More

    ವ್ಯಾಜ್ಯ ಬಗೆಹರಿಸುವ ಅಧಿಕಾರವಿಲ್ಲ

    ಹಳಿಯಾಳ: ಸಿವಿಲ್ ಪ್ರಕರಣಗಳಾದ ಹೊಲ, ಜಮೀನು ಹಾಗೂ ಮನೆ ಇತ್ಯಾದಿಗಳಿಗೆ ಸಂಬಂಧಪಟ್ಟ ವ್ಯಾಜ್ಯಗಳನ್ನು ಬಗೆಹರಿಸುವ ಅಧಿಕಾರ ನಮಗಿಲ್ಲ, ಬದಲಾಗಿ ನಮ್ಮ ಅಧಿಕಾರ ಮೀತಿಯಲ್ಲಿ ಇಂತಹ ಸಿವಿಲ್ ಪ್ರಕರಣಗಳಲ್ಲಿ ಶೋಷಿತರಾದವರಿಗೆ ನೆರವು ಮಾರ್ಗದರ್ಶನ ನೀಡಿ ನ್ಯಾಯ ಒದಗಿಸುವ ಸೇವೆ ನೀಡುತ್ತೇವೆ ಎಂದು ಎಸ್ಪಿ ಶಿವಪ್ರಕಾಶ ದೇವರಾಜು ಭರವಸೆ ನೀಡಿದರು.

    ಶುಕ್ರವಾರ ಪಟ್ಟಣದ ಠಾಣೆಯ ಆವರಣದಲ್ಲಿ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರ ಅಹವಾಲು ಆಲಿಸಿದರು. ಸಿವಿಲ್ ವ್ಯಾಜ್ಯಗಳು ಹೆಚ್ಚಾಗಿ ಬರುತ್ತಿರುವುದರಿಂದ ಆಯಾ ತಾಲೂಕುಗಳಲ್ಲಿ ತಹಸೀಲ್ದಾರ್ ಅವರೊಂದಿಗೆ ಪೊಲೀಸ್ ಇಲಾಖೆ ಜತೆಗೂಡಿ ಹೋಬಳಿ ಮಟ್ಟದಲ್ಲಿ ಸಭೆ ನಡೆಸಿ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಪ್ರಯತ್ನಸಲಿದ್ದೇವೆ ಎಂದರು.

    ಸುಮ್ಮನಿರಲ್ಲ: ವಾಟ್ನಾಳ ಗ್ರಾಮದ ಅಬ್ದುಲ್​ರಜಾಕ್ ಮುಲ್ಲಾ ಸಭೆಯಲ್ಲಿ ಅಹವಾಲು ಸಲ್ಲಿಸುತ್ತಾ, ಕಳೆದ ತಿಂಗಳು ಫೇಸ್​ಬುಕ್​ನಲ್ಲಿ ನನ್ನ ಸಹೋದರನ ಅಕೌಂಟ್​ನಲ್ಲಿ ಯಾರೋ ಅಪರಿಚಿತರು ಹಿಂದು ಧರ್ಮದ ವಿರುದ್ಧ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದು, ಪೊಲೀಸರು ನನ್ನ ಸಹೋದರನನ್ನು ವಿಚಾರಣೆ ನಡೆಸಿದರು. ಆದರೆ, ಈವರೆಗೂ ಅಂದು ವಶಪಡಿಸಿಕೊಂಡಿದ್ದ ಮೊಬೈಲ್ ಹಿಂದಿರುಗಿಸಲಿಲ್ಲ ಎಂದು ತಿಳಿಸಿದರು. ಅದಕ್ಕೆ ಖಡಕ್ಕಾಗಿ ಪ್ರತಿಕ್ರಿಯಿಸಿದ ಎಸ್ಪಿ ದೇವರಾಜು, ಯಾವುದೇ ಧರ್ಮದ ಬಗ್ಗೆಯಾಗಲಿ, ಮಹಿಳೆ, ಯುವತಿಯರ ಬಗ್ಗೆಯಾಗಲಿ ಯಾರನ್ನಾದರೂ ಅವಹೇಳನ ಮಾಡುವ ಹಾಗೂ ಮನಸ್ಸು ನೋಯಿಸುವಂತಹ ಪೋಸ್ಟ್​ಗಳನ್ನು ಹರಿಬಿಟ್ಟರೆ ಕಾನೂನು ಕ್ರಮ ಕೈಗೊಳ್ಳುತ್ತೆವೆ ಎಂದರು. ಮೊಬೈಲ್ ಹಿಂದಿರುಗಿಸದ ಬಗ್ಗೆ ಪ್ರತಿಕ್ರಿಯಿಸಿದ ಸಿಪಿಐ ಡಾ.ಮೋತಿಲಾಲ ಪವಾರ, ಈ ಪ್ರಕರಣ ವಿಚಾರಣೆಯ ಹಂತದಲ್ಲಿದೆ, ಅದಕ್ಕಾಗಿ ಮೊಬೈಲ್ ಹಿಂದಿರುಗಿಸಲಿಲ್ಲ ಎಂದು ತಿಳಿಸಿದರು.

    ಪ್ರಭಾರಿ ಎಸ್ಪಿ ಕೌಶಿಕ್ ಚೌಕ್ಸಿ, ಡಿವೈಎಸ್​ಪಿ ಶಿವಾನಂದ ಚಲವಾದಿ, ಸಿಪಿಐ ಡಾ. ಮೋತಿಲಾಲ ಪವಾರ, ಪಿಎಸ್​ಐ ಯಲ್ಲಾಲಿಂಗ ಕೊಣ್ಣೂರ, ಕ್ರೈಂ ಪಿಎಸ್​ಐ ರಾಜಕುಮಾರ, ಸಿದ್ದಪ್ಪ ಗುಡಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts