More

    ವೇತನ, ಸಾಮಗ್ರಿ ಹಣ ಬಿಡುಗಡೆಯಲ್ಲಿ ವಿಳಂಬವಿಲ್ಲ : ಸಚಿವ ಈಶ್ವರಪ್ಪ ಹೇಳಿಕೆ

    ಚಿಕ್ಕಬಳ್ಳಾಪುರ : ಕರೊನಾ ಸಂಕಷ್ಟದ ಸಂದರ್ಭದಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಮೂಲಕ ಕಾರ್ಮಿಕರಿಗೆ ಹೆಚ್ಚಿನ ಕೂಲಿ ಕೆಲಸ, ವಿವಿಧ ಅಭಿವೃದ್ಧಿ ಕಾಮಗಾರಿಗಳ ತ್ವರಿತ ನಿರ್ವಹಣೆಗೆ ಆದ್ಯತೆ ನೀಡಲಾಗಿದೆ ಎಂದು ಗಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.

    ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿ.ಪಂ, ಆರ್ಟ್ ಆ್ ಲಿವಿಂಗ್ ಸಂಸ್ಥೆ, ಎ್ಇಎಸ್ ಸಂಸ್ಥೆಯು ಮಂಗಳವಾರ ಆಯೋಜಿಸಿದ್ದ ಅಂತರ್ಜಲ ಚೇತನ ಹಾಗೂ ಬದು ನಿರ್ಮಾಣ ಮಾಸಾಚಾರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಅಧಿಕಾರಿಗಳ ಪರಿಶ್ರಮದಿಂದ ದೇಶದಲ್ಲಿ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಹಿಂದೆ ಯೋಜನೆಯಡಿ ಕೂಲಿ, ಸಾಮಗ್ರಿ ಹಣ ಬಾಕಿ ಉಳಿಸಿಕೊಳ್ಳಲಾಗಿತ್ತು. ಹೊಸದಾಗಿ ಕೆಲಸ ಪ್ರಾರಂಭಕ್ಕೆ ಹಣದ ಕೊರತೆ ಇತ್ತು. ಕೇಂದ್ರ ಸರ್ಕಾರದ 1861 ರೂ. ಅನುದಾನದಿಂದ ಹಳೇ ಬಾಕಿ ಸಂಪೂರ್ಣವಾಗಿ ಚುಕ್ತಾ ಆಗಿದ್ದು ಇದೀಗ ಜನಪ್ರತಿನಿಧಿ, ಆದಾಯ ತೆರಿಗೆ ಪಾವತಿದಾರರು ಮತ್ತು ಸರ್ಕಾರಿ ನೌಕರರನ್ನು ಹೊರತುಪಡಿಸಿ, ಯಾರೇ ಕೂಲಿ ಕೆಲಸ ಕೇಳಿದರೂ ಉದ್ಯೋಗ ನೀಡಲಾಗುತ್ತಿದೆ. ವೇತನ ಮತ್ತು ಸಾಮಗ್ರಿ ಹಣ ಬಿಡುಗಡೆಯಲ್ಲಿ ಯಾವುದೇ ಕಾರಣಕ್ಕೂ ವಿಳಂಬವಾಗುವುದಿಲ್ಲ ಎಂದರು.

    ಕಳೆದ 30 ವರ್ಷಗಳ ಹಿಂದೆ ಮಳೆ ಬಂದಾಗ ಶೇ.40 ರಷ್ಟು ನೀರು ಭೂಮಿಯೊಳಗೆ ಇಂಗುತ್ತಿತ್ತು. ಆದರೆ, ಇದೀಗ ಶೇ.5 ರಷ್ಟು ಮಾತ್ರ. ಜಲಸಂರಕ್ಷಣೆಗೆ ಆದ್ಯತೆ ಕೊಡದೇ ನಿರಂತರವಾಗಿ ಹೀರಿದ ಹಿನ್ನೆಲೆಯಲ್ಲಿ ಅಂತರ್ಜಲ ಮಟ್ಟ ಸಮಸ್ಯೆ ಉದ್ಭವವಾಗಿದ್ದು 1500 ಅಡಿ ಕೊಳವೆ ಬಾವಿ ಕೊರೆದರೂ ನೀರು ಸಿಗುತ್ತಿಲ್ಲ. ಇದಕ್ಕೆ ಮೂಲ ಕಾರಣವಾದ ತಪ್ಪನ್ನು ಸರಿಪಡಿಸುವುದೇ ಅಂತರ್ಜಲ ಚೇತನ ಯೋಜನೆಯ ಮುಖ್ಯ ಉದ್ದೇಶ ಎಂದು ತಿಳಿಸಿದರು.

    ಜಿ.ಪಂ.ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ, ಶಾಸಕ ಜೆ.ಕೆ.ಕೃಷ್ಣಾರೆಡ್ಡಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಯುಕ್ತ ಪಿ.ಅನಿರುದ್ಧ್ ಶ್ರವಣ್, ಜಿಲ್ಲಾಧಿಕಾರಿ ಆರ್.ಲತಾ, ಸಿಇಒ ಬಿ.ೌಜೀಯಾ ತರನ್ನಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೆ.ಕೆ ಮಿಥುನ್ ಕುಮಾರ್ ಮತ್ತಿತರರು ಇದ್ದರು.

    ನಮ್ಮ ಹತ್ತಿರ ಬರ‌್ರಿ : ಆಪರೇಷನ್ ಕಮಲಕ್ಕೆ ಎಡೆ ಮಾಡಿಕೊಡುವ ರೀತಿಯಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಪರೋಕ್ಷವಾಗಿ ಚಿಂತಾಮಣಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಅವರನ್ನು ಆಹ್ವಾನಿಸುವ ಮೂಲಕ ಗಮನ ಸೆಳೆದರು. ನೀವು ನಮ್ಮಿಂದ ದೂರ ಇರಬೇಡಿ. ನಮ್ಮ ಹತ್ತಿರ ಬನ್ನಿ, ನಿಮಗೆ ಒಳ್ಳೆಯ ಮಾತನ್ನು ಹೇಳುತ್ತಿದ್ದು ಈಗಾಗಲೇ ನಿಮ್ಮೊಂದಿಗೆ ಚರ್ಚಿಸಿದ್ದೇನೆ ಎಂದು ಬಹಿರಂಗವಾಗಿಯೇ ಸಚಿವರು ಹೇಳಿದರು. ಇದಕ್ಕೆ ಶಾಸಕರು ಯಾವುದೇ ರೀತಿಯಲ್ಲಿ ಪ್ರತಿಕ್ರಿಯಿಸದೇ ಮೌನದಿಂದಲೇ ಕುಳಿತುಕೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts