More

    ವಿಶ್ವ ಯುವ ಕೌಶಲ್ಯ ದಿನಾಚರಣೆ

    ವಿಜಯವಾಣಿ ಸುದ್ದಿಜಾಲ ಗದಗ 

    ಇಂದಿನ ಯುವ ಪೀಳಿಗೆಯವರಲ್ಲಿ ಒಂದೊಂದು ಕೌಶಲ್ಯವಿದ್ದು ಆ ಕೌಶಲ್ಯವನ್ನು ಬೆಳಕಿಗೆ ತಂದು ತಮ್ಮ ಜೀವನೋಪಾಯಕ್ಕೆ ದಾರಿ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಡಾ. ಮಲ್ಲೂರ ಬಸವರಾಜ ತಿಳಿಸಿದರು.

    ಗದಗ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಭಾನುವಾರ ವಿಶ್ವ ಯುವ ಕೌಶಲ್ಯ ದಿನಾಚರಣೆಯ ನಿಮಿತ್ಯ ಸಸಿಗೆ ನೀರು ಹಾಕುವುದರೊಂದಿಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿಸ ಅವರು,  ಇಲಾಖೆಯಿಂದ ವಿವಿಧ ತರಬೇತಿಗಳನ್ನು ನೀಡುತ್ತಿದ್ದು, ಕಂಪ್ಯೂಟರ ತರಬೇತಿ, ಬ್ಯೂಟಿಶಿಯನ್, ಟೇಲರಿಂಗ, ಟ್ಯಾಲಿ, ಇನ್ನು ಹಲವಾರು ತರಬೇತಿಗಳನ್ನು ನೀಡುತ್ತಿದ್ದು, ಅವುಗಳ ಉಪಯೋಗದಿಂದ ಕೌಶಲ್ಯವನ್ನು ಪಡೆದು ಸೆಲ್ಪ್ ಎಂಪ್ಲಾಯಮೆಂಟನ್ನು ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.

    ಅನನ್ಯ ತರಬೇತಿ ಸಂಸ್ಥೆಯ ಮುಖ್ಯಸ್ಥೆ ರಂಜಿತಾ ಕುಲಕರ್ಣಿ ಮಾತನಾಡಿ  ಕೌಶಲ್ಯವು  ಪ್ರತಿಯೊಬ್ಬರಲ್ಲಿಯೂ ಇದ್ದು ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕೇವಲ ಪದವಿ ಪಡೆದರೆ ಸಾಲದು, ಕೌಶಲ್ಯವಿದ್ದರೆ ಮಾತ್ರ ನಿಮ್ಮ ಜೀವನದಲ್ಲಿ ಉದ್ಯೋಗವನ್ನು ರೂಪಿಸಿಕೊಳ್ಳಲು ಸಹಾಯಕವಾಗುತ್ತದೆ.  ತಮ್ಮಲ್ಲಿರುವ ಕೌಶಲ್ಯವನ್ನು ಬೆಳಕಿಗೆ ತಂದು ಉತ್ತಮ ಉದ್ಯೋಗವನ್ನು ಕಂಡುಕೊಳ್ಳಬಹುದು ಎಂದು ತಿಳಿಸಿದರು. ಇದಲ್ಲದೇ, “ಸ್ಕಿಲ್ ಇಂಡಿಯಾ” ವೆಬ್ ಸೈಟ್‍ನಲ್ಲಿ ನೋಂದಣಿ ಮಾಡಿಕೊಳ್ಳುವುದರಿಂದ, ನಿಮ್ಮ ವಿದ್ಯಾರ್ಹತೆಗೆ ತಕ್ಕಂತೆ, ವಿವಿಧ ಕಂಪನಿಗಳನ್ನು ನೀವು ವೆಬ್ ಸೈಟ್‍ನಲ್ಲಿ ನೋಡಿಕೊಳ್ಳಬಹುದು. ಅದರಂತೆ ವಿವಿಧ ಕಂಪನಿಯವರಿಗೆ ಬೇಕಾದಂತಹ ಉದ್ಯೋಗದಾತರನ್ನೂ ಕೂಡ “ಸ್ಕಿಲ್ ಇಂಡಿಯಾ” ವೆಬ್ ನಿಂದ ಪಡೆಯುವಂತೆ ಸಹಾಯಕವಾಗಿರುತ್ತದೆ. ಪ್ರತಿಯೊಬ್ಬರೂ ಕೌಶಲ್ಯವನ್ನು ಬೆಳಕಿಗೆ ತಂದು ಇತರರಿಗೂ ಕೂಡಾ ಉದ್ಯೋಗವನ್ನು ನೀಡುವಷ್ಟರ ಮಟ್ಟಿಗೆ  ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.

    ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕ ಡಾ.  ಬಿ. ಎಚ್. ಬುಳ್ಳನ್ನವರ ಮಾತನಾಡಿ, ಸರ್ಕಾರದಿಂದ ವಿವಿಧ ತರಬೇತಿಗಳನ್ನು ನೀಡಲಾಗುತ್ತಿದ್ದು ಅದರ  ಸದುಪಯೊಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.  

    ಇಂಗ್ಲೀಷ ಉಪನ್ಯಾಸಕರಾದ ಡಾ. ಕೇಶವ ಪ್ರಲ್ಹಾದಾಚಾರ್ಯ, ವಿಶ್ವ ಯುವ ಕೌಶಲ್ಯ ದಿನಾಚರಣೆಯ ಬಗ್ಗೆ ಹಾಗೂ ಕೌಶಲ್ಯ ಬಗ್ಗೆ ಮಾಹಿತಿ ನೀಡಿದರು.

    ಕಾರ್ಯಕ್ರಮದಲ್ಲಿ ಸಹಾಯಕ ನಿರ್ದೇಶಕ ಉಮಾ ಪಾಳೇಗಾರ, ಸಹಾಯಕ ಸಾಂಖ್ಯೀಕ ಅಧಿಕಾರಿ ಪ್ರಕಾಶ ಕೋಳಿವಾಡ, ಕಾರ್ತಿಕ ಉಪಸ್ಥಿತರಿದ್ದರು. ಶೇಕರಡ್ಡಿ, ಹೆಚ್.ಹೆಚ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts