More

    ಶರಣರ ವಿಚಾರಗಳು ಪ್ರತಿ ಮನೆಗೆ ತಲುಪಬೇಕು

    ಚಿತ್ರದುರ್ಗ: ಮೃತ್ಯುಂಜಯ ಅಪ್ಪಗಳು ಹಾಗೂ ಹರ್ಡೇಕರ್ ಮಂಜಪ್ಪ ಅವರು ಬಸವ ಜಯಂತಿ ಆಚರಿಸದೆ ಹೋಗಿದ್ದರೆ ಇವತ್ತು ಅನೇಕರಿಗೆ ಬಸವಣ್ಣ ಅರ್ಥವಾಗಿರುತ್ತಿರಲಿಲ್ಲ ಎಂದು ಮುರುಘಾಮಠ ಹಾಗೂ ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಡಾ. ಶ್ರೀ ಬಸವಕುಮಾರ ಸ್ವಾಮೀಜಿ ಹೇಳಿದರು.
    ಬಸವ ಜಯಂತಿ ಆಚರಣೆ ಅಂಗವಾಗಿ ಮಠದ ಅನುಭವ ಮಂಟಪದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಎಸ್‌ಜೆಎಂ ವಿದ್ಯಾಪೀಠದ ನೌಕರರ ಸಮಲೋಚನಾ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
    ದುಡಿಯುವ ವರ್ಗವನ್ನು ದೇವರೆಂದು, ಯಾವುದೇ ಕಾಯಕವಿರಲಿ ಅದಕ್ಕೆ ವೃತ್ತಿಗೌರವದೊಂದಿಗೆ ಸೂಕ್ತ ಮೌಲ್ಯವನ್ನು ಬಸವಣ್ಣ ಒದಗಿಸಿದರು. ವಚನ ಸಾಹಿತ್ಯ ಜನಮಾನಸಕ್ಕೆ ತಲುಪು ವಂತಾಗಲು ಫ.ಗು.ಹಳಕಟ್ಟಿ ಕೆಲಸ ಮಾಡಿದರು. ಬಸವಣ್ಣನ ವಿಚಾರಗಳು ಪ್ರತಿ ಮನೆ, ಮನ ತಲುಪಿಸುವ ನಿಟ್ಟಿನಲ್ಲಿ ವಿದ್ಯಾಪೀಠದ ನೌಕರರು 3 ದಿನಗಳ ಕಾಲ ಜಯಂತಿ ಆಚರಣೆಯಲ್ಲಿ ಭಾಗವಹಿಸಬೇಕು ಎಂದರು.
    ಶ್ರೀಮಠದ ಆಡಳಿತಾಧಿಕಾರಿ ಶಿವಯೋಗಿ ಸಿ.ಕಳಸದ ಮಾತನಾಡಿ, 111 ವರ್ಷಗಳ ಹಿಂದೆ ಪ್ರಥಮ ಬಾರಿಗೆ ಬಸವ ಜಯಂತಿ ಸಮಾರಂಭಕ್ಕೆ ದಾವಣಗೆರೆ ವಿರಕ್ತ ಮಠದಲ್ಲಿ ಚಾಲನೆ ನೀಡಲಾಯಿತು ಎಂದು ಹೇಳಿದರು.
    ಈ ಬಾರಿಯೂ ಮುರುಘಾ ಮಠದಲ್ಲಿ ಬಸವೇಶ್ವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದರು.
    ತೋಟಪ್ಪ ಮತ್ತು ಸಂಗಡಿಗರು ವಚನಗಳನ್ನು ಹಾಡಿದರು. ಅನು ಲಿಂಗರಾಜು ಸ್ವಾಗತಿಸಿದರು. ನೇತ್ರಾವತಿ ನಿರೂಪಿಸಿದರು. ಲಿಂಗರಾಜು ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts