More

    ವಿಶೇಷ ಪ್ಯಾಕೇಜ್ ಘೊಷಿಸಲು ಮನವಿ

    ಹಾವೇರಿ: ಲಾಕ್​ಡೌನ್​ನಿಂದಾಗಿ ಉದ್ಯೋಗ ಕಳೆದುಕೊಂಡು ಸಂಕಷ್ಟಕ್ಕೀಡಾಗಿರುವ ಎಪಿಎಂಸಿ, ಗ್ರಾಮೀಣ ಬಜಾರ್, ಗೋದಾಮು, ಟ್ರಾನ್ಸ್​ಪೋರ್ಟ್​ಗಳಲ್ಲಿ ಕೆಲಸ ಮಾಡುತ್ತಿದ್ದ ಕಾರ್ವಿುಕರಿಗೆ ವಿಶೇಷ ಪ್ಯಾಕೇಜ್ ಘೊಷಿಸಬೇಕು ಎಂದು ಹಮಾಲಿ ಕೂಲಿ ಕಾರ್ವಿುಕರ ಫೆಡರೇಷನ್ ನೇತೃತ್ವದಲ್ಲಿ ಗುರುವಾರ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

    ಹಮಾಲಿ ಕಾರ್ವಿುಕರಿಗೆ ಆರ್ಥಿಕ ನೆರವು ಮತ್ತು ಆಹಾರ ಧಾನ್ಯಗಳ ಕಿಟ್ ನೀಡಬೇಕೆಂದು ಹಲವು ಬಾರಿ ಮನವಿ ಮಾಡಿದ್ದರೂ ಸರ್ಕಾರ ಸ್ಪಂದಿಸಿಲ್ಲ. ಮುಖ್ಯಮಂತ್ರಿಗಳು ಘೊಷಿಸಿದ ವಿಶೇಷ ಪರಿಹಾರ ಪ್ಯಾಕೇಜ್ ಸಂಕಷ್ಟಕ್ಕೀಡಾದ ಬಹುತೇಕ ಅಸಂಘಟಿತ ಕಾರ್ವಿುಕರನ್ನು ಒಳಗೊಂಡಿಲ್ಲ. ಕೃಷಿ ಉತ್ಪನ್ನ ಮಾರುಕಟ್ಟೆ ಮತ್ತು ಸಹಕಾರ ಸಚಿವರು ನೀಡಿದ ಭರವಸೆ ಹುಸಿಯಾಗಿದೆ.

    ಸ್ಥಳೀಯವಾಗಿ ರಾಜ್ಯದ ಹಲವಾರು ಎಪಿಎಂಸಿಗಳಲ್ಲಿ ಮತ್ತು ನಗರ ಗ್ರಾಮೀಣ ಪ್ರದೇಶದಲ್ಲಿ ನನೆಗುದಿಗೆ ಬಿದ್ದಿರುವ ವಸತಿ ಯೋಜನೆ ಜಾರಿಗೆ ಅಗತ್ಯ ಕ್ರಮವಹಿಸಬೇಕು. ಲಾಕ್​ಡೌನ್​ನಿಂದಾಗಿ ಉದ್ಯೋಗ ಕಳೆದುಕೊಂಡು ಸಂಕಷ್ಟಕ್ಕೀಡಾದ ಎಲ್ಲ ಹಮಾಲಿ ಕಾರ್ವಿುಕರಿಗೆ ಕೂಡಲೆ ತಿಂಗಳಿಗೆ 7,500ರೂ. ಗಳಂತೆ ಆರು ತಿಂಗಳ ಆರ್ಥಿಕ ನೆರವು ನೀಡಬೇಕು. ಉಚಿತ ರೇಷನ್ ಕಿಟ್ ನೀಡಬೇಕು. ಅಸಂಘಟಿತ ಕಾರ್ವಿುಕರ ಸಾಮಾಜಿಕ ಭದ್ರತಾ ಮಂಡಳಿಯಿಂದ ಭವಿಷ್ಯ ನಿಧಿ ಯೋಜನೆ, ಪಿಂಚಣಿ ಜಾರಿ ಮಾಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ. ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನಾಯಕ ಕುರುಬರ, ಹೊನ್ನಪ್ಪ ಮಾಳಗಿ, ಗುಡ್ಡಪ್ಪ ಮಾಳಗಿ, ಮಲ್ಲೇಶ ಭಜಂತ್ರಿ, ಕರಿಯಪ್ಪ ಶಿವಣ್ಣನವರ, ಹೊನ್ನಪ್ಪ ಹರಿಜನ, ರಮೇಶ ಹರಿಜನ, ನಾಗರಾಜ ಹಾದಿಮನಿ, ನಾಗಪ್ಪ ಸೋಮಣ್ಣನವರ, ಗುಡ್ಡಪ್ಪ ಕನ್ನಮ್ಮನವರ, ನೀಲಪ್ಪ ಕಾಳೆ ಇತರರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts