More

    ಕಿವಿ ಸೋಂಕುಗಳು ಶ್ರವಣ ನಷ್ಟಕ್ಕೆ ಪ್ರಮುಖ ಕಾರಣ

    ಗದಗ: ದೀರ್ಕಾಲದ ಕಿವಿ ಸೋಂಕುಗಳು ಶ್ರವಣ ನಷ್ಟಕ್ಕೆ ಪ್ರಮುಖ ಕಾರಣವಾಗಿವೆ. ಶ್ರವಣ ದೋಷ ಅಥವಾ ಕಿವುಡುತನವು ಒಬ್ಬ ವ್ಯಕ್ತಿ ಆಲಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳುವ ಸ್ಥಿತಿಯಾಗಿದ್ದು ಇತ್ತೀಚಿನ ದಿನಗಳಲ್ಲಿ ಈ ಸಮಸ್ಯೆ ಹೆಚ್ಚಾಗುತ್ತಿರುವುದು ಕಳವಳಕಾರಿ ಸಂಗತಿ ಎಂದು ಗದುಗಿನ ಕಿವಿ, ಮೂಗು, ಗಂಟಲು ತ ವೈದ್ಯ ಡಾ. ಚಂದ್ರಶೇಖರ ಬಳ್ಳಾರಿ ಹೇಳಿದರು.
    ನಗರದ ಸ್ಪಂದನಾ ಕಿವುಡ ಮತ್ತು ಮೂಗ ಮಕ್ಕಳ ವಿಶೇಷ ಶಾಲೆಯಲ್ಲಿ ರೋಟರಿ ಹಾಗೂ ಇನ್ನರ್​ವ್ಹಿಲ್​ ಕ್ಲಬ್​ ಆಶ್ರಯದಲ್ಲಿ ಶುಕ್ರವಾರ ಜರುಗಿದ ವಿಶ್ವ ಶ್ರವಣ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
    ದೇಹದ ಪ್ರಮುಖ ಅಂಗ ಕಿವಿ. ಕೇಳಿಸಿಕೊಳ್ಳುವುದು ಬಹು ಮುಖ್ಯ. ಕಿವುಡುತನ ಹಲವಾರು ಕಾರಣಗಳಿಂದ ಬರುತ್ತದೆ. ಅತಿಯಾದ ಶಬ್ದ ಕಿವಿಯ ಮೇಲೆ ದುಷ್ಪರಿಣಾಮ ಬೀರುತ್ತದೆ, ಅದಕ್ಕಾಗಿ ಕಿವಿಯನ್ನು ರಸಿ ಕೇಳುವುದು, ಕೇಳಿಸಿಕೊಳ್ಳುವುದೆ ಎರಡೂ ಕ್ರಿಯೆಯನ್ನು ನಿರಂತರವಾಗಿ ನಡೆಯುವಂತೆ ಮಾಡಬೇಕು ಎಂದರು.
    ರೋಟರಿ ಕ್ಲಬ್​ ಅಧ್ಯ ನರೇಶ್​ ಜೈನ್​ ಮಾತನಾಡಿ ಶ್ರವಣದ ಮಹತ್ವತೆಯನ್ನು ಜನಸಾಮಾನ್ಯರಿಗೆ ತಲುಪಿಸಲು ಈ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶ್ವ ಆರೋಗ್ಯ ಸಂಸ್ಥೆಯು ವಿಶ್ವ ಶ್ರವಣ ದಿನವನ್ನು ಆಚರಿಸಲು ಕರೆ ನೀಡಲಾಗಿದೆ. ಜನತೆಯಲ್ಲಿ ಈ ಕುರಿತು ಜಾಗೃತಿ ಬರಬೇಕಿದೆ ಎಂದರು.
    ಇನ್ನರ್​ವ್ಹಿಲ್​ ಕ್ಲಬ್​  ಹೊಳ್ಳಿಯವರಮಠ ಮಾತನಾಡಿ ಕೇಳಿಸಿಕೊಳ್ಳುವುದು ಮತ್ತು ಮಾತನಾಡುವ ಕ್ರಿಯೆ ಪ್ರತಿಕ್ರಿಯೆ ನಮ್ಮ ದೈನಂದಿನ ದಿನಚರಿಯಾಗಿದೆ. ಆದರೆ ಕೆಲವರಲ್ಲಿ ಈ ಕೊರತೆಗಳು ಇದ್ದಾಗ ಅವುಗಳನ್ನು ತಕ್ಕಮಟ್ಟಿಗೆ ಸುಧಾರಿಸಲು ಆಧುನಿಕ ಉಪಕರಣಗಳು ಸಹಕಾರಿಯಾಗಿವೆ ಎಂದರು.
    ಸಂಪನ್ಮೂಲ ವ್ಯಕ್ತಿ ಕೆ.ಎಸ್​.ಬೇಲೇರಿ, ಶಾಲಾ ಚೇರ್​ಮನ್​ ಎಸ್​.ಎ್​. ದ್ಯಾಮನಗೌಡ್ರ ಪ್ರಾಸ್ತಾವಿಕ ಮಾತನಾಡಿದರು. ಇದೇ ಸಂದರ್ಭದಲ್ಲಿ ಪಂ. ಪುಟ್ಟರಾಜ ಕವಿ ಗವಾಯಿಗಳವರ ಜನ್ಮದಿನವನ್ನು ಆಚರಿಸಲಾಯಿತು. ಮಕ್ಕಳಿಗೆ ಸಿಹಿ ವಿತರಿಸಿ ಕಲಿಕಾ ಸಾಮಗ್ರಿಗಳನ್ನು ವಿತರಿಸಿ ಪ್ರೋತ್ಸಾಹಿಸಲಾಯಿತು.
    ಅಶ್ವಿನಿ ಜಗತಾಪ, ಶ್ರೀಧರ ಸುಲ್ತಾನಪೂರ, ಶಿವಾಚಾರ್ಯ ಹೊಸಳ್ಳಿಮಠ, ಪ್ರೊ. ವೀಣಾ ತಿರ್ಲಾಪೂರ, ಪುಷ್ಪಾ ಭಂಡಾರಿ, ಸಾರಿಕಾ ಅಕ್ಕಿ, ಲಲಿತಾ ಉಮನಾಬಾದಿ, ಸುನೀತಾ ಅಂಗಡಿ, ಸುಮಾ ಪಾಟೀಲ ಇತರರು ಇದ್ದರು.

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts