More

    ವೈದ್ಯರ ಸೇವೆ ಸ್ಮರಣೀಯ

    ಗಜೇಂದ್ರಗಡ, ಬಾಗಮಾರ ಸೇವಾ ಸಮಿತಿ, ಅಶೋಕ ಬಾಗಮಾರ, ಮನವಿ, Gajendragada, Bagamara Service Committee, Ashoka Bagamara, petition,

    ಗಜೇಂದ್ರಗಡ: ವೈದ್ಯರು ಯಾವುದೇ ಸನ್ನಿವೇಶದಲ್ಲೂ ತಮ್ಮ ನೈತಿಕತೆ ಹಾಗೂ ಮಾನವೀಯ ಮೌಲ್ಯಗಳಿಂದ ಹಿಂದೆ ಸರಿಯಬಾರದು ಎಂದು ಬಾಗಮಾರ ಸೇವಾ ಸಮಿತಿ ಅಧ್ಯಕ್ಷ ಅಶೋಕ ಬಾಗಮಾರ ಹೇಳಿದರು.

    ಪಟ್ಟಣದ ಬಾಗಮಾರ ಸೇವಾ ಸಮಿತಿ ಹಾಗೂ ಭಗವಾನ್ ಮಹಾವೀರ ಆಯುರ್ವೆದಿಕ್ ಕಾಲೇಜ್ ವತಿಯಿಂದ ವೈದ್ಯರ ದಿನಾಚರಣೆ ನಿಮಿತ್ತ ಬುಧವಾರ ಪಟ್ಟಣದ ಸರ್ಕಾರಿ ಆಸ್ಪತ್ರೆಯ ವೈದ್ಯರು, ಆರೋಗ್ಯ ಕಾರ್ಯಕರ್ತರು ಮತ್ತು ಸ್ಟಾಫ್ ನರ್ಸ್​ಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.

    ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ವೈದ್ಯರ ಸೇವೆಯನ್ನು ನಾವೆಲ್ಲರೂ ಸ್ಮರಿಸಬೇಕು. ಸರ್ಕಾರದ ಮಾರ್ಗಸೂಚಿಗಳನ್ನು ಎಲ್ಲರೂ ತಪ್ಪದೇ ಪಾಲಿಸಬೇಕು ಎಂದರು.

    ಸಂಸ್ಥೆಯ ಕಾರ್ಯದರ್ಶಿ ಅಜೀತ ಬಾಗಮಾರ ಮಾತನಾಡಿ, ಜಗತ್ತಿಗೆ ಕಂಟಕವಾಗಿ ಕಾಡುತ್ತಿರುವ ಮಹಾಮಾರಿ ಕರೊನಾ ಎದುರಿಸಲು ಹತ್ತಾರು ಮಾರ್ಗಸೂಚಿಗಳನ್ನು ಸರ್ಕಾರಗಳು ಈಗಾಗಲೇ ಜಾರಿಗೆ ತಂದಿವೆ. ಆದರೆ, ಕರೊನಾ ಸಂಕಷ್ಟ ಸಂದರ್ಭದಲ್ಲಿಯೂ ಸಹ ವೈದ್ಯರ ಮೇಲೆ ಹಲ್ಲೆ ಘಟನೆ ನಡೆಯುತ್ತಿರುವುದು ನಿಜಕ್ಕೂ ಆಘಾತಕಾರಿ. ಸಮಾಜದ ರಕ್ಷಕರಾಗಿರುವ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯ ರಕ್ಷಣೆ ನಮ್ಮೆಲ್ಲರ ಕರ್ತವ್ಯ ಎಂದರು.

    ಪ್ರಾಚಾರ್ಯ ಡಾ. ಕೆ.ಎಸ್. ಬೆಲ್ಲದ, ಡಾ. ಸಿ.ಬಿ. ಇನಾಮದಾರ, ಡಾ. ಕಮಲಾಕ್ಷಿ ಅಂಗಡಿ, ಡಾ. ನಮ್ರತಾ ಬಾಗಮಾರ, ಡಾ. ವೀರೇಶ ಕಂಠಿ, ಡಾ. ರವೀಂದ್ರ ನಂದಿ, ಡಾ. ಶಕುಂತಲಾ ಗಾರವಾಡ, ವರ್ಧಮಾನ ಬಾಗಮಾರ, ಸಪ್ನಾ ಬಾಗಮಾರ, ಪೂರ್ಣಿಮಾ ಬೆಲ್ಲದ, ರೇಷ್ಮಾ ಕೋಲಕಾರ, ವೃದ್ಧಿ ಬಾಗಮಾರ, ಯುವರಾಜ ಬಾಗಮಾರ, ದಕ್ಷ ಬಾಗಮಾರ, ರಮೇಶ ರಾಠೋಡ, ಭಾಗ್ಯಶ್ರೀ ನಾವಿ ಇತರರಿದ್ದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts