More

    ವೃಷಭ ವಾಹನ ಅಲಂಕಾರದಲ್ಲಿ ಶ್ರೀ ಶಾರದೆ

    ಶೃಂಗೇರಿ: ಶೃಂಗೇರಿ ಶ್ರೀ ಶಾರದೆ ಬುಧವಾರ ವೃಷಭ ವಾಹನ ಅಲಂಕಾರದಲ್ಲಿ ಕಂಗೊಳಿಸಿ ಭಕ್ತರ ಪಾಲಿಗೆ ನೆಚ್ಚಿನ ಮಹೇಶ್ವರಿಯಾದಳು. ಆದಿಶಕ್ತಿಯು ಮಹೇಶ್ವರನ ಅರ್ಧಾಂಗಿಯಾಗಿ, ತ್ರಿಶೂಲ ಹಿಡಿದು, ಚಂದ್ರರೇಖಾ ವಿಭೂಷಿತಳಾಗಿ, ವೃಷಭ ವಾಹನಾರೂಢಳಾದ ಜಗನ್ಮಾತೆಯನ್ನು ಭಕ್ತರು ಕಣ್ತುಂಬಿಕೊಂಡರು. ಶರನ್ನವರಾತ್ರಿ ಸಂದರ್ಭದಲ್ಲಿ ಜಗನ್ಮಾತೆಯನ್ನು ಮುತ್ತು, ಪಚ್ಚೆ, ವಜ್ರಗಳಿಂದ ಮಾಡಿದ ಅಮೂಲ್ಯವಾದ, ನಯನಮನೋಹರವಾದ ಆಭರಣಗಳಿಂದ ಅಲಂಕರಿಸಲಾಗುತ್ತದೆ.

    ಮಠದಲ್ಲಿ ನವರಾತ್ರಿಯಲ್ಲಿ ಋಗ್ವೇದ, ಯಜುರ್ವೆದ, ಸಾಮವೇದ, ಅಥರ್ವಣ ವೇದಗಳ ಪಾರಾಯಣ, ವಾಲ್ಮೀಕಿ ಪಾರಾಯಣ,ದೇವೀಭಾಗವತ, ಶ್ರೀಮದ್ಭಾಗವತ, ಮಾಧವೀಯ ಶಂಕರ ದಿಗ್ವಿಜಯ, ಸೂತಸಂಹಿತೆ, ಪ್ರಸ್ಥಾನತ್ರಯಭಾಷ್ಯ ಪಾರಾಯಣಗಳು ನೆರವೇರಲಿದ್ದು ಋತ್ವಿಜರು ಶ್ರೀ ಸೂಕ್ತಜಪ, ಭುವನೇಶ್ವರಿ, ದುರ್ಗಾ ಜಪ ಇತ್ಯಾದಿ ಜಪಗಳನ್ನು ಪಠಿಸುತ್ತಾರೆ. ಸುವಾಸಿನೀ ಮತ್ತು ಕುಮಾರೀಪೂಜೆ ಪ್ರತಿನಿತ್ಯ ನಡೆಯಲಿದೆ. ಉಭಯಶ್ರೀಗಳು ಶಾರದೆಗೆ ವಿಶೇಷಪೂಜೆ ಸಲ್ಲಿಸುತ್ತಾರೆ.

    ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಂಗಳೂರಿನ ವಿದುಷಿ ಲಲಿತಾ ಮತ್ತು ಸಂಗಡಿಗರಿಂದ ಶಾಸ್ತ್ರೀಯ ಸಂಗೀತ ನಡೆಯಿತು. ಬೀದಿ ಉತ್ಸವದಲ್ಲಿ ಪಪಂ ವ್ಯಾಪ್ತಿಯ ಶ್ರೀ ಪತಂಜಲಿ ಯೋಗಶಿಕ್ಷಣ ಸಂಸ್ಥೆ, ಶ್ರೀರಾಮಸೇವಾ ಸಮಿತಿ, ಕೆರೆ ಆಂಜನೇಯ ಮತ್ತು ಚಪ್ಪರದ ಆಂಜನೇಯ ಭಜನಾ ಮಂಡಳಿ, ಶಾರದಾ ಶಂಕರ ಭಜನಾ ಮಂಡಳಿ, ಹೆಬ್ಬಾಗಿಲು ವೆಂಕಟರಮಣಸ್ವಾಮಿ ಭಜನಾ ಮಂಡಳಿ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗಿಯಾದರು. ದರ್ಬಾರಿನಲ್ಲಿ ಜಗದ್ಗುರು ಶ್ರೀ ವಿಧುಶೇಖರಸ್ವಾಮೀಜಿ ಸಾನ್ನಿಧ್ಯದಲ್ಲಿ ಒಳಪ್ರಾಂಗಣದ ಶ್ರೀಶಾರದೆ ರಥೋತ್ಸವ ನೆರವೇರಿತು. ನಾಲ್ಕು ವೇದಗಳು, ಪಂಚಾಂಗ ಶ್ರವಣ, ಸಂಗೀತಸೇವೆ, ಅಷ್ಟವಧಾನ ಸೇವೆ, ಮಹಾಮಂಗಳಾರತಿ ನೆರವೇರಿದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts