More

    ವಿಶ್ವಕ್ಕೆ ವಿಸ್ತರಿಸಿದ ಭಾರತೀಯ ಸಂಸ್ಕೃತಿ  – ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಹೇಳಿಕೆ   

    ದಾವಣಗೆರೆ: ಭಾರತ ದೇಶದ ಸಂಸ್ಕೃತಿ, ಸನಾತನ ಧರ್ಮ, ಧಾರ್ಮಿಕ ಮತ್ತು ಐತಿಹಾಸಿಕ ಪರಂಪರೆ ವಿಶ್ವವ್ಯಾಪಿಯಾಗಿ ವಿಸ್ತರಿಸಿದೆ ಎಂದು ಆವರಗೊಳ್ಳ ಪುರವರ್ಗ ಹಿರೇಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಶ್ಲಾಘಿಸಿದರು.
    ನಗರದ ಸುಕೃತೀಂದ್ರ ಕಲಾಮಂದಿರದಲ್ಲಿ ದಾವಣಗೆರೆಯ ಗಾಯತ್ರಿ ಪರಿವಾರದಿಂದ ಸೋಮವಾರ ಹಮ್ಮಿಕೊಂಡಿದ್ದ ಶ್ರೀ ಗಾಯತ್ರಿ ಯಜ್ಞ, ಸತ್ಯನಾರಾಯಣ ಪೂಜೆ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ವಿಶಿಷ್ಟ ಸಂಸ್ಕೃತಿಯಿಂದಾಗಿ ಭಾರತ ವಿಶ್ವಮಾನ್ಯವಾಗಿದೆ ಎಂದು ಹೇಳಿದರು.
    ಕನ್ನಡ ನಾಡು-ನುಡಿ ಜತೆಯಲ್ಲೇ ಮುಂದಿನ ಪೀಳಿಗೆಗೆ ಆಧ್ಯಾತ್ಮದ ಅರಿವು ಮೂಡಿಸುವ ನಿಟ್ಟಿನಲ್ಲಿ ಶ್ರೀ ಗಾಯತ್ರಿ ಪರಿವಾರ ಸಂಘಟನೆ ಮುಂಚೂಣಿಯಲ್ಲಿದೆ ಎಂದು ಹೇಳಿದರು.
    ಗಾಯತ್ರಿ ಪರಿವಾರದ ಅಧ್ಯಕ್ಷೆ ಡಾ. ಸುಶೀಲಮ್ಮ ಮಾತನಾಡಿ, ಇತ್ತೀಚಿನ ದಿನಮಾನಗಳಲ್ಲಿ ಆಧ್ಯಾತ್ಮ, ಸಂಸ್ಕಾರ, ಸಂಪ್ರದಾಯಗಳು ಮರೆಯಾಗುತ್ತಿದೆ. ಇಂತಹ ಧಾರ್ಮಿಕ ಪರಂಪರೆಯ ಸಮಾರಂಭಗಳಿಂದ ಮುಂದಿನ ಪೀಳಿಗೆಗೆ ಅರಿವು ಮೂಡಿಸಿದರೆ ಉತ್ತಮ ಫಲ ಕಾಣಬಹುದು ಎಂದರು.
    ಹಿರಿಯ ವೇದಶಾಸ್ತ್ರ ತಜ್ಞ ಎಸ್. ಶಂಕರನಾರಾಯಣ ಶಾಸ್ತ್ರಿ, ಸಿದ್ಧ್ದಿ ಸಮಾಧಿ ಯೋಗ ಸಮಿತಿಯ ದಾವಣಗೆರೆ ಜಿಲ್ಲಾ ಮುಖ್ಯಸ್ಥೆ ರೇಣುಕಮ್ಮ, ವೆಂಕಟೇಶ್ವರ ಆಶ್ರಮದ ಸುದರ್ಶನ ದೇವೇಂದ್ರ ಅಪ್ಪಯ್ಯ ಗುರೂಜಿ, ದಾವಣಗೆರೆ ಪಾಟೀದಾರ್ ಸಮಾಜದ ಅಧ್ಯಕ್ಷ ಡಾ. ರಮೇಶ್ ಪಟೇಲ್, ಪರಿವಾರದ ಗೌರವಾಧ್ಯಕ್ಷ ಕೆ.ಎಚ್. ಮಂಜುನಾಥ್ ಇದ್ದರು.
    ಹೋಮ ಹಾಗೂ ಪೂಜೆಗೆ ಸಂಕಲ್ಪ ಮಾಡಿ ಸೇವೆ ಸಲ್ಲಿಸಿದ ಭಕ್ತರಿಗೆ ಗಾಯತ್ರಿ ದೇವಿಯ ಸ್ಮರಣಿಕೆ, ಪೂಜಾ ಕಳಸ, ಸತ್ಯನಾರಾಯಣ ದೇವರ ಬಿಲ್ಲೆ ವಿತರಿಸಲಾಯಿತು.
    ಬಾಲಪ್ರತಿಭೆ ಆಯಿಷ್ಯ ಪ್ರಾರ್ಥಿಸಿದರು. ಶೈಲಾ ವಿನೋದ್ ದೇವರಾಜ್ ಸ್ವಾಗತಿಸಿದರು. ಪರಿವಾರದ ಪ್ರಧಾನ ಕಾರ್ಯದರ್ಶಿ ಸಾಲಿಗ್ರಾಮ ಗಣೇಶ್ ಶೆಣೈ ಕಾರ್ಯಕ್ರಮ ನಿರೂಪಿಸಿದರು.
    ———–

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts