More

    ಶಖಾಪುರ ಮಠ ಎರಡನೇ ಕಾಶೀ ಪೀಠ

    ಜೇವರ್ಗಿ: ಕಲ್ಯಾಣ ಕರ್ನಾಟಕದಲ್ಲಿರುವ ಶಖಾಪುರ ತಪೋವನ ಮಠ ಎರಡನೇ ಕಾಶೀ ಪೀಠವಾಗಿ ರಾರಾಜಿಸುತ್ತಿದೆ ಎಂದು ಕಾಶೀ ಜಗದ್ಗುರು ಶ್ರೀ ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
    ಶಖಾಪುರದ ಸದ್ಗುರು ವಿಶ್ವಾರಾಧ್ಯರ ತಪೋವನ ಮಠದಲ್ಲಿ ಮಹಾದ್ವಾರ ನಿರ್ಮಾಣಕ್ಕೆ ಅಡಿಗಲ್ಲು ನೆರವೇರಿಸಿ ಆಶೀರ್ವಚನ ನೀಡಿದ ಅವರು, ಶ್ರೀ ಡಾ. ಸಿದ್ಧರಾಮ ಶಿವಾಚಾರ್ಯರು ಸಂಕಲ್ಪ ಹಾಗೂ ಭಕ್ತರ ಸಹಕಾರದಿಂದ 1 ಕೋಟಿ ರೂ. ವೆಚ್ಚದಲ್ಲಿ ಮಹಾದ್ವಾರ ನಿರ್ಮಾಣವಾಗಲಿದೆ. ಸಿದ್ಧರಾಮ ಶ್ರೀಗಳು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಅನ್ನ ದಾಸೋಹ ನೀಡುತ್ತಿದ್ದಾರೆ. ಅವರ ಸಮಾಜಮುಖಿ ಕಾರ್ಯ ಅವಿಸ್ಮರಣೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
    ಶಖಾಪುರ ವಿಶ್ವಾರಾಧ್ಯರ ತಪೋವನ ಮಠದ ಶ್ರೀ ಡಾ.ಸಿದ್ಧರಾಮ ಶಿವಾಚಾರ್ಯರು ಸಾನಿಧ್ಯ ವಹಿಸಿ ಮಾತನಾಡಿ, ಮಹಾದ್ವಾರ ನಿರ್ಮಾಣಕ್ಕಾಗಿ ಸರ್ಕಾರಕ್ಕೆ ಅನುದಾನದ ಬೇಡಿಕೆ ಇಟ್ಟಿಲ್ಲ. ಕಾಶೀ ಜಗದ್ಗುರುಗಳ ಆಶೀರ್ವಾದ ಹಾಗೂ ಶ್ರೀಮಠದ ಭಕ್ತರ ಸಹಾಯ, ಸಹಕಾರದಿಂದ ಮಹಾದ್ವಾರ ನಿರ್ಮಿಸಲಾಗುವುದು ಎಂದರು.
    ಪಾಳಾದ ಡಾ.ಗುರುಮೂರ್ತಿ ಶಿವಾಚಾರ್ಯರು, ಹಂಗನಳ್ಳಿಯ ಶ್ರೀ ವೀರಗಂಗಾಧರ ಶಿವಾಚಾರ್ಯರು, ಮಹಾಗಾಂವ್ ಕಳ್ಳಿಮಠದ ಶ್ರೀ ಗುರುಲಿಂಗ ಶಿವಾಚಾರ್ಯರು, ಕುಳೆಕುಮಟಗಿಯ ಶ್ರೀಗುರುಸ್ವಾಮಿ ಶರಣರು, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್, ಮಾಜಿ ಶಾಸಕರಾದ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಅಲ್ಲಮಪ್ರಭು ಪಾಟೀಲ್ ನೆಲೋಗಿ, ಬಿಜೆಪಿ ಗ್ರಾಮಾಂತರ ಘಟಕದ ಅಧ್ಯಕ್ಷ ಶಿವರಾಜ ಪಾಟೀಲ್ ರದ್ಧೇವಾಡಗಿ, ತಹಸೀಲ್ದಾರ್ ಸಿದ್ದರಾಯ ಭೋಸಗಿ, ಪ್ರಮುಖರಾದ ರಾಜಶೇಖರ ಸೀರಿ, ಕಾಶಿರಾಯಗೌಡ ಯಲಗೋಡ, ದಿವ್ಯಾ ಹಾಗರಗಿ, ಚನ್ನಮಲ್ಲಯ್ಯ ಹಿರೇಮಠ, ಡಾ.ಪಿ.ಎಂ.ಮಠ, ಐ.ಎಸ್.ಹಿರೇಮಠ, ಬಸಯ್ಯಸ್ವಾಮಿ ಕೋಳಕೂರ, ಶ್ರೀಶೈಲಗೌಡ ಕರಕಿಹಳ್ಳಿ, ದೇವನಗೌಡ ಪಾಟೀಲ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts