More

    ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ: ನನ್ನ ಯಶ ಎಂದ‌ ಶಾಸಕ ಯಶವಂತರಾಯಗೌಡ

    ವಿಜಯಪುರ: ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ ಬಗ್ಗೆ ಸದನದಲ್ಲಿ ಬೇಡಿಕೆ ಇರಿಸಿದ್ದೆ. ಇದೀಗ ಸರ್ಕಾರ ಅದಕ್ಕೆ ಅಸ್ತು ಎಂದಿರುವುದು ನಮ್ಮ ಬೇಡಿಕೆಗೆ ಸಿಕ್ಕ ಮನ್ನಣೆ ಎಂದು ಇಂಡಿ ವಿಧಾನ ಸಭೆ ಕ್ಷೇತ್ರದ ಕಾಂಗ್ರೆಸ್ ಯಶವಂತರಾಯಗೌಡ ಪಾಟೀಲ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
    ಕಳೆದ ವಿಧಾನ ಮಂಡಲ ಅಧಿವೇಶನದಲ್ಲಿ ಈ ಬಗ್ಗೆ ಧ್ವನಿ ಎತ್ತಿದ್ದೆ. ಆರ್ಥಿಕವಾಗಿ ಹಿಂದುಳಿದ ವೀರಶೈವ-ಲಿಂಗಾಯತರಿಗೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಲು ಮನವಿ ಮಾಡಿದ್ದೆ. ಆಗ ಸಂಬಂಧಿಸಿದ ಸಚಿವರು ದೇವರಾಜ ಅರಸು ಹಿಂದುಳಿದ ನಿಗಮದಿಂದ ವೀರಶೈವ-ಲಿಂಗಾಯತರಿಗೆ ಸಹಾಯವಾಗುತ್ತದೆ ಎಂದು ಉತ್ತರಿಸಿದ್ದರು. ಆದರೆ, ಸದರಿ ನಿಗಮದಿಂದ ವೀರಶೈವ ಲಿಂಗಾಯತರಿಗೆ ಅನುಕೂಲವಾಗುತ್ತಿಲ್ಲ. ಹೀಗಾಘಿ ಪ್ರತ್ಯೇಕ ನಿಗಮದ ವಿಚಾರ ಅತ್ಯಂತ ಮಹತ್ವದ್ದಾಗಿದ್ದು ಈ ಬಗ್ಗೆ ಚರ್ಚೆಗೆ ಅರ್ಧ ಗಂಟೆ ಸಮಯ ಮೀಸಲಿಡಲು ಸಭಾಪತಿಗಳಲ್ಲಿ ಮನವಿ ಮಾಡಿದ್ದಾಗಿ ಶಾಸಕ ಯಶವಂತರಾಯಗೌಡ ಪಾಟೀಲ ನೆನಪಿಸಿಕೊಂಡರು.
    ಮಾತ್ರವಲ್ಲ, ಸದನದಲ್ಲೇ ವೀರಶೈವ ಲಿಂಗಾಯತ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆಗೆ ಪಟ್ಟು ಹಿಡಿದಿದ್ದೆ. ಇದಕ್ಕೆ ಲಕ್ಷ್ಮಿ ಹೆಬ್ಬಾಳಕರ, ಎಂ.ಪಿ. ರೇಣುಕಾಚಾರ್ಯ, ವೆಂಕಟರಾವ ನಾಡಗೌಡ, ಮಾಡಾಳು ವಿರೂಪಾಕ್ಷಪ್ಪ ಮತ್ತಿತರರು ಧ್ವನಿ ಗೂಡಿಸಿದ್ದರು. ಆಗ ಹಿಂದುಳಿದ ವರ್ಗಗಗಳ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಸಹ ಸಭೆ ನಡೆಸಿ ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಅದಾದ ಬಳಿಕ ಮುಖ್ಯಮಂತ್ರಿಗಳಿಗೆ ವೈಯಕ್ತಿಕವಾಗಿ ಪತ್ರ ಬರೆದು ನಿಗಮಕ್ಕೆ ಒತ್ತಾಯಿಸಿದ್ದೆ. ರಾಜ್ಯದ ಆರೂವರೆ ಕೋಟಿ ಜನಸಂಖ್ಯೆ ಪೈಕಿ ಸುಮಾರು ಒಂದೂವರೆ ಕೋಟಿ ಇರುವ ವೀರಶೈವ ಲಿಂಗಾಯತರು ಕೃಷಿ ಆಧಾರಿತ ಜೀವನ ಸಾಗಿಸಿಕೊಂಡು ಬರುತ್ತಿದ್ದಾರೆ. ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಈ ಸಮಯದಾಯಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಆ ಮೂಲಕ ಸಮುದಾಯದ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕೆಂದು ಮನವಿ ಮಾಡಿದ್ದೆ. ಪ್ರತಿಫಲವೆಂಬಂತೆ ಇಂದು ಸಿಎಂ ಯಡಿಯೂರಪ್ಪ ಅವರು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದು ನಮ್ಮ ಬೇಡಿಕೆಗೆ ಸಂದ ಜಯ ಎಂದು ‘ವಿಜಯವಾಣಿ’ಗೆ ಅವರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts