More

    ಭುವನೇಶ್ವರಿ ಪುತ್ಥಳಿ ಸ್ಥಾಪನೆಗೆ ಭೂಮಿ ಪೂಜೆ

    ಕಡೂರು: ಕನ್ನಡ ನಾಡು ನುಡಿ ಅಸ್ಮಿತೆಯನ್ನು ಉಳಿಸಿಕೊಂಡು ಬೆಳೆಸಬೇಕಾದ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಹೇಳಿದರು.
    ಪಟ್ಟಣದ ಕೆ.ಎಂ.ರಸ್ತೆಯ ಗಣಪತಿ ಪೆಂಡಾಲ್ ಸಮೀಪ ಬುಧವಾರ ಕನ್ನಡ ಭುವನೇಶ್ವರಿ ಪುತ್ಥಳಿ ಸ್ಥಾಪನೆಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಕನ್ನಡ ನಾಡು ನುಡಿ ಬಗ್ಗೆ ಪರಿಷತ್ತು ಮಾಡುತ್ತಿರುವ ಕಾರ್ಯ ಶ್ಲಾಘನೀಯ. ಕಡೂರು ಪಟ್ಟಣದಲ್ಲಿ ಭುವನೇಶ್ವರಿ ಪ್ರತಿಮೆ ಸ್ಥಾಪನೆಯಾಗುತ್ತಿರುವುದು ನಮ್ಮ ತಾಯಿ ಭಾಷೆ ಮೇಲಿನ ಅಭಿಮಾನ ಸದಾ ಜಾಗೃತವಾಗಿರಲು ಪೂರಕವಾಗಿದೆ. ಎಲ್ಲಾ ಜನಪ್ರತಿನಿಧಿಗಳು ಈ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ ಎಂದರು.
    ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ರಾಜ್ಯದಲ್ಲಿಯೇ ಪ್ರಥಮವಾಗಿ ಪರಿಷತ್‌ನ ಮೂಲಕ ಕನ್ನಡ ತಾಯಿ ಪುತ್ಥಳಿ ಸ್ಥಾಪಿಸುತ್ತಿರುವುದು ಸಂತಸ ತಂದಿದೆ. ನಾಡು ನುಡಿಯ ಸೇವೆಯಲ್ಲಿ ಪರಿಷತ್‌ನ ಮೂಲಕ ನಿರಂತರವಾಗಿ ತೊಡಗಿಸಿಕೊಳ್ಳಲಾಗುವುದು ಎಂದು ತಿಳಿಸಿದರು.
    ಪುರಸಭೆ ಸದಸ್ಯರಾದ ಮರಗುದ್ದಿ ಮನು, ಶ್ರೀಕಾಂತ್, ಕಸಾಪ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸವಿತಾ ಸತ್ಯನಾರಾಯಣ್, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಲತಾ ರಾಜಶೇಖರ್, ಸಂಚಾಲಕಿ ಪದ್ಮಾವತಿ ಸೂರಿ ಶ್ರೀನಿವಾಸ್, ಕಸಾಪ ತಾಲೂಕು ಅಧ್ಯಕ್ಷ ಸಿಂಗಟಗೆರೆ ಸಿದ್ಧಪ್ಪ, ಗೌರವ ಕಾರ್ಯದರ್ಶಿ ಕುಪ್ಪಾಳು ಶಾಂತಮೂರ್ತಿ, ಬಿ.ಚಂದ್ರಶೇಖರ್, ಗೌರವಾಧ್ಯಕ್ಷ ಆರ್.ಜಿ.ಕೃಷ್ಣಸ್ವಾಮಿ, ಬುಕ್ಕಸಾಗರ ರಾಜಶೇಖರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts