More

    ವೀರಭದ್ರೇಶ್ವರ ಜಾತ್ರೆ ಸಂಭ್ರಮ

    ಮೋರಟಗಿ: ಗ್ರಾಮದ ವೀರಭದ್ರೇಶ್ವರ ಜಾತ್ರೆ ಶನಿವಾರ ಬಹಳಷ್ಟು ವಿಜೃಂಭಣೆಯಿಂದ ಜರುಗಿತು. ಜಾತ್ರೆಯಲ್ಲಿ ಸಿಂದಗಿ ಶಾಸಕ ಅಶೋಕ ಮನಗೂಳಿ ಪಾಲ್ಗೊಂಡಿದ್ದರು.

    ಭಕ್ತರು ವೀರಭದ್ರೇಶ್ವರ ಮೂರ್ತಿ ಪಲ್ಲಕ್ಕಿಯೊಂದಿಗೆ ಸಮೀಪದ ಭೀಮಾ ನದಿಯಲ್ಲಿ ಗಂಗಾಸ್ನಾನ ಮುಗಿಸಿಕೊಂಡು ಪಲ್ಲಕ್ಕಿಯೊಂದಿಗೆ ಮೂಲ ಸ್ಥಳಕ್ಕೆ ತಲುಪಿದರು. ಭಾನುವಾರ ಬೆಳಗಿನ ಜಾವ 5.30 ಗಂಟೆಗೆ ಮೋರಟಗಿ ಸೇರಿದಂತೆ ವಿವಿಧೆಡೆಯಿಂದ ವೀರಭದ್ರೇಶ್ವರ ಭಕ್ತರು ಅಗ್ನಿ ಸ್ಪರ್ಶ ಮಾಡಿದರು.
    ಗುಲ್ಬರ್ಗಾ, ವಿಜಯಪುರ, ಶಹಾಪುರ, ಇಂಡಿ, ಮಂದೇವಾಲ, ಜೇವರ್ಗಿ, ಕಕ್ಕಳಮೆಲಿ, ಹಂಚಿನಾಳ, ನ್ಯಾವನೂರ, ಮಲಘಾಣ ಗಬಸಾವಳಗಿ ಸೇರಿದಂತೆ ವಿವಿಧ ತಾಲೂಕಿನಿಂದ ಪುರವಂತರು ಆಗಮಿಸಿ ವಿಶಿಷ್ಟ ರೀತಿಯಲ್ಲಿ ಶಸ್ತ್ರ ಹಾಕಿ ಗಮನ ಸೆಳೆದರು.

    ಬೆಳಗಿನ ಜಾವ ಅಗ್ನಿಸ್ಪರ್ಶ ಮುಗಿದ ನಂತರ ಪಲ್ಲಕ್ಕಿ ಮೆರವಣಿಗೆ ಪ್ರಾರಂಭವಾಗಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಡೊಳ್ಳು ಕುಣಿತ, ಕುದುರೆ ಕುಣಿತದೊಂದಿಗೆ ಸಂಚರಿಸಿ ಮಧ್ಯಾಹ್ನ 2 ಗಂಟೆಗೆ ಗುಡಿ ಸೇರಿತು. ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. 6 ಗಂಟೆಗಳ ಕಾಲ ನೂರಾರು ಮುತ್ತೈದೆಯರು ಕಳಸ ಹಿಡಿದು ಸಂಚರಿಸಿತು.

    ಪಲ್ಲಕ್ಕಿ ಮೆರವಣಿಗೆ ಪ್ರಾರಂಭ ಆಗುತ್ತಿದ್ದಂತೆ ಆಗಮಿಸಿದ ಶಾಸಕ ಅಶೋಕ ಮನಗೂಳಿ ಅವರು, ಕಾಲ್ನಡಿಗೆ ಮೂಲಕ ಮುಖ್ಯ ಬಜಾರ್ ರಸ್ತೆಯವರೆಗೆ ಆಗಮಿಸಿ ಪುರವಂತರಿಗೆ ವೈಯಕ್ತಿಕವಾಗಿ ಸಹಾಯ ಧನ ನೀಡಿದರು.

    ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಸಿಬ್ಬಂದಿ ಬಂದೋಬಸ್ತ್ ಒದಗಿಸಿದ್ದರು. ವೀರಭದ್ರೇಶ್ವರ ಸಮಿತಿಯಲ್ಲಿ ರೇವಣಸಿದ್ಧ ಮಸಳಿ, ಬಿ.ಟಿ.ಬೋನಾಳ, ಸಂತೋಷ ಶಾಬಾದಿ, ಡಾ.ರಾಜು ಪತ್ತಾರ, ಪ್ರಕಾಶ ನೆಲ್ಲಗಿ, ರವೀಂದ್ರ ಕುಲಕರ್ಣಿ ಜಾತ್ರೆಯ ಉಸ್ತುವಾರಿ ವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts