More

    ವಿಶ್ವಗುರು ಭಾರತಕ್ಕೆ ಶರಣರ ಕೃಪೆ

    ರಾಮದುರ್ಗ: ಜಾಗತೀಕರಣದಲ್ಲಿ ನೆಲೆ ಕಾಣದೆ ಹಲವು ರಾಷ್ಟ್ರಗಳು ಉದಯಿಸಿ ಹೇಳ ಹೆಸರಿಲ್ಲದೆ ಮಾಯವಾಗಿವೆ. ಆದರೆ ವಿಶ್ವಗುರುವಾಗುತ್ತಿರುವ ಭಾರತದ ನೆಲದಲ್ಲಿ ಮಾಧವಾನಂದ ಪ್ರಭುಜೀ ಅವರಂತೆ ದೇವರ ದಾಸಿಮಯ್ಯ, ಬಸವಣ್ಣನವರಂತ ನೂರಾರು ಶರಣರ ಕೃಪೆ ಇದೆ ಎಂದು ಜಿಪಂ ಮಾಜಿ ಸದಸ್ಯ ರಮೇಶ ದೇಶಪಾಂಡೆ ಹೇಳಿದರು.

    ಪಟ್ಟಣದ ನಾರಾಯಣ ಪೇಟೆಯ ಇಂಚಗೇರಿ ಶಾಖಾಮಠದಲ್ಲಿ ಶ್ರೀ ಮಾಧವಾನಂದ ಪ್ರಭುಗಳ ನೂತನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
    ಇಂಚಗೇರಿ ಮಠದ ಶ್ರೀ ಶಂಕ್ರಪ್ಪ ಮಹಾರಾಜರು ಕಾರ್ಯಕ್ರಮ ಉದ್ಘಾಟಿಸಿದರು. ಹುಲಕುಂದ ಬಸವೇಶ್ವರ ಮಠದ ಅಮರೇಶ್ವರ ಮಹಾರಾಜರು, ಆನಂದಸ್ವಾಮಿ ದೇವಾಂಗಮಠ, ನಿರಂಜನಸ್ವಾಮಿ ದೇವಾಂಗಮಠ, ಡಾ. ರಾಜು ಮಾದನ್ನವರ, ಎಸ್.ವಿ. ಕಲ್ಯಾಣಶೆಟ್ಟಿ, ಶಿವಾನಂದಶಾಸ್ತ್ರಿ ಜವಳಿ, ಪಿ.ಎಂ. ಹೂಗಾರ, ಎಂ.ಎ. ಪಾಡಮುಖಿ, ಪ್ರವಚನಕಾರ ರಮೇಶ ಮುರುಡಿ, ಪಿ.ಆರ್. ಸೂಳಿಭಾಂವಿ ಇತರರಿದ್ದರು.
    ಸುರೇಶ ಬರಡೂರ ಅಧ್ಯಕ್ಷತೆ ವಹಿಸಿದ್ದರು. ದಾನಿಗಳನ್ನು ಸನ್ಮಾನಿಸಲಾಯಿತು. ಈಚೆಗೆ ಮಾಧವಾನಂದ ಪ್ರಭು ಅವರ ಸಾಲಿಗ್ರಾಮ ಮೂರ್ತಿಯನ್ನು ಹಳೇ ಬನಶಂಕರಿ ದೇವಸ್ಥಾನದಿಂದ ಕುಂಭಮೇಳ, ಸುಮಂಗಲೆಯರ ಕಳಸದ ಆರತಿ ಹಾಗೂ ವಿವಿಧ ಮಂಗಳವಾದ್ಯಗಳೊಂದಿಗೆ ಶಾಖಾ ಮಠಕ್ಕೆ ತರಲಾಯಿತು. ಶುಕ್ರವಾರ ಬೆಳಗ್ಗೆ ಪೂಜಾ ವಿಧಾನಗಳೊಂದಿಗೆ ಹೋಮ-ಹವನದೊಂದಿಗೆ ಪ್ರತಿಷ್ಠಾಪಿಸಲಾಯಿತು. ತಿಮ್ಮಣ್ಣ ಸೂಳಿಕೇರಿ ಸ್ವಾಗತಿಸಿದರು. ಶಿಕ್ಷಕ ಎಂ.ಎನ್. ಕರಡಿಗುಡ್ಡ ನಿರೂಪಿಸಿದರು. ಶಂಕರ ಮುರುಡಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts