More

    ವೀರಭದ್ರೇಶ್ವರ ರಥೋತ್ಸವ ಇಂದು

    ಪ್ರಕಾಶ ವಿ ಅಸುಂಡಿ ಕಟಕೋಳ: ನಾಡಿನ ಜಾಗೃತ ಸುಕ್ಷೇತ್ರಗಳಲ್ಲಿ ಒಂದಾದ ರಾಮದುರ್ಗ ತಾಲೂಕಿನ ಗೊಡಚಿ ವೀರಭದ್ರೇಶ್ವರ ಮಹಾರಥೋತ್ಸವ ಡಿ.8 ರಂದು ಜರುಗಲಿದೆ. ಡಿ.12 ರ ವರೆಗೆ 5 ದಿನಗಳ ಕಾಲ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಲಿದೆ.

    ದೇವಾನು ದೇವತೆಗಳಿಗೆ ಉಪಟಳ ನೀಡುತ್ತಿದ್ದ ದಕ್ಷ ಬ್ರಹ್ಮ ರಾಕ್ಷಸನನ್ನು ಸಂಹರಿಸಲು ಪರಶಿವನ ಅನುಗ್ರಹದಿಂದ ಜನ್ಮತಾಳಿದ ವೀರಭದ್ರೇಶ್ವರ, ರೌದ್ರಾವತಾರದಿಂದ ದಕ್ಷಬ್ರಹ್ಮ ರಾಕ್ಷಸನ ವಿರುದ್ಧ ಕಾದಾಡಿ ಜಗತ್ತಿಗೆ ಶಾಂತಿ, ನೆಮ್ಮದಿ ದಯಪಾಲಿಸಿದನು. ನಂತರ ಗೊಡಚಿಯಲ್ಲಿ ನೆಲೆಸಿದ ವೀರಭದ್ರೇಶ್ವರರನ್ನು ಭಕ್ತಾಧಿಗಳು ಪುರಾತನ ಕಾಲದಿಂದರೂ ಆರಾಧಿಸಿಕೊಂಡು ಬರುತ್ತಿದ್ದಾರೆ.

    ಜಾತ್ರೆಯ ಹಿನ್ನೆಲೆ: ಈಗಿನ ರಾಮದುರ್ಗ ತಾಲೂಕಿನ ತೊರಗಲ್ ಗ್ರಾಮವು ನೂರಾರು ವರ್ಷಗಳ ಹಿಂದೆ 7 ಸುತ್ತಿನ ಕೋಟೆಯಿಂದ ಸುತ್ತುರಿದ ಸಂಸ್ಥಾನವಾಗಿತ್ತು. ಸಂಸ್ಥಾನದ ಆಳ್ವಿಕೆಯನ್ನು ಶಿಂಧೆ ಕುಟುಂಬಸ್ಥರು ನಡೆಸುತ್ತಿದ್ದರು. ಗೊಡಚಿ ಗ್ರಾಮ ತೊರಗಲ್ ಶಿಂಧೆ ಸಂಸ್ಥಾನದ ಅಧೀನದಲ್ಲಿತ್ತು. ಸಂಸ್ಥಾನಿಕರಿಗೆ ಶುಭಾಶೀರ್ವಾದ ಮಾಡಿಕೊಂಡು ಬಂದ ವೀರಭದ್ರೇಶ್ವರನ ಜಾತ್ರೆಯನ್ನು ಶಿಂಧೆ ವಂಶಸ್ಥರು ಆಚರಿಸಕೊಂಡು ಬರುತ್ತಿದ್ದಾರೆ. ಹಿರಿಯರ ಪುರಾತನ ಸಂಪ್ರದಾಯದಂತೆ ಈಗಿನ ಟ್ರಸ್ಟ್ ವೀರಧರ್ಮದರ್ಶಿ ಶ್ರೀಮಂತ ಸಂಗ್ರಾಮಸಿಂಹ ಶಿಂಧೆ ಮುಂದುವರಿಸಿಕೊಂಡು ಹೋಗುತ್ತಿದ್ದು, ಇವರ ನೇತೃತ್ವದಲ್ಲಿ ಪ್ರತಿವರ್ಷ ಜಾತ್ರೆ ವಿಜ್ರಂಭಣೆಯಿಂದ ಜರುಗುತ್ತಿದೆ.

    ಡಿ. 12 ರಂದು ಸಂಜೆ ರಥದ ಕಳಸಾರೋಹಣ, ಸಂಜೆ 6 ಗಂಟೆಗೆ ಲಕ್ಷ್ಮದಿಪೋತ್ಸವ ಜರುಗಲಿದೆ. ಭಕ್ತಾಧಿಗಳು ತಮ್ಮ ಭಕ್ತಿಯ ಹಣತೆ ದೀಪ ಹಚ್ಚುವ ಮೂಲಕ ಇಷ್ಠಾರ್ಥಗಳನ್ನು ಬೇಡಿಕೊಂಡು, ನಂತರ ದೀಪ ಹಚ್ಚುವುದು ಇಲ್ಲಿನ ವಾಡಿಕೆಯಾಗಿದೆ.

    ಬಳವಲು ಕಾಯಿ, ಬೋರೆ ಹಣ್ಣು ವಿಶೇಷ: ಜಾತ್ರೆಯಲ್ಲಿ ಬಳವಲಕಾಯಿ ಹಾಗೂ ಬೋರೆ ಹಣ್ಣುಗಳನ್ನು ಆಗಮಿಸಿದ ಭಕ್ತಾಧಿಗಳು ತೆಗೆದುಕೊಂಡು ಹೋಗುವುದು ಇಲ್ಲಿನ ಪದ್ಧತಿ, ಜಾತ್ರೆಯ ತುಂಬೆಲ್ಲ ಬಳವಲು ಕಾಯಿ ಹಾಗೂ ಬೋರೆ ಹಣ್ಣುಗಳ ವ್ಯಾಪಾರ ಜೋರಾಗಿ ನಡೆಯುತ್ತದೆ. ಬಳವಲಕಾಯಿಗೆ ಬೆಲ್ಲ ಸೇರಿಸಿ ಸವಿಯುವುದು ಈ ಜಾತ್ರೆಯ ವಿಶೇಷ.

    ಮನರಂಜನೆ: ಮನರಂಜನೆಗಾಗಿ ರಾಜ್ಯದ ಕನ್ನಡದ ಖ್ಯಾತ ನಾಟಕ ಕಲಾವಿದರ ನಾಟಕ ಪ್ರದರ್ಶನ, ರಥೋತ್ಸವದ ದಿನ ಡಿ.8 ರಂದು ಗ್ರಾಪಂ ಹಾಗೂ ತಾಲೂಕಾಡಳಿತದ ನೇತೃತ್ವದಲ್ಲಿ ಬೃಹತ್ ವಸ್ತು ಪ್ರದರ್ಶನ ಸೇರಿದಂತೆ ವಿವಿಧ ಮನರಂಜನಾ ಕಾರ್ಯಕ್ರಮಗಳು ಜರುಗಲಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts