More

    ವೈದಿಕ ಸಂಸ್ಕೃತಿಗೆ ಹೆಚ್ಚಿನ ಮನ್ನಣೆ

    ಸಂಸ್ಕೃತಿಯ ಹೆಸರಿನಲ್ಲಿ ನೆಲಮೂಲ ಸಂಸ್ಕೃತಿಯನ್ನು ಭಿನ್ನವಾಗಿಸಿ ಅಸಾಂಸ್ಕೃತಿಕ ಎಂದು ಬಿಂಬಿಸಲಾಗುತ್ತಿದೆ ಎಂದು ಸಾಹಿತಿ, ಪತ್ರಕರ್ತ ಜಗದೀಶ್ ಕೊಪ್ಪ ಅಭಿಪ್ರಾಯಿಸಿದರು.

    ಭಾರತೀಯ ಜನಕಲಾ ಸಮಿತಿ (ಇಪ್ಟಾ) ಜಿಲ್ಲಾ ಸಮಿತಿಯ 80ನೇ ವಾರ್ಷಿಕೋತ್ಸವದ ಅಂಗವಾಗಿ ನಗರದ ರೋಟರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ‘ಸಾಂಸ್ಕೃತಿಕ ಲೋಕದ ಸಮಸ್ಯೆಗಳು ಮತ್ತು ಸವಾಲುಗಳು’ ವಿಚಾರಸಂಕಿರಣದಲ್ಲಿ ಮಾತನಾಡಿದರು.


    ಕೇವಲ ರಾವಾಂುಣ, ಮಹಾಭಾರತದಂತಹ ಪೌರಾಣಿಕ, ವೈದಿಕ ಸಂಸ್ಕೃತಿಗೆ ಹೆಚ್ಚಿನ ಮನ್ನಣೆ ದೊರೆತಿದೆ. ವೈದಿಕರ ಪೌರಾಣಿಕ ಕಲ್ಪನೆಯ ಸಾಹಿತ್ಯಕ್ಕೆ ಪರ್ಯಾಯವಾದ ದ್ರಾವಿಡ ಸಂಸ್ಕೃತಿ, ಬುಡಕಟ್ಟಿನ ಆದಿವಾಸಿಗಳ ಸಂಸ್ಕೃತಿಯು ನೆಲಮೂಲದಾಗಿದೆ ಎಂದರು.

    200 ವರ್ಷಗಳ ಇತಿಹಾಸವಿರುವ ಟಿಪ್ಪು ಸುಲ್ತಾನನ ಬಗ್ಗೆ ಇತಿಹಾಸ ತಿರುಚಿ ಪುಸ್ತಕ ಬರೆಯಲಾಗಿದೆ. ಕಪೋಲಕಲ್ಪಿತ ಉರಿಗೌಡ-ನಂಜೇಗೌಡ ವ್ಯಕ್ತಿಗಳನ್ನು ಸೃಷ್ಟಿಸಿ ನಾಟಕ ಪ್ರದರ್ಶಿಸಿರುವುದು ದುರಂತ. ಇವರು ಸಾಮಾಜಿಕ ವ್ಯವಸ್ಥೆಯನ್ನು ಎಲ್ಲಿಗೆ ಕರೆದೊಯ್ಯಲು ಯತ್ನಿಸುತ್ತಿದ್ದಾರೆ? ಈ ನಾಟಕಕ್ಕೆ ಮುನ್ನುಡಿ ಬರೆದವರು ವಿದ್ವಾಂಸರೆ, ವಿದೂಷಕರೆ ಎಂದು ಪ್ರಶ್ನಿಸಿದರು.
    ಪ್ರತಿಯೊಬ್ಬರು ಶಿಕ್ಷಣದೊಂದಿಗೆ ಕಲಾ ಪ್ರಕಾರಗಳಲ್ಲಿ ಸಕ್ರಿಯವಾಗಬೇಕು. ಮನುಷ್ಯನ ವೈಚಾರಿಕತೆ ಮತ್ತು ಸೃಜನಶೀಲತೆಯನ್ನು ವೃದ್ಧಿಸುವುದು ಕಲೆಗಳು. ಆದರೆ, ಕಲಾ ಪ್ರಕಾರಗಳ ಮೂಲಕ ಚರಿತ್ರೆ ತಿರುಚಿ ನಾಟಕ ಪ್ರದರ್ಶಿಸುವುದು ಸರಿಯಲ್ಲ ಎಂದು ಹೇಳಿದರು.

    ದೇಶಾದ್ಯಂತ ಇಪ್ಟಾ ಸಾಂಸ್ಕೃತಿಕವಾಗಿ ಜನರನ್ನು ಎಚ್ಚರಗೊಳಿಸುತ್ತಿದೆ. ಭಾರತದಲ್ಲಿ ವೈಚಾರಿಕತೆ ಸಾಹಿತ್ಯ ರೂಪ ಪಡೆದುಕೊಂಡು ಚಳವಳಿಯಾಗಿ ಹರಡಿಕೊಂಡಿದೆ. ಸ್ವಾತಂತ್ರೃ ಪೂರ್ವ ಆರಂಭವಾದ ಇಷ್ಟಾ ಮೊದಲು ಬಂಗಾಳದಲ್ಲಿ ರೂಪಿಕೊಂಡಿತು. ಇದಕ್ಕೆ ಇಸ್ಟ್ ಇಂಡಿಯಾ ಕಂಪನಿಯೇ ಕಾರಣ. ನಂತರದಲ್ಲಿ ಕೇರಳ, ತಮಿಳುನಾಡು, ಕರ್ನಾಟಕ ಹೀಗೆ ದೇಶದ ಎಲ್ಲೆಡೆ ವಿಸ್ತಾರಗೊಂಡಿತು ಎಂದರು.


    ಹಿರಿಯ ರಂಗಕರ್ಮಿ ಎಚ್.ಜನಾರ್ದನ್ (ಜನ್ನಿ) ವಾತನಾಡಿ, ಶಿಶುನಾಳ ಶರೀರು ಕನ್ನಡ ಸಾಹಿತ್ಯವನ್ನು ಉತ್ತುಂಗಕ್ಕೆ ಏರಿಸಿದರು. ಆದರೂ ಕೆಲ ದುಷ್ಟ ಮನಸ್ಸುಗಳು ಅವರನ್ನು ತೇಜೋವಧೆ ವಾಡಿದ್ದಾರೆ. ಸಾಂಸ್ಕೃತಿಕ ಮೌಲ್ಯ, ಧರ್ಮ, ಸಂಸ್ಕ ೃತಿ, ವಾನವೀಂುತೆಯನ್ನು ವಾರಾಟಕ್ಕಿಟ್ಟ ದೇಶ ಎಂದಿಗೂ ಉದ್ಧಾರವಾಗಿಲ್ಲ. ಪ್ರಸ್ತುತ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕುತ್ತು ತಂದಿದ್ದ ಕೋಮುವಾದಿಗಳಿಗೆ ರಾಜ್ಯದ ಜನತೆ ವಿಧಾನಸಭಾ ಚುನಾವಣೆಯಲ್ಲಿ ಪಾಠ ಕಲಿಸಿದ್ದಾರೆ ಎಂದರು.


    ಇಪ್ಟಾ ಎಂಬುದು ದೇಶದ ಮೂಲ ಸಂಸ್ಕೃತಿಯನ್ನು ಪ್ರತಿಪಾದಿಸಿದ ಜನಪರ ಸಾಂಸ್ಕೃತಿಕ ವೇದಿಕೆಯಾಗಿದೆ. ಜನರ ಒಳಿತು ಬಯಸುವ ಈ ಸಂಘಟನೆ ಸ್ವಾಭಿಮಾನದ ಸಂಕೇತ ಎಂದರು. ಸಿಪಿಐ ಮುಖಂಡ ಎಚ್.ಆರ್.ಶೇಷಾದ್ರಿ, ಇಷ್ಟಾ ರಾಜ್ಯಾಧ್ಯಕ್ಷ ಎಚ್.ಬಿ.ರಾಮಕೃಷ್ಣ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts