More

    ವೈದ್ಯ ವೃತ್ತಿ ಸಮಾಜ ಸೇವೆಯಾಗಲಿ


    ಯಾದಗಿರಿ: ಮನುಷ್ಯನ ಆರೋಗ್ಯ ಹದಗೆಟ್ಟರೆ ಆತ ಮೊದಲು ವೈದ್ಯರ ರೂಪದಲ್ಲಿ ದೇವರನ್ನು ಕಾಣುತ್ತಾನೆ. ತನಗಿರುವ ವ್ಯಾಧಿ ಗುಣಪಡಿಸಲು ಕೈ ಮುಗಿಯುತ್ತಾನೆ ಎಂದು ಅಬ್ಬೆತುಮಕೂರು ವಿಶ್ವಾರಾಧ್ಯ ಮಠದ ಪೀಠಾಧಿಪತಿ ಡಾ.ಗಂಗಾಧರ ಸ್ವಾಮಿಗಳು ನುಡಿದರು.

    ಭಾನುವಾರ ನಗರದ ಜೆಸ್ಕಾಂ ಕಚೇರಿ ಸಮೀಪದಲ್ಲಿನ ಯಲ್ಹೇರಿ ಕಾಂಪ್ಲೆಕ್ಸ್ನಲ್ಲಿ ಆರಂಭಿಸಿದ ನಿರ್ಮಲಾದೇವಿ ನೂತನ ಡೈಗ್ನೋಸ್ಟಿಕ್( ಎಂಆರ್ಐ ಸ್ಕ್ಯಾನ್ )ನ್ನು ಲೋಕಾರ್ಪಣೆಗೊಳಿಸಿ ಆಶಿರ್ವಚನ ನೀಡಿ, ವೈದ್ಯ ವೃತ್ತಿ ಅತ್ಯಂತ ಪವಿತ್ರವಾದದ್ದು. ಅದನ್ನು ಉದ್ಯಮವಾಗಿ ಮಾಡಿಕೊಳ್ಳದೆ ಸಮಾಜ ಸೇವೆಯನ್ನಾಗಿ ಮಾಡಿದರೆ, ಜನರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಸುತ್ತಾರೆ ಎಂದರು.

    ಜಿಲ್ಲಾಕೇಂದ್ರವಾದ ಯಾದಗಿರಿಯಲ್ಲಿ ಈ ಹಿಂದೆ ಅಷ್ಟೊಂದು ಪ್ರಮಾಣದಲ್ಲಿ ವೈದ್ಯಕೀಯ ಸೇವೆಗಳು ಸಿಗುತ್ತಿರಲಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಯುವ ವೈದ್ಯರು ಹೊಸಹೊಸ ಪ್ರಯೋಗದೊಂದಿಗೆ ಸಾಹಸಕ್ಕೆ ಮುಂದಾಗಿರುವುದು ಉತ್ತಮ ಬೆಳವಣಿಗೆ. ಎಂಆರ್ಐ ಸ್ಕ್ಯಾನ್ಗಾಗಿ ಈ ಹಿಂದೆ ದೂರದ ವಿಜಯಪುರ, ಸೊಲ್ಲಾಪುರ, ಕಲಬುರಗಿಗೆ ತೆರಳುವ ಅನಿವಾರ್ಯತೆ ಇತ್ತು. ಆದರೆ, ನಿರ್ಮಲಾದೇವಿ ನೂತನ ಡೈಗ್ನೋಸ್ಟಿಕ್ ಈ ಕೊರತೆಯನ್ನು ನೀಗಿಸಿದೆ ಎಂದು ಹೇಳಿದರು.

    ಡಾ.ಶರಣಬಸವ ಯಲ್ಹೇರಿ ಅವರ ಕೈಗುಣ ಅದ್ಭುತವಾಗಿದೆ. ಅವರು ವೈದ್ಯ ವೃತ್ತಿ ಆರಂಭಿಸಿದ ಕೆಲವೇ ದಿನಗಳಲ್ಲಿ ಜನಪ್ರಿಯರಾಗಿದ್ದಾರೆ ಎಂದು ಶ್ಲಾಘಿಸಿದರು.

    ಶರಣುಬಸವ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಅದ್ಯಕ್ಷ ಡಾ.ವೀರಭದ್ರಪ್ಪ ಯಲ್ಹೇರಿ, ವೈದ್ಯ ಡಾ.ಶರಣಬಸವ ಯಲ್ಹೇರಿ, ವಾರಣಾಸಿ, ಯಲ್ಹೇರಿ, ಮಠದ ಸ್ವಾಮಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts