More

    ವೈದ್ಯ, ಸಿಬ್ಬಂದಿ ಸೇವೆ ಪ್ರಶಂಸನೀಯ

    ಚಿಕ್ಕೋಡಿ: ಜೊಲ್ಲೆ ಚ್ಯಾರಿಟಿ ಫೌಂಡೇಶನ್ ಸಹಯೋಗದಲ್ಲಿ ಯಡೂರ ದೇವಸ್ಥಾನ ಕಲ್ಯಾಣ ಮಂಟಪದಲ್ಲಿ ಆರಂಭಿಸಲಾಗಿದ್ದ ಕೋವಿಡ್ ಕೇರ್‌ನ 25 ಜನರು ಕರೊನಾದಿಂದ ಗುಣಮುಖರಾಗಿದ್ದು ಸಂತಸ ತಂದಿದೆ ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

    ತಾಲೂಕಿನ ಯಡೂರ ಗ್ರಾಮದ ವೀರಭದ್ರೇಶ್ವರ ದೇವಸ್ಥಾನ ಆವರಣದಲ್ಲಿ ವೈದ್ಯರು ಹಾಗೂ ಕೋವಿಡ್ ಕೇರ್ ಕೇಂದ್ರದ ಸಿಬ್ಬಂದಿಗೆ ಭಾನುವಾರ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

    ಯಡೂರು ಸುತ್ತಲಿನ ಗ್ರಾಮದ ಕರೊನಾ ಸೋಂಕಿತರ ಅನುಕೂಲಕ್ಕೆ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರು ಸ್ವಂತ ಖರ್ಚಿನಲ್ಲಿ ಚಾರಿಟೇಬಲ್ ಸಂಸ್ಥೆಯ ಮೂಲಕ ಕೋವಿಡ್ ಕೇರ್ ಸೆಂಟರ್ ಆರಂಭಿಸಿದ್ದಾರೆ. ಇಲ್ಲಿ ವೈದ್ಯರು ಮತ್ತು ಸಿಬ್ಬಂದಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ಅವರ ಆರೋಗ್ಯ ಸೇವೆ ಪ್ರಸಂಶನೀಯ ಎಂದರು.

    ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಶ್ರೀಶೈಲ ಜಗದ್ಗುರುಗಳು ಕೋವಿಡ್ ಕೇರ್ ಸೆಂಟರ್ ಆರಂಭಿಸಲು ಕಲ್ಯಾಣ ಮಂಟಪ ವ್ಯವಸ್ಥೆ ಮಾಡಿಕೊಟ್ಟು ರೋಗಿಗಳ ಸೇವೆಗೆ ಕೈ ಜೊಡಿಸಿದ್ದಾರೆ ಎಂದರು. ಗ್ರಾಪಂ ಸದಸ್ಯ ಅಜಯ ಸೂರ್ಯವಂಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಪಂ ಉಪಾಧ್ಯಕ್ಷ ರಾಹುಲ ದೇಸಾಯಿ, ಸದಸ್ಯರಾದ ಅಮಿತ ಪಾಟೀಲ, ಮಂಜುನಾಥ ದೊಡ್ಡಮನಿ, ಪ್ರಕಾಶ ಕೋಕಣೆ, ಸಂತೋಷ ಶೇಗಣೆ, ಅಮರ ಬೋರಗಾಂವೆ, ನವನಾಥ ಚವ್ಹಾಣ, ವಿಕ್ರಾಂತ ದೇಸಾಯಿ, ವಿಕಾಸ ಪಾಟೀಲ, ಸತೀಶ ಪುಠಾಣಿ, ಡಾ. ಭೋಲೆ, ಡಾ. ರಾಜೇಂದ್ರ ಸಲಗರೆ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts