More

    ಶರಣರಿಂದ ದಾಸೋಹ ತತ್ತ್ವ ಅನುಷ್ಠಾನ

    ಹಾವೇರಿ: ಬಸವಾದಿ ಶಿವಶರಣರ ಜೀವನ ತತ್ತ್ವಗಳನ್ನು ಅನುಸರಿಸುವುದರ ಮೂಲಕ ನಮ್ಮ ನಾಡಿನ ನಾಗರಿಕತೆ, ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಎತ್ತಿ ಹಿಡಿಯಬೇಕು ಎಂದು ಇಲ್ಲಕಲ್ಲ ವಿಜಯ ಮಹಾಂತೇಶ್ವರ ಮಠದ ಗುರುಮಹಾಂತ ಸ್ವಾಮೀಜಿ ಹೇಳಿದರು.

    ನಗರದ ಹುಕ್ಕೇರಿಮಠದಲ್ಲಿ ಹಮ್ಮಿಕೊಂಡಿರುವ ಲಿಂ. ಶಿವಬಸವ ಸ್ವಾಮಿಗಳ 74ನೇ ಹಾಗೂ ಶಿವಲಿಂಗ ಸ್ವಾಮಿಗಳ 11ನೇ ಪುಣ್ಯ ಸ್ಮರಣೋತ್ಸವದ 2ನೇ ದಿನದ ಧಾರ್ವಿುಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಇತ್ತೀಚೆಗೆ ವಿಶ್ವಸಂಸ್ಥೆಯು ಆಹಾರದ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಜಾಗತಿಕ ಆಹಾರ ದಿನವನ್ನು ಆಚರಿಸಿತು. ಆದರೆ 12ನೇ ಶತಮಾನದಲ್ಲಿಯೇ ಬಸವಾದಿ ಶರಣರು ಕಾಯಕ ಮತ್ತು ದಾಸೋಹದ ತತ್ತ್ವವನ್ನು ಜಗತ್ತಿಗೆ ತೋರಿಸಿದ್ದರು. ಭಾರತದಲ್ಲಿ ಇಂದು ಅಪೌಷ್ಟಿಕತೆ ಹೆಚ್ಚಾಗಿದ್ದು, ಪ್ರಜ್ಞಾವಂತರಾದ ನಾವು ಕಲ್ಲು ನಾಗರ ಮೂರ್ತಿಗೆ ಹಾಲನ್ನು ಎರೆಯದೇ ಅನಾಥ, ದುರ್ಬಲ ಮಕ್ಕಳಿಗೆ ನೀಡದರೆ ಅದೇ ನಿಜವಾದ ಹಬ್ಬ. ಲಿಂಗಪೂಜೆ ನಿಷ್ಠರಾಗಿ ಮನಸ್ಸು ನಿಗ್ರಹಿಸಿ ಲಿಂಗಾಂಗ ಸಾಮರಸ್ಯ ಸಾಧಿಸಬೇಕು ಎಂದರು.

    ತೆಲಂಗಾಣದ ಹಣೆಗಾಂವ್​ನ ಶಂಕರಲಿಂಗ ಸ್ವಾಮೀಜಿ ಮಾತನಾಡಿ, ಜೀವನದಲ್ಲಿ ಎದುರಾಗುವ ಸಂಕಷ್ಟಗಳನ್ನು ಸಮರ್ಥವಾಗಿ ಎದುರಿಸಬೇಕು. ಅದಕ್ಕಾಗಿ ಆತ್ಮಸ್ಥೈರ್ಯ ಹಾಗೂ ಆತ್ಮ ಬಲಬೇಕು. ಅದನ್ನು ಪಡೆಯಲು ಸಂತ ಮಹಾತ್ಮರ ಅನುಭಾವ ಮತ್ತು ಕೃಪಾಶೀರ್ವಾದ ಅವಶ್ಯ ಎಂದರು.

    ಸಮ್ಮುಖ ವಹಿಸಿದ್ದ ಗೌರಿಮಠದ ಶಿವಯೋಗಿ ಶಿವಾಚಾರ್ಯರು ಮಾತನಾಡಿದರು. ಕೆಪಿಎಸ್​ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಜಿಲ್ಲೆಯ ಚಿದಾನಂದ ಗಾಳಿ, ಭುವನೇಶ್ವರಿ ಪಾಟೀಲ, ಪಲ್ಲವಿ ಸಾತೇನಹಳ್ಳಿ, ಯೋಗಪಟು ಪ್ರೇಮಕುಮಾರ ಮುದ್ದಿ ಅವರನ್ನು ಸನ್ಮಾನಿಲಾಯಿತು.

    ಹುಕ್ಕೇರಿಮಠ ಅಕ್ಕನ ಬಳಗ ಪ್ರಕಟಿಸಿದ ‘ಕರ್ಪರಗಿರಿ’ ಸ್ಮರಣ ಸಂಚಿಕೆಯನ್ನು ಲೋಕಾರ್ಪಣೆಗೊಳಿಸಲಾಯಿತು. ಸ್ವರರಾಗ ಸಂಗಮದ ಕಲಾವಿದರು ಸಂಗೀತ ಕಾರ್ಯಕ್ರಮ ನೀಡಿದರು. ಬಸವಲಿಂಗ ಸ್ವಾಮೀಜಿ, ಬಸವಚೇತನ ಸ್ವಾಮೀಜಿ, ಗಂಗಾಧರ ಸ್ವಾಮೀಜಿ, ಅಭಿನವ ರುದ್ರಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಜಾತ್ರಾ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಹಾವೇರಿ, ಪ್ರಕಾಶ ಶಟ್ಟಿ, ತಮ್ಮಣ್ಣ ಮುದ್ದಿ, ಶಿವಣ್ಣ ಶಿರೂರ, ಗುರುಶಿದ್ದಪ್ಪ ಗುಂಜೆಟ್ಟಿ ಇತರರಿದ್ದರು. ದೇವರಾಜ ಎರಡಿಹಾಳ ಪ್ರಾರ್ಥಿಸಿದರು. ವೀರಣ್ಣ ಅಂಗಡಿ ಸ್ವಾಗತಿಸಿದರು. ಸುರೇಶ ಹಿರೇತನದ ನಿರೂಪಿಸಿದರು. ಕೆ.ಆರ್. ನಾಶೀಪುರ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts