More

    ನಾಡು, ನುಡಿ ರಕ್ಷಣೆಗೆ ಒಗ್ಗಟ್ಟಿನ ಹೋರಾಟ ಅವಶ್ಯ

    ಸೇಡಂ: ನಾಡು ಮತ್ತು ನುಡಿಯ ರಕ್ಷಣೆಯ ಮಾತು ಬಂದಾಗ ಸರ್ವರು ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಒಗ್ಗಟ್ಟಾಗಿ ಹೋರಾಟ ಮಾಡುವುದು ಅಗತ್ಯವಾಗಿದೆ ಎಂದು ಹಾಲಪಯ್ಯ ಮಠದ ಶ್ರೀ ಪಂಚಾಕ್ಷರ ಸ್ವಾಮೀಜಿ ಹೇಳಿದರು.

    ರಂಜೋಳ ಗ್ರಾಮದಲ್ಲಿ ಕರವೇ(ಪ್ರವೀಣಶೆಟ್ಟಿ)ಬಣದಿಂದ ಮಂಗಳವಾರ ಆಯೋಜಿಸಿದ್ದ ೧೨ನೇ ರಾಷ್ಟ್ರಕೂಟರ ಉತ್ಸವದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

    ಭಾಷಾ ಉಳಿವಿಗಾಗಿ ಕೇವಲ ಕರವೇ ಕಾರ್ಯಕರ್ತರು ಮಾತ್ರ ಹೋರಾಟ ನಡೆಸಿದರೆ ಸಾಲದು, ಅವರೊಟ್ಟಿಗೆ ಮಠಾಧೀಶರು, ಸಾರ್ವಜನಿಕರು ಕೈಜೋಡಿಸಿದರೆ ಕನ್ನಡ ಭಾಷೆ ಉಳಿಯಲು ಸಾಧ್ಯ. ನಮ್ಮ ತಾಲೂಕು ತೆಲಂಗಾಣಗಡಿಗೆ ಹೊಂದಿಕೊಂಡಿದ್ದು, ಗಡಿನಾಡಿನಲ್ಲಿ ಕನ್ನಡ ಜಾಗೃತಿ ಕೆಲಸಗಳು ಹೆಚ್ಚಾಗಬೇಕು ಎಂದರು.

    ತೋಟಗಾರಿಕೆ ಮಹಾಮಂಡಳಿಯ ಮಾಜಿ ಅಧ್ಯಕ್ಷ ಬಸವರಾಜ ಪಾಟೀಲ್ ಊಡಗಿ ಮಾತನಾಡಿ, ನಮ್ಮ ಕ್ಷೇತ್ರದಲ್ಲಿ ಕನ್ನಡ ಭಾಷೆ ಕಟ್ಟಲು ಯಾವತ್ತಿಗೂ ಜತೆಗೆ ಕೈಜೋಡಿಸಲಾಗುವುದು. ಯಾವುದೇ ಕಾರಣಕ್ಕೂ ನಮ್ಮ ನೆಲದ ಜನತೆಗೆ ಅನ್ಯಾಯವಾಗಲು ಬಿಡುವುದಿಲ್ಲ. ಹಿಂದೆ ನಮ್ಮ ಸರ್ಕಾರವಿದ್ದಾಗ ರಾಷ್ಟçಕೂಟರ ಉತ್ಸವ ಆಚರಿಸಲಾಗಿತ್ತು, ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರ ಗಮನಕ್ಕೆ ತಂದು ಮತ್ತೊಮ್ಮೆ ಸರ್ಕಾರದಿಂದಲೇ ಉತ್ಸವ ಆಚರಣೆಗೆ ಕ್ರಮವಹಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

    ಕರವೇ ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಗದ್ದುಗೆ ಮಾತನಾಡಿ, ಕನ್ನಡ ನಾಡು ನುಡಿಯ ಅಭಿಮಾನ ಕೇವಲ ಮಾತಿನಲ್ಲಿ ಇದ್ದರಷ್ಟೇ ಸಾಲದು. ಅದನ್ನು ಆಚರಣೆಗೆ ತರಬೇಕು. ನಿಸ್ವಾರ್ಥದಿಂದ ಸಮಾಜ ಸೇವೆಯನ್ನು ಮಾಡುವದರ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡಬೇಕು ಎಂದರು.

    ಗುರುಮಠಕಲ್‌ನ ಶ್ರೀ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ, ಜಾಕನಹಳ್ಳಿಯ ಶ್ರೀ ಅಭಿನವ ಗವಿಸಿದ್ಧಲಿಂಗೇಶ್ವರ ಶಿವಾಚಾರ್ಯರು, ಗುಂಡೇಪಲ್ಲಿಯ ಶ್ರೀ ಶಿವಸಿದ್ಧ ಸ್ವಾಮೀಜಿ, ರಂಜೋಳದ ಬಾರಾಇಮಾಮ್ ದರ್ಗಾದ ಅಬ್ದುಲ್‌ಸಾಬ್, ರಾಘಾಪುರದ ಶ್ರೀ ತಿಪ್ಪಯ್ಯ ಮುತ್ಯಾ ಸಾನ್ನಿಧ್ಯ ವಹಿಸಿದ್ದರು.

    ಎಪಿಎಂಸಿ ಮಾಜಿ ಅಧ್ಯಕ್ಷ ಸತೀಶರೆಡ್ಡಿ ಪಾಟೀಲ್, ಗ್ರಾಪಂ ಅಧ್ಯಕ್ಷೆ ಆದಂಬಿ ಬಾಬುಮಿಯ, ಕರವೇ ತಾಲೂಕು ಅಧ್ಯಕ್ಷ ರಾಮಚಂದ್ರ ಗುತ್ತೇದಾರ್, ಪಿಎಸ್‌ಐ ಮಂಜುನಾಥರೆಡ್ಡಿ, ಶಂಭುರೆಡ್ಡಿ ಮದ್ನಿ, ಜೈಭೀಮ್ ಊಡಗಿ, ಅಬ್ದುಲ್ ರಸೀದ್, ಡಾ.ಶ್ರೀನಿವಾಸರೆಡ್ಡಿ ಪಾಟೀಲ್, ಡಾ.ಶ್ರೀನಿವಾಸ, ನಾರಾಯಣರೆಡ್ಡಿ ಶೇರಿಕಾರ, ರಾಜಶೇಖರ ಬಳಗಾರ, ಸೈಯದ್ ನಜಿಮೋದ್ದಿನ್, ಗೋವಿಂದ ಯಾಕಂಬ್ರಿ, ಮಾನಸಿಂಗ್, ಮಹಾಂತೇಶ ಸುತಾರ, ಶಿವಶಂಕರಯ್ಯಸ್ವಾಮಿ ಇಮಡಾಪುರ, ಜಗದೇವಿ ಪಾಟೀಲ್, ಬಸವರಾಜ, ನಳಿನಾ ಇತರರಿದ್ದರು. ಸರ್ಕಾರಿ ಪ್ರೌಢ, ಪ್ರಾಥಮಿಕ, ಕಿರಿಯ ಹಾಗೂ ಚಿಗುರು ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts