More

    ವಿಶ್ವೇಶ್ವರಯ್ಯ ಇಲ್ಲದಿದ್ದರೆ ನೀರಾವರಿ ಸೌಲಭ್ಯಕ್ಕಿರಲಿಲ್ಲ ಖಾತ್ರಿ

    ದಾವಣಗೆರೆ: ಸರ್ ಎಂ. ವಿಶ್ವೇಶ್ವರಯ್ಯ ಇಲ್ಲದೇ ಹೋಗಿದ್ದರೆ ನೀರಾವರಿ ವ್ಯವಸ್ಥೆಯೇ ಅಸ್ತಿತ್ವಕ್ಕೆ ಬರುತ್ತಿರಲಿಲ್ಲ ಎಂದು ಮಾಗನೂರು ಬಸಪ್ಪ ಪಬ್ಲಿಕ್ ಟ್ರಸ್ಟ್‌ನ ಗೌರವ ಕಾರ್ಯದರ್ಶಿ ಎಂ.ಬಿ. ಸಂಗಮೇಶಗೌಡರು ಹೇಳಿದರು.

    ನಗರದ ತರಳಬಾಳು ಬಡಾವಣೆಯ ಮಾಗನೂರು ಬಸಪ್ಪ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಇಂಜಿನಿಯರ್ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಶಿಕ್ಷಣಕ್ಕೆ ಒಳ್ಳೆಯ ಅಡಿಪಾಯ ಹಾಕಿದ್ದಾರೆ. ಶಿಕ್ಷಕರ ಬದುಕಿನ ಆಶಾಕಿರಣರಾಗಿದ್ದಾರೆ. ಈ ಇಬ್ಬರು ಮಹನೀಯರ ಆದರ್ಶಮಯ ಬದುಕು ಎಲ್ಲರ ಉಜ್ವಲ ಬದುಕಿಗೂ ಪ್ರೇರಕ ಎಂದು ಹೇಳಿದರು.
    ಸಿವಿಲ್ ಇಂಜಿನಿಯರ್ ಎಚ್.ವಿ. ಮಂಜುನಾಥಸ್ವಾಮಿ ಮಾತನಾಡಿ ತಂತ್ರಜ್ಞಾನವೇ ಇಲ್ಲದಿದ್ದಾಗ ಸರ್ ಎಂ. ವಿಶ್ವೇಶ್ವರಯ್ಯನವರು ಅಣೆಕಟ್ಟು ಸೇರಿ ವಿವಿಧ ಕಟ್ಟಡಗಳನ್ನು ನಿರ್ಮಿಸುವ ಮೂಲಕ ಆಧುನಿಕ ಭಾರತದ ಸೃಷ್ಟಿಗೆ ಅಡಿಪಾಯ ಹಾಕಿದ್ದಾರೆ. ಸಿವಿಲ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಅಗಾಧ ಕೊಡುಗೆ ನೀಡಿದ್ದಾರೆ. ಅವರೊಬ್ಬ ರಾಷ್ಟ್ರ ಕಂಡ ವಿಶ್ವದ ಶ್ರೇಷ್ಠ ತಂತ್ರಜ್ಞರು. ದಕ್ಷ, ಪ್ರಾಮಾಣಿಕ ಆಡಳಿತಗಾರ ಎಂದು ಹೇಳಿದರು.
    ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಮಾತನಾಡಿ, ಈ ಇಬ್ಬರೂ ಮಹನೀಯರು ಕೊಟ್ಟ ಕೊಡುಗೆಗಳು ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿವೆ. ಇವರ ತತ್ವಾದರ್ಶಗಳಡಿ ನಮ್ಮ ಬದುಕು ಸಾಗಿಸಬೇಕು ಎಂದರು.
    ದಾವಣಗೆರೆ ವಿವಿ ಸಹಾಯಕ ಪ್ರಾಧ್ಯಾಪಕ ಡಾ. ಭೀಮಾಶಂಕರ್ ಜೋಷಿ ಮಾತನಾಡಿ ಭಾರತ ರತ್ನ ಪ್ರಶಸ್ತಿ ಪಡೆದ ಸರ್ವಪಲ್ಲಿ ರಾಧಾಕೃಷ್ಣನ್ ಮತ್ತು ಸರ್ ಎಂ. ವಿಶ್ವೇಶ್ವರಯ್ಯ ಇಬ್ಬರೂ ಅನರ್ಘ್ಯ ರತ್ನಗಳು ಎಂದರು.
    ವಿಶ್ರಾಂತ ಇಂಜಿನಿಯರ್ ಎಲ್.ಎಸ್. ಪ್ರಭುದೇವ್, ವಿಶ್ರಾಂತ ಮುಖ್ಯೋಪಾಧ್ಯಾಯ ಎಸ್.ಆರ್. ಶಿರಗಂಬಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ದಾವಣಗೆರೆ ವಿದ್ಯಾನಗರ ಲಯನ್ಸ್ ಕ್ಲಬ್ ಅಧ್ಯಕ್ಷ ಬಿ. ದಿಳ್ಯಪ್ಪ ಪ್ರಾಸ್ತ್ತಾವಿಕವಾಗಿ ಮಾತನಾಡಿದರು. ಕಸಾಪ ಸಂಘಟನಾ ಕಾರ್ಯದರ್ಶಿ ಜಿ. ರುದ್ರಯ್ಯ, ವಿದ್ಯಾನಗರ ಲಯನ್ಸ್ ಕ್ಲಬ್ ಮಾಜಿ ಪ್ರಾಂತಪಾಲ ಎಚ್.ಎನ್. ಶಿವಕುಮಾರ್, ಎ.ಆರ್. ಉಜ್ಜನಪ್ಪ, ತಾಲ್ಲೂಕು ಕಸಾಪ ಅಧ್ಯಕ್ಷೆ ಸುಮತಿ ಜಯಪ್ಪ, ದಾಗಿನಕಟ್ಟೆ ಪರಮೇಶ್ವರಪ್ಪ, ಎಸ್.ಎಂ. ಮಲ್ಲಮ್ಮ, ರೇವಣಸಿದ್ದಪ್ಪ ಅಂಗಡಿ ಇದ್ದರು. ಕೆ. ರಾಘವೇಂದ್ರ ನಾಯರಿ ಕಾರ್ಯಕ್ರಮ ನಿರೂಪಿಸಿದರು. ಜಗದೀಶ್ ಕೂಲಂಬಿ ಸ್ವಾಗತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts