More

    ವೈಭವದ ರಥೋತ್ಸವ ಶರಣಾರತಿ ಸಂಭ್ರಮ

    ಕಲಬುರಗಿ: ಅತ್ತ ಸೂರ್ಯದೇವ ಬಾನಿನಲ್ಲಿ ಮೆಲ್ಲಗೆ ಮರೆಯಾಗುತ್ತಿದ್ದ. ಗೋಧೂಳಿಯ ಪವಿತ್ರ ಕಾಲದ ಹೊತ್ತು. ಇಡೀ ದೇವಸ್ಥಾನದ ಪರಿಸರ ಲಕ್ಷಾಂತರ ಭಕ್ತರಿಂದ ತುಂಬಿತ್ತು. ಎತ್ತ ನೋಡಿದರತ್ತ ಜನರೋ ಜನ. ಎಲ್ಲೆಡೆ ಭಕ್ತಿ, ಭಾವ ತುಂಬಿದ ಸಡಗರ, ಸಂಭ್ರಮದ ವಾತಾವರಣ. ಥೇರನೆಳೆಯುವ ಪುಣ್ಯ ಘಳಿಗೆ ಕಣ್ತುಂಬಿಕೊAಡ ಸಂತೃಪ್ತಿ. ಶರಣಾರತಿಯಲ್ಲಿ ಮಿಂದೆದ್ದ ಸಂತಸ. ಎಲ್ಲರ ಬಾಯಿಯಿಂದ ಮೊಳಗುತ್ತಿದ್ದ `ಮಹಾದಾಸೋಹಿ ಶ್ರೀ ಶರಣಬಸವೇಶ್ವರ ಮಹಾರಾಜ ಕೀ ಜೈ’ ಎಂಬ ಘೋಷಣೆ…
    ಕಲ್ಯಾಣ ಕರ್ನಾಟಕದ ಮಹಾದಾಸೋಹಿ ಇಲ್ಲಿಯ ಶ್ರೀ ಶರಣಬಸವೇಶ್ವರರ ೨೦೧ನೇ ದಾಸೋಹ ಮಹಾಯಾತ್ರೆಯಲ್ಲಿ ಭಾನುವಾರ ಸಂಜೆ ಜರುಗಿದ ವೈಭವದ ರಥೋತ್ಸವ ಹಾಗೂ ಶರಣಾರತಿ ಸಂದರ್ಭದಲ್ಲಿ ಕಂಡುಬಂದ ದೃಶ್ಯವಿದು.
    ಸೂರ್ಯಾಸ್ತವಾಗುತ್ತಿದ್ದಂತೆ ಶ್ರೀ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಸಂಸ್ಥಾನದ ಪೀಠಾಧಿಪತಿ ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಹಾಗೂ ಒಂಬತ್ತನೇ ಪೀಠಾಧಿಪತಿ ಪೂಜ್ಯ ಚಿರಂಜೀವಿ ದೊಡ್ಡಪ್ಪ ಅಪ್ಪ ಅವರು ಪರುಷ ಬಟ್ಟಲು ತೋರಿಸುವ ಮೂಲಕ ವೈಭವದ ರಥೋತ್ಸವಕ್ಕೆ ಚಾಲನೆ ನೀಡಿದರು.ಇದೇ ಮೊದಲ ಸಲ ಗಂಗಾರತಿ ಮಾದರಿಯಲ್ಲಿ ನಡೆದ ಶರಣಾರತಿ ಜಾತ್ರೋತ್ಸವದ ವೈಶಿಷ್ಟÈತೆಯನ್ನು ಹೆಚ್ಚಿಸಿತು.
    ರಥೋತ್ಸವಕ್ಕೆ ಚಾಲನೆ ದೊರೆಯುತ್ತಿದ್ದಂತೆಯೇ ಭಕ್ತರ ಜೈಘೋಷಗಳು ಮುಗಿಲು ಮುಟ್ಟಿದವು. ಭಕ್ತರು ರಥದತ್ತ ಉತ್ತತ್ತಿ ಹಾಗೂ ಬಾಳೆಹಣ್ಣು ಎಸೆಯುವ ಮೂಲಕ ಭಕ್ತಿ ಸಮರ್ಪಿಸಿದರು. ವಿವಿಧೆಡೆ ಪುರವಂತರ ಕುಣಿತ, ನಂದಿಕೋಲು ಪ್ರದರ್ಶನ ಮೈನವಿರೇಳಿಸಿತು. ಶರಣನ ದೇವಸ್ಥಾನ ಪ್ರಾಂಗಣ ಹಾಗೂ ಸುತ್ತಲಿನ ಪ್ರದೇಶ ಭಕ್ತರಿಂದ ತುಂಬಿತ್ತು. ಬೆಳಗ್ಗೆಯಿಂದ ಕಾತರರಾಗಿದ್ದ ಲಕ್ಷಾಂತರ ಭಕ್ತರು ಸಂಜೆ ಶರಣನ ಥೇರನೆಳೆದು ಸಂಭ್ರಮಿಸಿದರು.
    ರಥೋತ್ಸವ ವೇಳೆ ಇದೇ ಮೊದಲ ಬಾರಿಗೆ ಉತ್ತರ ಪ್ರದೇಶದ ವಾರಣಾಸಿಯ ೧೨ ಶ್ವೇತವಸ್ತçದಾರಿ ಪುರೋಹಿತರ ತಂಡದಿಂದ ವಾದ್ಯ ಮೇಳ, ಮಂತ್ರ ಘೋಷಣೆಗಳೊಂದಿಗೆ ಗಂಗಾರತಿ ಮಾದರಿಯಲ್ಲಿ ಶರಣಾರತಿ ನೆರವೇರಿತು. ಶರಣಾರಯು ಭಕ್ತರಲ್ಲಿ ಭಕ್ತಿಯ ಸಿಂಚನ ಮೂಡಿಸಿತು. ಅರ್ಧಗಂಟೆಗೂ ಅಧಿಕ ಕಾಲ ಜರುಗಿದ ಶರಣಾರತಿಯಲ್ಲಿ ಪುರೋಹಿತರು ಊದಿನ ಕಡ್ಡಿ ಬೆಳಗಿ, ಧೂಪ, ದೀಪ, ಬೃಹತ್ ಆರತಿಯೊಂದಿಗೆ ದಾಸೋಹಮೂರ್ತಿಗೆ ನಮನ ಸಲ್ಲಿಸಿದರು. ಶಿವನಾಮ, ಶರಣರ ಜೈಘೋಷಗಳು, ದೇವರ ಸ್ಮರಣೆಯ ಹಾಡುಗಳು ಆರತಿಗೆ ಶೃದ್ಧೆ, ಭಕ್ತಿಯ ಸ್ಪರ್ಷ ನೀಡಿತು. ಶ್ರೀ ಡಾ. ಶರಣಬಸವಪ್ಪ ಅಪ್ಪಾ ಅವರು ದಾಸೋಹ ಮನೆ ಮೇಲೆ ನಿರ್ಮಿಸಿದ ವೇದಿಕೆಯಿಂದ ಇಡೀ ಆರತಿಯನ್ನು ವೀಕ್ಷಣೆ ಮಾಡಿದರು. ಅಪಾರ ಭಕ್ತರು ಭಕ್ತಿಯಿಂದ ಶರಣರಾತಿ ವೀಕ್ಷಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts