More

    ವೈದ್ಯ ಸೇರಿ ನಾಲ್ವರಿಗೆ ಸೋಂಕು

    ಗದಗ: ಕರೊನಾ ಸೇನಾನಿ ಎನಿಸಿರುವ ವೈದ್ಯ ಸೇರಿ ಜಿಲ್ಲೆಯ ನಾಲ್ವರಿಗೆ ಕರೊನಾ ವೈರಸ್ ದೃಢಪಟ್ಟಿದೆ. ಜಿಮ್್ಸ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ 29 ವರ್ಷದ ವೈದ್ಯರೊಬ್ಬರಿಗೆ (ಪಿ 5014) ಸೋಂಕು ತಗುಲಿದ್ದು, ಇವರಿಗೆ ಯಾರಿಂದ ಸೋಂಕು ತಗುಲಿತು ಎಂಬುದು ತಿಳಿದುಬಂದಿಲ್ಲ. ಸದ್ಯ ಅವರು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಜಿಲ್ಲಾಸ್ಪತ್ರೆಯ 32 ವರ್ಷದ ಡಯಾಲಿಸಿಸ್ ಟೆಕ್ನಿಷಿಯನ್​ಗೆ (ಪಿ 5016) ಸೋಂಕು ದೃಢಪಟ್ಟಿದೆ. ಇವರು ಡಯಾಲಿಸಿಸ್ ಚಿಕಿತ್ಸೆಗೆ ಬಂದಿದ್ದ ರೋಗಿಗೆ (ಪಿ 4079) ಚಿಕಿತ್ಸೆ ನೀಡಿದ್ದರಿಂದ ಸೋಂಕು ತಗುಲಿದೆ. ಜಿಲ್ಲಾಸ್ಪತ್ರೆಗೆ ಡಯಾಲಿಸಿಸ್ ಚಿಕಿತ್ಸೆಗೆಂದು ಬಂದಿದ್ದ ರೋಣ ತಾಲೂಕಿನ ಹೊಳೆಆಲೂರು ಗ್ರಾಮದ 28 ವರ್ಷದ ವ್ಯಕ್ತಿಗೂ (ಪಿ 5015) ಸೋಂಕು ದೃಢಪಟ್ಟಿದೆ. ಹೀಗಾಗಿ, ಡಯಾಲಿಸಿಸ್ ಕೇಂದ್ರವನ್ನು ಬಂದ್ ಮಾಡಲಾಗಿದೆ. ಇನ್ನು ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ 29 ವರ್ಷದ ವ್ಯಕ್ತಿಗೆ (ಪಿ 5017) ಸೋಂಕು ದೃಢಪಟ್ಟಿದ್ದು, ಇವರಿಗೆ ಯಾವುದೇ ಟ್ರ್ಯಾವೆಲ್ ಹಿಸ್ಟರಿ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    20 ದಿನಗಳಿಂದ ಕೆಲಸಕ್ಕೆ ಹಾಜರಾಗಿಲ್ಲ

    29 ವರ್ಷದ ವೈದ್ಯ ಗದಗನ ಜಿಮ್್ಸ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ, ಇವರ ಆರೋಗ್ಯದಲ್ಲಿ ಏರುಪೇರು ಆಗಿದ್ದರಿಂದ ಕಳೆದ 20 ದಿನಗಳಿಂದ ಅವರು ಕೆಲಸಕ್ಕೆ ಹಾಜರಾಗಿಲ್ಲ. ವೈದ್ಯರಿಗೆ ಅನಾರೋಗ್ಯ ಕಾಣಿಸಿಕೊಂಡಿದ್ದರಿಂದ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಅವರ ಗಂಟಲು ಮಾದರಿ ತಪಾಸಣೆ ನಡೆಸಿದಾಗ ಕರೊನಾ ಪಾಸಿಟಿವ್ ಇರುವುದು ಖಚಿತವಾಗಿದೆ. ಸೋಂಕಿತ ವೈದ್ಯ ಕಳೆದ 20 ದಿನಗಳಿಂದ ಜಿಮ್ಸ್​ಗೆ ಭೇಟಿ ನೀಡಿಲ್ಲ. ಆದರೆ, ಕಳೆದ ತಿಂಗಳು ಕೊನೆಯ ವಾರದಲ್ಲಿ ನಡೆದ ವೈದ್ಯರ ಸಭೆಯಲ್ಲಿ ಭಾಗವಹಿಸಿದ್ದರು ಎಂದು ವೈದ್ಯರೊಬ್ಬರು ತಿಳಿಸಿದ್ದಾರೆ. ಸದ್ಯ ಜಿಮ್ಸ್​ನಲ್ಲಿ ಕೆಲಸ ಮಾಡುತ್ತಿರುವ ವೈದ್ಯರು ಕ್ವಾರಂಟೈನ್​ನಲ್ಲಿ ಇದ್ದು, ನಗರದ ಖಾಸಗಿ ಹೋಟೆಲ್​ನಲ್ಲಿ ತಂಗಿದ್ದಾರೆ. ಇಲ್ಲಿ ಕೆಲಸ ಮಾಡುತ್ತಿರುವ ವೈದ್ಯರು ಯಾರೂ ಮನೆಗೆ ಹೋಗುವುದಿಲ್ಲ.

    ಕಂಟೇನ್ಮೆಂಟ್ ಜೋನ್ ಘೊಷಣೆ

    ಸೋಂಕಿತರು ವಾಸವಿದ್ದ ನಗರದ ಕಳಸಾಪುರ ರಸ್ತೆ ಹಾಗೂ ಕೆವಿಎಸ್ ಕಾಲನಿ ಹಾಗೂ ಹುಡ್ಕೋ ಕಾಲನಿ ಪ್ರದೇಶಗಳನ್ನು ಜಿಲ್ಲಾಡಳಿತ ಕಂಟೇನ್ಮೆಂಟ್ ಜೋನ್ ಎಂದು ಘೊಷಿಸಿದೆ. ಸ್ಥಳದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಈ ಪ್ರದೇಶದಿಂದ ಜನರು ಹೊರ ಹೋಗುವುದು ಮತ್ತು ಒಳ ಬರುವುದನ್ನು ನಿಷೇಧಿಸಲಾಗಿದೆ.

    ಹೊಳೆ ಆಲೂರ ಗ್ರಾಮದಲ್ಲಿ ಹೆಚ್ಚಿದ ಆತಂಕ

    ಹೊಳೆಆಲೂರ: ಗ್ರಾಮದ ಮೇಘರಾಜ ನಗರದ ನಿವಾಸಿ 28 ವರ್ಷದ ವ್ಯಕ್ತಿಗೆ ಕರೊನಾ ದೃಢ ಪಟ್ಟಿರುವುದರಿಂದ ಗ್ರಾಮಸ್ಥರಲ್ಲಿ ತೀವ್ರ ಆತಂಕ ಮನೆ ಮಾಡಿದೆ. ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ ಆತನ ತಾಯಿ, ತಂದೆ, ಇಬ್ಬರು ಸಹೋದರಿಯರು, 1 ವರ್ಷದ ಮಗು ಹಾಗೂ ಸೋಂಕಿತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ ಇಬ್ಬರು ವಾಹನ ಚಾಲಕರು ಸೇರಿ 9 ಮಂದಿಯನ್ನು ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ.

    ಸೋಂಕಿತ ವ್ಯಕ್ತಿ ಯಾವುದೇ ಟ್ರ್ಯಾವೆಲ್ ಹಿಸ್ಟರಿ ಹೊಂದಿಲ್ಲ. ನಾಲ್ಕು ವರ್ಷಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು ಪ್ರತಿ ಸೋಮವಾರ ಹಾಗೂ ಗುರುವಾರ ಗದಗ ಜಿಲ್ಲಾಸ್ಪತ್ರೆಯಲ್ಲಿ ಡಯಾಲಿಸಿಸ್ ಮಾಡಿಸಿಕೊಂಡು ಬರುತ್ತಿದ್ದರು. ಜಿಲ್ಲಾಸ್ಪತ್ರೆಯ 32 ವರ್ಷದ ಡಯಾಲಿಸಿಸ್ ಟೆಕ್ನಿಷಿಯನ್ ಮೂಲಕ ಇವರಿಗೆ ಸೋಂಕು ತಗುಲಿದೆ.

    ಸೋಂಕಿತನ ಸಹೋದರಿ ಗ್ರಾಮದ ಆಲೂರ ವೆಂಕಟರಾವ್ ವೃತ್ತದಲ್ಲಿ ಹಣ್ಣು ಹಾಗೂ ಪಾದರಕ್ಷೆ ಅಂಗಡಿ ಹೊಂದಿದ್ದಾರೆ. ಸೋಂಕಿತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ ಹೊಳೆಮಣ್ಣೂರ ಗ್ರಾಮದ ವಾಹನ ಚಾಲಕ ಕೊಪ್ಪಳ ಸೇರಿ ವಿವಿಧ ಕಡೆ ಸುತ್ತಾಡಿದ್ದಾನೆ. ಸೋಂಕಿತ ವ್ಯಕ್ತಿಯ ಸಹೋದರಿಯ ಒಂದು ವರ್ಷದ ಮಗು ಎರಡು ದಿನಗಳ ಹಿಂದೆ ಕಫದ ಸಮಸ್ಯೆಯಿಂದ ಬಳಲುತ್ತಿತ್ತು. ಹೀಗಾಗಿ ಗ್ರಾಮದ ಖಾಸಗಿ ಆಸ್ಪತ್ರೆಯಲ್ಲಿ ತೋರಿಸಿಕೊಂಡು ಬಂದಿದ್ದಳು. ಸೋಂಕಿತನ ಸಹೋದರಿ ಬಹಳಷ್ಟು ಸ್ವಸಹಾಯ ಸಂಘಟನೆಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಹೀಗಾಗಿ, ಅವರಿಗೇನಾದರೂ ಸೋಂಕು ಬಂದಿದ್ದರೆ ಗ್ರಾಮದ ಸ್ಥಿತಿ ಏನಾಗಬಹುದು ಎನ್ನುವ ಆತಂಕ ಸ್ಥಳೀಯರಲ್ಲಿ ಮೂಡಿದೆ.

    ಗ್ರಾಮ ಪಂಚಾಯಿತಿ ಅಧಿಕಾರಿಗಳು ಡಂಗುರ ಸಾರಿ ಜಾಗ್ರತೆ ವಹಿಸುವಂತೆ ಜನರಿಗೆ ಸೂಚಿಸಿದ್ದಾರೆ. ಎಲ್ಲ ಅಂಗಡಿಗಳನ್ನು ಬಂದ್ ಮಾಡಿಸಿದ್ದಾರೆ. ತಾಲೂಕು ಆರೋಗ್ಯ ಅಧಿಕಾರಿ ಬಿ.ಎಸ್. ಭಜಂತ್ರಿ, ಡಾ.ಅರವಿಂದ ಕಂಬಳಿ, ಡಾ. ರಾಘು, ಡಾ. ಕೆ.ಎಸ್. ಹಾದಿಮನಿ, ಪ್ರಾಥಮಿಕ ಅರೋಗ್ಯ ಕೇಂದ್ರದ ವೈದ್ಯಾಧಿಕಾರಿ ಶಿವಲೀಲಾ ಸಂಗಳದ, ತಾ.ಪಂ. ಇಒ ಸಂತೋಷ ಪಾಟೀಲ, ಪಿಡಿಒ ಮಂಜುನಾಥ ಗಣಿ ನೇತೃತ್ವದಲ್ಲಿ ಮೇಘರಾಜ ನಗರದ ಪ್ರತಿ ಮನೆ ಮನೆಯಲ್ಲೂ ತಪಾಸಣೆ ನಡೆಸುತ್ತಿದ್ದಾರೆ.

    ರೋಣ ತಾಲೂಕಿನ ಹೊಳೆಆಲೂರ ಗ್ರಾಮದ 28 ವರ್ಷದ ಪುರುಷ, ಗದಗ ನಗರದ ಕಳಸಾಪುರ ರಸ್ತೆ ನಿವಾಸಿ, 32 ವರ್ಷದ ಪುರುಷನಿಗೆ ಪಿ-4079 ರ ಪ್ರಾಥಮಿಕ ಸಂಪರ್ಕದಿಂದ ಸೋಂಕು ದೃಡಪಟ್ಟಿದೆ. ಗದಗ ನಗರದ ಕೆ.ವಿ.ಎಸ್. ಕಾಲನಿಯ 29 ವರ್ಷದ ಪುರುಷ ಮತ್ತು ಲಕ್ಕುಂಡಿ ಗ್ರಾಮದ 29 ವರ್ಷದ ಪುರುಷನಿಗೆ ಕೋವಿಡ್ 19 ಸೋಂಕು ಇರುವುದು ದೃಢಪಟ್ಟಿದೆ. ಸೋಂಕಿತರ ಪ್ರಥಮ ಹಾಗೂ ದ್ವಿತೀಯ ಸಂಪರ್ಕದಲ್ಲಿರುವವರನ್ನು ಪತ್ತೆ ಹಚ್ಚುವ ಕಾರ್ಯ ಮುಂದುವರಿದಿದೆ.

    ಎಂ.ಜಿ. ಹಿರೇಮಠ, ಜಿಲ್ಲಾಧಿಕಾರಿ ಗದಗ

    ಮುಂಬೈಯಿಂದ 48 ಜನರ ಆಗಮನ

    ಗದಗ: ಮುಂಬೈ-ಗದಗ ಎಕ್ಸ್​ಪ್ರೆಸ್ ರೈಲಿನ ಮೂಲಕ ಮಹಾರಾಷ್ಟ್ರದಿಂದ ಶನಿವಾರ ನಗರಕ್ಕೆ 48 ಜನರು ಆಗಮಿಸಿದರು. ಎಲ್ಲರ ಆರೋಗ್ಯ ತಪಾಸಣೆ ನಡೆಸಿ ಅವರನ್ನು ಕ್ವಾರಂಟೈನ್​ಗೆ ಕಳುಹಿಸಲಾಯಿತು. ಬೆಳಗ್ಗೆ 11ಗಂಟೆಗೆ ಆಗಮಿಸಿದ ಮುಂಬೈ ಗದಗ ಎಕ್ಸ್​ಪ್ರೆಸ್ ರೈಲಿಗೆ 66 ಜನರು ಟಿಕೆಟ್ ಕಾಯ್ದಿರಿಸಿದ್ದರು. ಆದರೆ, 48 ಜನರು ಮಾತ್ರ ಬಂದಿಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು. 48 ಪ್ರಯಾಣಿಕರ ಪೈಕಿ ಓರ್ವ ಗರ್ಭಿಣಿ ಸಹ ಆಗಮಿಸಿದ್ದರು. ತವರೂರಾದ ಕಲಘಟಗಿಗೆ ತೆರಳಬೇಕು ಎಂದು ಮಹಿಳೆ ಮನವಿ ಮಾಡಿಕೊಂಡಿದ್ದರಿಂದ ಅಧಿಕಾರಿಗಳು ತಕ್ಷಣ ಧಾರವಾಡ ಜಿಲ್ಲಾಡಳಿತವನ್ನು ಸಂರ್ಪಸಿ ಅವರನ್ನು ಧಾರವಾಡಕ್ಕೆ ಕಳುಹಿಸಿಕೊಟ್ಟರು.

    ಕಳೆದ ಮಂಗಳವಾರದಿಂದ ಶನಿವಾರದವರೆಗೆ ಒಟ್ಟು 366 ಜನರು ರೈಲಿನ ಮೂಲಕ ಗದಗ ನಗರಕ್ಕೆ ಬಂದಿಳಿದಿದ್ದಾರೆ.

    ತವರು ರಾಜ್ಯಗಳಿಗೆ ತೆರಳಿದ ಕಾರ್ವಿುಕರು

    ಗದಗ: ಲಾಕ್​ಡೌನ್​ನಿಂದಾಗಿ ಜಿಲ್ಲೆಯಲ್ಲಿ ಸಿಲುಕಿದ್ದ ವಿವಿಧ ರಾಜ್ಯಗಳ ಒಟ್ಟು 466 ವಲಸೆ ಕಾರ್ವಿುಕರನ್ನು ಶನಿವಾರ ಅವರ ತವರು ರಾಜ್ಯಗಳಿಗೆ ಕಳುಹಿಸಲಾಯಿತು. ಜಿಲ್ಲಾಡಳಿತ ಭವನದಿಂದ ಕಾರ್ವಿುಕರನ್ನು ಬಸ್​ನಲ್ಲಿ ಹುಬ್ಬಳ್ಳಿಗೆ ಕಳಿಸಿಕೊಡಲಾಯಿತು. ಹುಬ್ಬಳ್ಳಿಯಿಂದ ಶನಿವಾರ ಸಂಜೆ ವಿಶೇಷ ಶ್ರಮಿಕ ರೈಲುಗಳಲ್ಲಿ ಕಾರ್ವಿುಕರು ತಮ್ಮ ರಾಜ್ಯಗಳಿಗೆ ಪ್ರಯಾಣ ಬೆಳೆಸಿದರು ಎಂದು ಕಾರ್ವಿುಕ ಇಲಾಖೆ ಅಧಿಕಾರಿ ಸುಧಾ ಗರಗ ತಿಳಿಸಿದರು.

    ಬಿಹಾರದ 116, ಉತ್ತರ ಪ್ರದೇಶದ 193, ರಾಜಸ್ಥಾನ 24, ಜಾರ್ಖಂಡ್ 56, ಒರಿಸ್ಸಾ 49, ಪಶ್ಚಿಮ ಬಂಗಾಳ 16, ಆಂಧ್ರಪ್ರದೇಶದ 12 ಜನ ವಲಸೆ ಕಾರ್ವಿುಕರ ವಿವರಗಳನ್ನು ಸೇವಾಸಿಂಧು ತಂತ್ರಾಂಶದಲ್ಲಿ ದಾಖಲಿಸಿ ಅವರನ್ನು ಕಳಿಸಲಾಯಿತು.

    ಲಾಕ್​ಡೌನ್ ಜಾರಿಯಿಂದ ವಲಸೆ ಕಾರ್ವಿುಕರು ಸಂಕಷ್ಟಕ್ಕೆ ಸಿಲುಕಿದ್ದರು. ಅಂತರ ರಾಜ್ಯ ವಲಸೆ ಕಾರ್ವಿುಕರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರದ ಆದೇಶದನ್ವಯ ಜಿಲ್ಲೆಯಲ್ಲಿ ಕಾರ್ವಿುಕ ಇಲಾಖೆ ಗುರುತಿಸಿದ್ದ 629 ವಲಸೆ ಕಾರ್ವಿುಕರಿಗೆ ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗಿತ್ತು ಎಂದರು.

    ಜಿಲ್ಲೆಯ ಕಟ್ಟಡ, ಇತರ ನಿರ್ಮಾಣ ಕಾರ್ವಿುಕರು ಮತ್ತು ಅಸಂಘಟಿತ ವಲಯದ ಕಾರ್ವಿುಕರಿಗೆ ಅವರ ಸುರಕ್ಷತೆಗಾಗಿ ರೆಡ್​ಕ್ರಾಸ್ ಸಂಸ್ಥೆಯ ವತಿಯಿಂದ ಮಾಸ್ಕ್, ಸೋಪ್ ಮತ್ತು ಸ್ಯಾನಿಟೈಸರ್ ವಿತರಿಸಲಾಯಿತು ಎಂದು ಹೇಳಿದರು.

    ಕಾರ್ವಿುಕರ ಆರೋಗ್ಯದ ದೃಷ್ಟಿಯಿಂದ ಕಾರ್ವಿುಕರನ್ನು ನಿಯಮಿತವಾಗಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಯಿತು. ಅಲ್ಲದೆ, ಇಲಾಖೆಯ ಸಹಾಯವಾಣಿಯಲ್ಲಿ ಆಹಾರ ಧಾನ್ಯ ಪೂರೈಕೆಯ ಕೋರಿಕೆ ಬಂದ ಸಂದರ್ಭದಲ್ಲಿ ಅಗತ್ಯ ಆಹಾರ ಧಾನ್ಯಗಳನ್ನು ವಿತರಿಸಲಾಗಿದೆ ಎಂದರು.

    ಜಿಲ್ಲೆಯಲ್ಲಿ ಒಟ್ಟು 25,080 ನೋಂದಾಯಿತ ಕಟ್ಟಡ ಕಾರ್ವಿುಕರಿದ್ದು, ರಾಜ್ಯ ಕಲ್ಯಾಣ ಕಾರ್ವಿುಕ ಮಂಡಳಿಯಿಂದ 16,639 ಕಾರ್ವಿುಕರಿಗೆ ತಲಾ 5 ಸಾವಿರ ರೂ. ಪರಿಹಾರ ಧನವನ್ನು ಅವರ ಖಾತೆಗಳಿಗೆ ನೇರವಾಗಿ ಜಮೆ ಮಾಡಲಾಗಿದೆ. ಉಳಿದ ಫಲಾನುಭವಿಗಳ ಖಾತೆಗೆ ಪರಿಹಾರ ಜಮೆ ಮಾಡುವ ಪ್ರಕ್ರಿಯೆ ನಡೆದಿದೆ ಎಂದು ಕಾರ್ವಿುಕ ಅಧಿಕಾರಿ ಸುಧಾ ಗರಗ ವಿವರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts