More

    ವ್ಯಾಪಕ ಮಳೆ: ಹೊಸನಗರದಲ್ಲಿ ರಸ್ತೆಗೆ ಉರುಳಿದ ಬೃಹತ್ ಬಂಡೆ

    ಹೊಸನಗರ: ತಾಲೂಕಿನ ನಗರ ಹೋಬಳಿಯಲ್ಲಿ ಸೋಮವಾರ ಸಂಜೆ ವ್ಯಾಪಕ ಮಳೆಯಾಗುತ್ತಿದ್ದು ರಸ್ತೆ ಮೇಲೆ ಬೃಹತ್ ಗಾತ್ರದ ಬಂಡೆ ಉರುಳಿದ್ದು ಹಿಲ್ಕುಂಜಿ-ಸುಳುಗೋಡು ಸಂಪರ್ಕ ಕಡಿತಗೊಂಡಿದೆ.
    ಈ ಮಾರ್ಗವನ್ನು ಬಳಸಿ ಆಗರಬೈಲು, ಸುಳುಗೋಡು, ಹೆಂಡೆಗದ್ದೆ ಗ್ರಾಮಸ್ಥರು ಸಂಪರ್ಕ ಸಾಧಿಸುತ್ತಿದ್ದು ಸಂಚಾರಕ್ಕೆ ಕುತ್ತು ತಂದಿದೆ. ಬಂಡೆಕಲ್ಲು ರಸ್ತೆಯನ್ನು ಸಂಪೂರ್ಣ ಆವರಿಸಿದ್ದು, ಬೈಕ್ ಸಂಚಾರ ಕೂಡ ಸಾಧ್ಯವಿಲ್ಲದಂತಾಗಿದೆ. ಈ ಸಂಪರ್ಕಕ್ಕೆ 20ಕ್ಕೂ ಹೆಚ್ಚು ಕುಟುಂಬಗಳು ಅವಲಂಬಿತವಾಗಿವೆ. 10ಕ್ಕೂ ಹೆಚ್ಚು ಶಾಲಾ ಮಕ್ಕಳ ಸಂಚಾರಕ್ಕೆ ಕುತ್ತು ಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts