More

    ವೀರಶೈವ ಸಮಾಜದ ಮುಖಂಡ ಅರುಣಕುಮಾರ ಕೈ ತೊರೆದು ಬಿಜೆಪಿಗೆ

    ಕಲಬುರಗಿ: ವೀರಶೈವ ಲಿಂಗಾಯತ ಸಮಾಜದ ಹಿರಿಯ ಮುಖಂಡ, ಹೋರಾಟಗಾರ ಅರುಣಕುಮಾರ ಪಾಟೀಲ್ ಕೊಡಲಹಂಗರಗಾ ಕಾಂಗ್ರೆಸ್ ಪಕ್ಷಕ್ಕೆ ಬೈ ಹೇಳಿ ಬಿಜೆಪಿಗೆ ಜೈ ಎಂದಿದ್ದಾರೆ.

    ಕಲ್ಯಾಣ ಕರ್ನಾಟಕ ಉತ್ಸವ ದಿನದಂದು ಇಲ್ಲಿಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿ (ಕೆಕೆಆರ್ ಡಿಬಿ) ಅಧ್ಯಕ್ಷರೂ ಆದ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್, ಬಿಜೆಪಿ ನಗರ ಜಿಲ್ಲಾ ಅಧ್ಯಕ್ಷ ಸಿದ್ದಾಜಿ ಪಾಟೀಲ್ ಅವರ ನೇತೃತ್ವದಲ್ಲಿ ಅರುಣಕುಮಾರ ಬಿಜೆಪಿಗೆ ಸೇರಿದರು. ಶಾಸಕರಾದ ಶಶೀಲ್ ನಮೋಶಿ, ಸುಭಾಷ ಗುತ್ತೇದಾರ್, ಬಸವರಾಜ ಮತ್ತಿಮಡು ಇತರರಿದ್ದರು.

    ಕಳೆದ ಒಂಬತ್ತು ವರ್ಷಗಳಿಂದ ಅರುಣಕುಮಾರ ಅವರು ಕಾಂಗ್ರೆಸ್ ನಲ್ಲಿದ್ದರು. ಸುದೀರ್ಘ ಅವಧಿ ಉತ್ತಮವಾಗಿ ಕೆಲಸ‌ ಮಾಡಿದರೂ ಪಕ್ಷದ ಮುಖಂಡರು ಗುರುತಿಸದಿರುವುದು ಬೇಸರ ತಂದಿದೆ. ಹೀಗಾಗಿ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದೇನೆ. ಬಿಜೆಪಿ ಸಾಮಾನ್ಯ ಕಾರ್ಯಕರ್ತನಾಗಿ ದುಡಿಯುವೆ ಎಂದು ಅರುಣಕುಮಾರ ಪಾಟೀಲ್ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts