ ಕಳಿಸಿದ ಅವರ ಕುಟುಂಬ ವರ್ಗದವರ ನಡೆಗೂ ಸೆಲ್ಯೂಟ್ ಹೇಳ ಬೇಕಿದೆ ಎಂದರು.
    ಜಿಲ್ಲಾ ರಕ್ಷಣಾಧಿಕಾರಿ ಧರ್ಮೇಂದ್ರ ಕುಮಾರ್‌ಮೀನಾ ಅವರು ಮಾತನಾಡಿ,ಪ್ರತಿ ವರ್ಷ ಅ.21ನ್ನು ಪೊಲೀಸ್ ಹುತಾತ್ಮ ದಿನವನ್ನು ಆಚರಿಸಲಾ ಗುತ್ತದೆ. 2022ರ ಸೆಪ್ಟೆಂಬರ್ 1ರಿಂದ 2023ರ ಆಗಸ್ಟ್ 31 ರವರೆಗೆ ದೇಶದಲ್ಲಿ 189 ಪೊಲೀಸ್ ಅಧಿಕಾರಿ,ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಇವರಲ್ಲಿ ಕರ್ನಾಟಕದ 16 ಹುತಾತ್ಮರಿದ್ದಾರೆ ಎಂದು ಹೇಳಿ,ಹುತಾತ್ಮರ ಹೆಸರುಗಳನ್ನು ವಾಚಿಸಿದರು.
    ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ನ್ಯಾಯಾಧೀಶರು,ಪೊಲೀಸ್ ಅಧಿಕಾರಿ,ಸಿಬ್ಬಂದಿ,ಗಣ್ಯರು,ನಾಗರಿಕರು ಹೂಗುಚ್ಛವಿರಿಸಿ ಗೌರವ ಸಲ್ಲಿಸಿದರು.
    ಎಎಸ್‌ಪಿ ಎಸ್.ಜೆ.ಕುಮಾರಸ್ವಾಮಿ,ಐಮಂಗಲ ಪೊಲೀಸ್ ತರಬೇತಿ ಶಾಲೆ ಪ್ರಾಂಶುಪಾಲ ಪಾಪಣ್ಣ,ಗೃಹ ರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ಸಿ.ಕೆ.ಸಂಧ್ಯಾ,ಡಿವೈಎಸ್‌ಪಿಗಳಾದ ಅನಿಲ್‌ಕುಮಾರ್,ಲೋಕೇಶ್ವರಪ್ಪ ಮತ್ತಿತರ ಅಧಿಕಾರಿಗಳು,ನಿವೃತ್ತ ಅಧಿಕಾರಿಗಳು,ವಕೀಲ ಫಾತ್ಯರಾಜನ್ ಮೊದಲಾದ ಗಣ್ಯರು,ನಾಗರಿಕರು ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts