More

    ವೃಷಭಾವತಿ ನದಿಯಿಂದ 68 ಕೆರೆಗಳಿಗೆ ಶೀಘ್ರ ನೀರು, ಶಾಸಕ ಕೆ. ಶ್ರೀನಿವಾಸಮೂರ್ತಿ ಮಾಹಿತಿ ಹಳೇನಿಜಗಲ್ ಕೆರೆಗೆ ಬಾಗಿನ ಅರ್ಪಣೆ

    ದಾಬಸ್‌ಪೇಟೆ: ನೆಲಮಂಗಲ ವಿಧಾನಸಭಾ ಕ್ಷೇತ್ರ ಬಯಲು ಸೀಮೆಯಾಗಿದ್ದು, ನೀರಿನ ಕೊರತೆ ಇರುವುದರಿಂದ ಮುಂದಿನ ದಿನಗಳಲ್ಲಿ ವೃಷಭಾವತಿ ಮತ್ತು ಎತ್ತಿನಹೊಳೆ ಯೋಜನೆಯಡಿ ತಾಲೂಕಿಗೆ ನೀರು ಹರಿಸುವ ಗುರಿ ಹೊಂದಿದ್ದೇವೆ ಎಂದು ಶಾಸಕ ಕೆ.ಶ್ರೀನಿವಾಸಮೂರ್ತಿ ತಿಳಿಸಿದರು.

    ಸೋಂಪುರ ಹೋಬಳಿಯ ಅಗಳಕುಪ್ಪೆ ಗ್ರಾಪಂನ ಹಳೇನಿಜಗಲ್ ಕೆರೆಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿ ಮಾತನಾಡಿದರು. ಈ ಭಾಗದಲ್ಲಿ ಯಾವುದೇ ಸಮರ್ಪಕ ಜಲಮೂಲ ಇಲ್ಲ.ರೈತರು ಮಳೆಯನ್ನೇ ನಂಬಿ ಬೇಸಾಯ ಮಾಡುತ್ತಿದ್ದಾರೆ. ಈಗ ಮಳೆಗಾಲದಲ್ಲಿ ನಿರೀಕ್ಷಿತ ನೀರು ಲಭ್ಯವಾಗದೆ ಕೆರೆಗಳು ತುಂಬುತ್ತಿಲ್ಲ. ಇದದಿಂದ ಅಂತರ್ಜಲ ಮಟ್ಟ ಕುಸಿದಿದೆ. ಇದರಿಂದ ಕುಡಿಯುವ ನೀರಿಗೂ ತೊಂದರೆಯಾಗುತ್ತಿದೆ. ಆದ್ದರಿಂದ ಶೀಘ್ರ ವೃಷಭಾವತಿ ನದಿ ಯೋಜನೆಯಡಿ ತಾಲೂಕಿನ 68 ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಕೈಗೊಳ್ಳಲಾಗುವುದು ಎಂದರು.

    ಎತ್ತಿಹೊಳೆ ಯೋಜನೆಯಿಂದ ನೆಲಮಂಗಲ ತಾಲೂಕಿನ ಮದಗ, ಮಣ್ಣೆ, ಮರಳಕುಂಟೆ ಮತ್ತು ಸೋಂಪುರ ಕೈಗಾರಿಕಾ ಪ್ರದೇಶಕ್ಕೆ ಈ ಯೋಜನೆಯಿಂದ ನೀರು ಹರಿಸಲಾಗುವುದು. ಕೆರೆಗಳಿಗೆ ನೀರು ತುಂಬಿಸುವವರೆವೆಗೂ ನಾನು ಹೋರಾಟ ಮಾಡುತ್ತೇನೆ. ಜನರು ನಮ್ಮೊಂದಿಗೆ ಕೈಜೋಡಿಸಬೇಕು ಎಂದರು.

    ತುಮಕೂರು ಹಿರೇಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಜೀವನಕ್ಕೆ ನೀರು ಅತ್ಯಮೂಲ್ಯ. ನೀರನ್ನು ಎಚ್ಚರಿಕೆಯಿಂದ ಕಾಪಾಡಿಕೊಳ್ಳಿ. ಅನವಶ್ಯಕವಾಗಿ ಪೋಲಾಗದಂತೆ ಎಚ್ಚರವಹಿಸಿ. ನೀರಿನ ತೊಂದರೆ ಅನುಭವಿಸುತ್ತಿರುವ ಈ ಭಾಗದ ಜನತೆಗೆ ವಿವಿಧ ಯೋಜನೆಗಳಡಿ ಕೆರೆ ತುಂಬಿಸುವ ಕಾರ್ಯಕ್ಕೆ ಜನಪ್ರತಿನಿಧಿಗಳು ಮುಂದಾಗಲಿ ಎಂದರು.

    ಟಿಎಪಿಎಂಎಸ್ ಮಾಜಿ ಅಧ್ಯಕ್ಷ ಜಗಜ್ಯೋತಿ ಬಸವೇಶ್ವರ, ಜೆಡಿಎಸ್ ಹೋಬಳಿ ಅಧ್ಯಕ್ಷ ಬಿ.ಎಂ.ಮೋಹನ್‌ಕುಮಾರ್, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಂ.ಸಿ.ಜಯಣ್ಣ, ಮುಖಂಡರಾದ ಭಾರತಿಪುರದ ಮಂಜುಳಾ ಮೋಹನ್‌ಕುಮಾರ್, ಡಿ.ಜೆ.ಸತೀಶ್, ತಿಮ್ಮಪ್ಪಯ್ಯ, ಎನ್.ವಿ.ಗೋಪಿನಾಥ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts