More

    ವೇಣುಗೋಪಾಲಸ್ವಾಮಿ ಬ್ರಹ್ಮರಥೋತ್ಸವ ಸಂಪನ್ನ; ದೇವನಹಳ್ಳಿಯಲ್ಲಿ ಅದ್ದೂರಿ ಆಚರಣೆ> ಗೋವಿಂದ ನಾಮಸ್ಮರಣೆಯಲ್ಲಿ ಮಿಂದೆದ್ದ ಭಕ್ತರು

    ದೇವನಹಳ್ಳಿ: ದೇವನಹಳ್ಳಿಯಲ್ಲಿ ಶ್ರೀ ವೇಣುಗೋಪಾಲಸ್ವಾಮಿ ಬ್ರಹ್ಮರಥೋತ್ಸವ ಸೋಮವಾರ ಅದ್ದೂರಿಯಾಗಿ ನೆರವೇರಿತು. ಕೋಟೆಯಲ್ಲಿರುವ ಗರ್ಭಗುಡಿ ಮೂರ್ತಿಗೆ ನವರತ್ನ ಖಚಿತ ಚಿನ್ನಾಭರಣದಿಂದ ವಿಶೇಷ ಅಲಂಕಾರ ಮಾಡಲಾಗಿತ್ತು.

    ಶಾಸಕ ನಿಸರ್ಗ ನಾರಾಯಣಸ್ವಾಮಿ ರಥೋತ್ಸವಕ್ಕೆ ಚಾಲನೆ ನೀಡಿದರೆ, ತಹಸೀಲ್ದಾರ್ ಅಜಿತ್‌ರೈ ವಿಶೇಷ ಪೂಜೆ ಸಲ್ಲಿಸಿದರು. ಸಾವಿರಾರು ಭಕ್ತರು ಗೋವಿಂದ ಗೋವಿಂದ, ಹರೇಕೃಷ್ಣ ಕೃಷ್ಣಕೃಷ್ಣ ಹರೇಹರೇ ಎಂಬ ನಾಮಸ್ಮರಣೆಯೊಂದಿಗೆ ದೇವಾಲಯದಿಂದ ಗಾಂಧಿ ಚೌಕದವರೆಗೂ ತೇರು ಎಳೆದರು. ದವನ ಚುಚ್ಚಿರುವ ಬಾಳೆಯನ್ನು ತೇರಿಗೆ ಎಸೆದು ಇಷ್ಟಾರ್ಥ ಸಿದ್ದಿಗೆ ಪ್ರಾರ್ಥಿಸಿದರು. ದೊಡ್ಡಿ ಅಪ್ಪಯಣ್ಣನ ಛತ್ರದಲ್ಲಿ ವೇಣುಗೋಪಾಲಸ್ವಾಮಿ ಅನ್ನದಾನ ಸಮಿತಿಯಿಂದ ಅನ್ನಸಂತರ್ಪಣೆ ನಡೆಯಿತು.

    ಮಾಜಿ ಶಾಸಕ ಜಿ.ಚಂದ್ರಣ್ಣ, ಉಪತಹಸೀಲ್ದಾರ್ ಪಿ.ಗಂಗಾಧರ್, ಬಯಪ ಮಾಜಿ ಅಧ್ಯಕ್ಷ ಸಿ.ಅಶ್ವತ್ಥನಾರಾಯಣ್, ಪುರಸಭೆ ಮಾಜಿ ಅಧ್ಯಕ್ಷ ಸಿ.ಜಗನ್ನಾಥ್, ಪುರಸಭಾ ಸದಸ್ಯ ವೈ.ಸಿ.ಸತೀಶ್ ಮತ್ತಿತರರಿದ್ದರು.

    ಇಂದು ಹಗಲು ಪರಿಷೆ: ಫೆ.11 ರ ಮಂಗಳವಾರ ಹಗಲುಪರಿಷೆ ನಡೆಯಲಿದ್ದು, ಎತ್ತುಗಳಿಗೆ ಸಿಂಗಾರ ಮಾಡಿ ಬಂಡಿಗೆ ಅಲಂಕರಿಸಿ ದಾಸಯ್ಯನವರ ಹಲಗುಸೇವೆ ಮೂಲಕ ಪಾನಕ ಮಜ್ಜಿಗೆ ಹೆಸರುಬೇಳೆ ವಿತರಣೆ ನಡೆಯಲಿದೆ.

    ಮರಳುಬಾಗಿಲಿನ ರಂಗನಾಥಸ್ವಾಮಿ ದೇವಾಲಯದ ಅನ್ನದಾನ ಸಮಿತಿಯಿಂದ ಅನ್ನಸಂತರ್ಪಣೆ, ಜೆಸಿಐನಿಂದ ಮಜ್ಜಿಗೆ, ಪಾನಕ ವಿತರಣೆ ನಡೆಯಲಿದೆ. ಪ್ರಧಾನ ಅರ್ಚಕ ಸೇತು ಕಣ್ಣಭಟ್ ದೇವಾಲಯ ನಿರ್ವಹಣಾ ಸಮಿತಿಯ ಸಿ.ಜಗನ್ನಾಥ್, ಎ.ಎನ್.ವಸಂತಬಾಬು, ಅನ್ನದಾನ ಸಮಿತಿ ಮುಖಂಡರು, ಉಪತಹಸೀಲ್ದಾರ್ ಪಿ.ಗಂಗಾಧರ್, ಸಿ.ಭಾಸ್ಕರ್, ಪುರಸಭಾ ಮುಖ್ಯಾಧಿಕಾರಿ ಎಚ್.ಸಿ. ಹನುಮಂತೇಗೌಡ ಭಾಗವಹಿಸಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts