More

    ವ್ಯಕ್ತಿತ್ವ ವಿಕಸನಕ್ಕೆ ಕ್ರೀಡೆ ಅವಶ್ಯ

    ಧಾರವಾಡ: ಪ್ರತಿಯೊಬ್ಬರ ವ್ಯಕ್ತಿತ್ವ ವಿಕಸನಕ್ಕೆ ಕ್ರೀಡೆ ಬಹಳ ಅವಶ್ಯ ಎಂದು ರಾಷ್ಟ್ರೀಯ ಕ್ರೀಡೆಯಲ್ಲಿ ಸ್ವರ್ಣ ಪದಕ ವಿಜೇತೆ ಪೊ›. ರಂಜನಾ ಬಾದ್ರಿ ಹೇಳಿದರು. ನಗರದ ಜೆ.ಎಸ್.ಎಸ್. ಬನಶಂಕರಿ ಕಲಾ, ವಾಣಿಜ್ಯ ಮತ್ತು ಶಾಂತಿಕುಮಾರ ಗುಬ್ಬಿ ವಿಜ್ಞಾನ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ, ಕ್ರೀಡಾ ವಿಭಾಗ ಮತ್ತು ಮಾನವ ಹಕ್ಕುಗಳ ಸಂಘದ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಪ್ರತಿಯೊಬ್ಬ ವ್ಯಕ್ತಿಯಲ್ಲಿ ನಾಯಕತ್ವ ಸಾಮರ್ಥ್ಯ ಬೆಳೆಸಲು, ಆರೋಗ್ಯವನ್ನು ಸದೃಢವಾಗಿಸಲು ಕ್ರೀಡೆ ಬಹು ಮುಖ್ಯ. ಹಾಕಿ ಮಾಂತ್ರಿಕ ಮೇಜರ್ ದ್ಯಾನಚಂದ ಅವರ ಜನ್ಮದಿನವನ್ನು 2012ರಿಂದ ರಾಷ್ಟ್ರೀಯ ಕ್ರೀಡಾ ದಿನ ಎಂದು ಆಚರಿಸಲಾಗುತ್ತದೆ. 2019ರಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ದಿನವನ್ನು ಫಿಟ್ ಇಂಡಿಯಾ ಅಭಿಯಾನವೆಂದು ಘೊಷಿಸಿದರು. ಪ್ರಜೆಗಳು ದೈಹಿಕವಾಗಿ ಆರೋಗ್ಯವಾಗಿದ್ದರೆ ದೇಶದ ಅಭಿವೃದ್ಧಿ ಸಾಧ್ಯ ಎಂದರು.

    ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಜಿ. ಕೃಷ್ಣಮೂರ್ತಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಮತ್ತು ಜನರಲ್ಲಿ ಕ್ರೀಡಾ ಭಾವನೆಯನ್ನು ಬೆಳೆಸಲು ಖೇಲೋ ಇಂಡಿಯಾ ಪ್ರಾರಂಭಿಸಲಾಗಿದೆ. ವಿದ್ಯಾರ್ಥಿಗಳು ಪಠ್ಯಕ್ರಮದ ಜೊತೆಗೆ ಕ್ರೀಡೆಗೂ ಮಹತ್ವ ನೀಡಬೇಕು ಎಂದರು.

    ಎನ್.ಎಸ್.ಎಸ್. ಅಧಿಕಾರಿ ಪೊ›. ಎಸ್.ಕೆ. ಸಜ್ಜನ, ಮಾನವ ಹಕ್ಕುಗಳ ಸಂಘದ ಚೇರ್ಮನ್ ಡಾ. ಆರ್.ವಿ. ಚಿಟಗುಪ್ಪಿ, ದೈಹಿಕ ನಿರ್ದೇಶಕ ಗಣೇಶ ನಾಯಕ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts