More

    ವೆಂಕಟರಮಣನ ಸನ್ನಿಧಿಯಲ್ಲಿ ಗಾನ ಸೇವೆ

    ಶಿರಸಿ: ತಾಲೂಕಿನ ಪ್ರಸಿದ್ಧ ಕ್ಷೇತ್ರ ಮಂಜಗುಣಿಯ ವೆಂಕಟರಮಣ ದೇವಸ್ಥಾನದಲ್ಲಿ ಸೇವಾ ರೂಪದಲ್ಲಿ ಮುಂಜಾನೆಯಿಂದ ತಡರಾತ್ರಿವರೆಗೂ ಖ್ಯಾತನಾಮ ಕಲಾವಿದರಿಂದ ಇತ್ತೀಚೆಗೆ ಶಾಸ್ತ್ರೀಯ ಸಂಗೀತ ಸೇವೆ ನಡೆಯಿತು. ಅಂತಾರಾಷ್ಟ್ರೀಯ ಖ್ಯಾತಿಯ ಪಂ. ಜಯತೀರ್ಥ ಮೇವುಂಡಿ ಗಾಯನ ಪ್ರೇಕ್ಷಕರನ್ನು ರಂಜಿಸಿತು.

    ಯುವ ಪ್ರತಿಭೆ ಶ್ರೀಲಕ್ಷ್ಮಿ ಹೆಗಡೆ ಸಂಗೀತ ಕಚೇರಿ ನಡೆಸಿಕೊಟ್ಟರು. ಅವರಿಗೆ ತಬಲಾದಲ್ಲಿ ಗಣೇಶ ಗುಂಡ್ಕಲ್, ಹಾಮೋನಿಯಂನಲ್ಲಿ ಅಜೇಯ ಹೆಗಡೆ ವರ್ಗಾಸರ ಸಾಥ್ ನೀಡಿದರು. ನಂತರ ಸತೀಶ ಭಟ್ಟ ಹೆಗ್ಗಾರ್ ಹಾಮೋನಿಯಂ ಸೋಲೋ ನಡೆಸಿದರೆ ತಬಲಾದಲ್ಲಿ ಗುರುರಾಜ ಹೆಗಡೆ ಆಡುಕಳ ಸಾಥ್ ನೀಡಿದರು.

    ಸಂಗೀತ ಸೇವೆಗಾಗಿ ಆಗಮಿಸಿದ್ದ ಧಾರವಾಡದ ಡಾ. ಶ್ರೀಧರ ಕುಲಕರ್ಣಿ ಹಾಗೂ ಶೃತಿ ಕುಲ್ಕರ್ಣಿ ದಂಪತಿ ತಮ್ಮ ಗಾನ ಸೇವೆ ನೀಡಿದರು. ಅವರಿಗೆ ಹಾಮೋನಿಯಂನಲ್ಲಿ ಭರತ ಹೆಗಡೆ ಹೆಬ್ಬಲಸು, ತಬಲಾದ ಅಕ್ಷಯ ಜೋಶಿ ಸಾಥ್ ನೀಡಿದರು. ಗಣಪತಿ ಹೆಗಡೆ ಮುರೂರು ಗಾನ ಸೇವೆ ಸಲ್ಲಿಸಿದರು. ಗಾಯಕ ವಿನಾಯಕ ಹೆಗಡೆ ಹಿರೇಹದ್ದ ಅವರು ರಾಮ ಭಜನೆಗಳನ್ನು ಹಾಡಿದರು.

    ಹುಬ್ಬಳ್ಳಿಯ ಬಸವರಾಜ ವೊಂದಲಿ ಹಾಗೂ ಸುಜಯೀಂದ್ರ ಕುಲಕರ್ಣಿ ಅವರು ದಾಸರ ಪದಗಳನ್ನು ಭಕ್ತಿಯಿಂದ ಹಾಡಿ ಸೇವೆ ಸಮರ್ಪಿಸಿದರು. ಗಾಯಕಿ ವಾಣಿ ರಮೇಶ ಅವರು ರಾಗ್ ಶುದ್ಧ ಸಾರಂಗ್​ನ್ನು ಪ್ರಸ್ತುತಪಡಿಸಿದರು. ಮುಂಜಾನೆಯಿಂದ ಆರಂಭಗೊಂಡ ನಾದಾಮೃತ ಸಂಗೀತ ಕಾರ್ಯಕ್ರಮದಲ್ಲಿ ಕೊನೆಯ ಭಾಗವಾಗಿ ಅಂತಾರಾಷ್ಟ್ರೀಯ ಖ್ಯಾತಿಯ ಜಯತೀರ್ಥ ಮೇವುಂಡಿಯವರು ಎರಡುವರೆ ತಾಸುಗಳಿಗೂ ಹೆಚ್ಚುಕಾಲ ತಮ್ಮ ಕಚೇರಿ ನಡೆಸಿಕೊಟ್ಟರು.

    ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭತೀರ್ಥ ಸ್ವಾಮೀಜಿ ಸಾನ್ನಿಧ್ಯ ನೀಡಿ ಹರಸಿದರು. ಹುಬ್ಬಳ್ಳಿಯ ಸ್ವರ ತೀರ್ಥ ಟ್ರಸ್ಟ್ ವತಿಯಿಂದ ನಡೆದ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ದೇವಾಲಯದ ಪ್ರಧಾನ ಅರ್ಚಕ ಶ್ರೀನಿವಾಸ ಭಟ್ಟ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts