More

    ವಿಶ್ವವಿದ್ಯಾಲಯ ಕಟ್ಟಲು ಎಲ್ಲರ ಸಲಹೆ ಅಗತ್ಯ; ರಾಯಚೂರು ವಿವಿ ಕುಲಪತಿ ಡಾ.ಹರೀಶ್ ರಾಮಸ್ವಾಮಿ ಮನವಿ

    ಲಾಂಛನ ರಚನೆಗಾಗಿ ಸಾಹಿತಿ, ಸಂಘಟನೆಗಳ ಸಭೆ

    ರಾಯಚೂರು: ರಾಯಚೂರು ವಿಶ್ವವಿದ್ಯಾಲಯವನ್ನು ಕಟ್ಟಲು, ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡಲು ಪ್ರತಿಯೊಬ್ಬರ ಸಲಹೆ, ಸಹಕಾರ ಅತ್ಯಗತ್ಯ ಎಂದು ವಿವಿ ಕುಲಪತಿ ಡಾ.ಹರೀಶ್ ರಾಮಸ್ವಾಮಿ ಹೇಳಿದರು.

    ಯರಗೇರಾ ಹತ್ತಿರದ ವಿವಿ ಸಭಾಂಗಣದಲ್ಲಿ ವಿವಿ ಲಾಂಛನ ರಚನೆಗೆ ಸಂಬಂಧಿಸಿದಂತೆ ಭಾನುವಾರ ಕರೆಯಲಾಗಿದ್ದ ಸಭೆಯಲ್ಲಿ ಮಾತನಾಡಿದರು. ವಿವಿ ಲಾಂಛನ ಶೈಕ್ಷಣಿಕ ಮಟ್ಟಕ್ಕೆ ಮಾತ್ರ ಸಿಮೀತವಾಗದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ರಚಿಸುವ ಉದ್ದೇಶ ಹೊಂದಲಾಗಿದೆ ಎಂದರು.

    ಏಮ್ಸ್ ಹೋರಾಟ ಸಮಿತಿ ಸಂಚಾಲಕ ಡಾ.ಬಸವರಾಜ ಕಳಸ, ನಿವೃತ್ತ ಮುಖ್ಯಶಿಕ್ಷಕ ರಾಮಣ್ಣ ಹವಳೆ, ಸಾಹಿತಿಗಳಾದ ಡಾ.ಶೀಲಾದಾಸ್, ಚಿದಾನಂದ ಸಾಲಿ ಇತರರು ಮಾತನಾಡಿ, ಹೋರಾಟದ ಫಲದಿಂದಾಗಿ ವಿವಿ ಸ್ಥಾಪನೆಯಾಗಿದೆ. ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ಭೌಗೋಳಿಕ, ಪ್ರಾಕೃತಿಕ, ಸಾಂಸ್ಕೃತಿಕತೆ ಬಿಂಬಿಸುವ ವಿಶೇಷ ಲಾಂಛನ ರೂಪಿಸಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಕುಲಪತಿ ಡಾ.ಹರೀಶ್, ಎಲ್ಲರ ಸಲಹೆಯಂತೆ ವಿಶೇಷ ರೀತಿಯಲ್ಲಿ ಲಾಂಛನವನ್ನು ಸಿದ್ಧಪಡಿಸಲು ಪ್ರಯತ್ನಿಸಲಾಗುವುದು ಎಂದರು.

    ಸಾಹಿತಿಗಳಾದ ಮಹಾಂತೇಶ ಮಸ್ಕಿ, ವೀರ ಹನುಮಾನ, ಸಿದ್ದಪ್ಪ ಹೊಟ್ಟಿ, ಡಾ.ಸುಭಾಷ್‌ಚಂದ್ರ, ಮುಖಂಡರಾದ ಆರ್.ಕೆ.ಅಮರೇಶ, ಅಶೋಕ ಕುಮಾರ ಜೈನ್, ಸ್ನಾತಕೋತ್ತರ ಕೇಂದ್ರದ ವಿಶೇಷಾಧಿಕಾರಿ ಡಾ.ಸಿ.ಎಸ್.ಪಾರ್ವತಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts