More

    ವ್ಯಾಪಾರಸ್ಥರು, ಅಧಿಕಾರಿಗಳ ಮಧ್ಯೆ ವಾಗ್ವಾದ

    ಅಣ್ಣಿಗೇರಿ: ಕರೊನಾ ಭೀತಿಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಆದೇಶದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪಟ್ಟಣದಲ್ಲಿ ಶುಕ್ರವಾರ ಸಂತೆಯನ್ನು ಸಂಪೂರ್ಣ ಬಂದ್ ಮಾಡಲಾಗಿತ್ತು. ಆದರೂ ಮಾರá-ಕಟ್ಟೆಯಲ್ಲಿ ಮಾರಾಟಕ್ಕಾಗಿ ಕಾಯಿಪಲ್ಲೆ ವ್ಯಾಪಾರಿಗಳು ಅಂಗಡಿಗಳನ್ನು ತೆರೆದಿದ್ದರು. ಅವುಗಳನ್ನು ಪುರಸಭೆ ಮತ್ತು ಪೊಲೀಸ್ ಸಿಬ್ಬಂದಿ ಬಂದ್ ಮಾಡಿಸಿದರು. ಅದರಿಂದ ವ್ಯಾಪಾರಸ್ಥರು, ಅಧಿಕಾರಿಗಳ ಮಧ್ಯೆ ವಾಗ್ವಾದ, ಮಾತಿನ ಚಕಮಕಿ ನಡೆಯಿತá-. ಇದರಿಂದ ಗದ್ದಲದ ವಾತಾವರಣ ನಿರ್ವಣವಾಯಿತು.

    ಪುರಸಭೆ, ಪೊಲೀಸ್ ಅಧಿಕಾರಿಗಳು ವ್ಯಾಪಾರಿಗಳಿಗೆ ತಿಳಿಹೇಳಿದರು. ನಂತರ ಎಲ್ಲ ಕಾಯಿಪಲ್ಲೆ ಅಂಗಡಿಗಳನ್ನು ಪುರಸಭೆಯ ವಾಹನಗಳಲ್ಲಿ ಸಾಗಿಸುವ ಮೂಲಕ ತೆರವುಗೊಳಿಸಲಾಯಿತು. ಕರೊನಾ ವೈರಾಣು ಸೋಂಕು ಹರಡá-ವ ಭೀತಿಯ ಹಿನ್ನೆಲೆಯಲ್ಲಿ ಸರ್ಕಾರ, ಜಿಲ್ಲಾಡಳಿತ ನಿಯಮಾನá-ಸಾರ 100ಕ್ಕಿಂತ ಹೆಚ್ಚು ಜನರು ಸೇರುವುದನ್ನು ಹಾಗೂ ಸಂತೆ, ಸಮಾವೇಶ, ಸಮಾರಂಭ, ಮದá-ವೆಗಳನ್ನು ನಡೆಸಕೂಡದು ಎಂಬ ಆದೇಶ ಹೊರಡಿಸಿದೆ. ಅದರಂತೆ ಪುರಸಭೆಯಿಂದ ‘ಶುಕ್ರವಾರ ಸಂತೆ ಬಂದ್’ ಎಂದು ಪಟ್ಟಣದಲ್ಲಿ ಧ್ವನಿವರ್ಧಕ ಮೂಲಕ ತಿಳಿಸಲಾಗಿದೆ. ಪತ್ರಿಕೆ, ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರಿಗೆ, ವ್ಯಾಪಾರಸ್ಥರಲ್ಲಿ ವಿನಂತಿ ಮಾಡಿಕೊಳ್ಳಲಾಗಿತ್ತು. ಇಷ್ಟಾದರೂ ನೀವು ಕಾಯಿಪಲ್ಲೆ ಮಾರಲು ಬಂದಿದ್ದೀರಲ್ಲ. ನಿಮ್ಮೆಲ್ಲರ ಮತ್ತು ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ನಮ್ಮೊಂದಿಗೆ ಸಹಕರಿಸಬೇಕು ಎಂದು ಪುರಸಭೆ, ಪೊಲೀಸ್ ಅಧಿಕಾರಿಗಳು ವ್ಯಾಪಾರಸ್ಥರಿಗೆ ಮನವರಿಕೆ ಮಾಡಿಕೊಟ್ಟರು.

    ಇದೇ ಮೊದಲ ಬಾರಿಗೆ ತರಕಾರಿ ಅಂಗಡಿಗಳನ್ನು ಸಂಪೂರ್ಣ ಬಂದ್ ಮಾಡಲಾಗಿತ್ತು. ಈ ವಿಷಯ ತಿಳಿಯದೆ ಪಟ್ಟಣಕ್ಕೆ ಆಗಮಿಸಿದ್ದ ಸಾರ್ವಜನಿಕರಿಗೆ ಕಾಯಿಪಲ್ಲೆ, ತರಕಾರಿ ಅಂಗಡಿಗಳಿಲ್ಲದೆ ಪರದಾಡá-ವಂತಾಯಿತು. ಕೆಲವರು ಹೀಾದರೆ ಜೀವನ ಮಾಡá-ವುದು ಹೇಗೆ ಎಂದು ಪ್ರ್ನಶಿಸಿದ್ದು ಕೇಳಿಬಂತು.

    ಪುರಸಭೆ ಮುಖ್ಯಾಧಿಖಾರಿ ಕೆ.ಎಫ್. ಕಟಗಿ, ಹೆಚ್ಚುವರಿ ಪಿಎಸ್​ಐ ಡಿ. ಸಿದ್ದನಗೌಡ್ರ, ಅಣ್ಣಿಗೇರಿ ಎಎಸ್​ಐ ಆರ್.ಡಿ. ಗೋಂದಕರ, ಪುರಸಭೆ ಹಾಗೂ ಪೊಲೀಸ್ ಸಿಬ್ಬಂದಿ ಪೌರಕಾರ್ವಿುಕರೊಂದಿಗೆ ಪುರಸಭೆಯ ವಾಹನಗಳಲ್ಲಿ ಅಂಗಡಿಗಳನ್ನು ಸಾಗಿಸಿ ತೆರವುಗೊಳಿಸಲು ಹರಸಾಹಸಪಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts