More

    ವಿವಿಧ ಕ್ಷೇತ್ರದ ಸಾಧಕರಿಗೆ ‘ರತ್ನ’ ಪ್ರಶಸ್ತಿಗಳ ಪ್ರದಾನ

    ಚಿಂತಾಮಣಿ: ಕಸಾಪ ಚಿಕ್ಕಬಳ್ಳಾಪುರ ಜಿಲ್ಲಾ ಘಟಕದಿಂದ ನಗರದ ನಗರದ ಡಿಲಿಜನ್ಸ್ ಸಂಯುಕ್ತ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಗಡಿಸಿರಿ-2021 ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ರಾಜ್ಯೋತ್ಸವ ಸ್ಮರಣೆಯಲ್ಲಿ ಶಾಲೆಯಲ್ಲಿ ನಿರ್ಮಿಸಲಾದ ದ್ವಜಕಟ್ಟೆಯನ್ನು ಅನಾವರಣ ಮಾಡಲಾಯಿತು.

    ಕರುನಾಡ ಸೇವಾರತ್ನ, ಸಾಹಿತ್ಯ ರತ್ನ, ಸಾಹಿತ್ಯ ಸೇವಾರತ್ನ, ಸಮಾಜ ಸೇವಾರತ್ನ, ವೈದ್ಯಕೀಯ ಸೇವಾರತ್ನ, ಜಾನಪದ ಕಲಾರತ್ನ, ಸಾಹಿತ್ಯ ಪರಿಚಾರಕ ರತ್ನ, ಶಿಕ್ಷಕ ಸಂಘಟನಾ ರತ್ನ, ಶಿಕ್ಷಣ ಸೇವಾರತ್ನ, ಪರಿಸರ ಸೇವಾ ರತ್ನ, ಧಾರ್ಮಿಕ ಸೇವಾ ರತ್ನ, ಕಾಯಕರತ್ನ ಹಾಗೂ ಸಾಧನೆಗೈದ ಪುಟಾಣಿಗಳಿಗೆ ಬಾಲರತ್ನ ಸೇರಿ 15 ರತ್ನ ಪ್ರಶಸ್ತಿಗಳನ್ನು ಪದಾನ ಮಾಡಲಾಯಿತು.

    ಕಲಾಂ ವರ್ಲ್ಡ್ ರೆಕಾರ್ಡ್ಸ್ ವಿಜೇತೆ ಚಿಕ್ಕಬಳ್ಳಾಪುರದ ಜಾನ್ವಿ ವಿನೋದ್ ಕುಮಾರ್ ಮತ್ತು ಏರೋನಾಟಿಕ್ಸ್ ಇಂಜಿನಿಯರಿಂಗ್‌ನಲ್ಲಿ ನೂತನ ಡಿಸೈನ್ ಆವಿಷ್ಕಾರದಲ್ಲಿ ದೇಶಕ್ಕೆ ಪ್ರಥಮ ಸ್ಥಾನ ಪಡೆದ ಗುಡಿಬಂಡೆಯ ಕೀರ್ತಿ ಹಾಗೂ 2020-21ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪೂರ್ಣಾಂಕ ಪಡೆದ ಜಿಲ್ಲೆಯ 30 ಮಂದಿ ಬಾಲ ಪ್ರತಿಭೆಗಳಿಗೆ ಬಾಲರತ್ನ ಪ್ರಶಸ್ತಿಯೊಂದಿಗೆ ನೀಡಲಾಯಿತು.

    ವಿಭಿನ್ನ ಕಾರ್ಯಕ್ರಮಗಳಿಂದ ಚಿಕ್ಕಬಳ್ಳಾಪುರ ಜಿಲ್ಲಾ ಕಸಾಪ ರಾಜ್ಯಕ್ಕೆ ಮಾದರಿಯಾಗಿದೆ, ಕೈವಾರ ತಾತಯ್ಯ ಕುರಿತ ರಾಷ್ಟ್ರಮಟ್ಟದ ಕವನ ಸ್ಪರ್ಧೆ, ರಾಷ್ಟ್ರಮಟ್ಟದ ವಿಚಾರ ಸಂಕೀರ್ಣ, ಮೈಸೂರಿನ ಭಾಷಾ ಸಂಸ್ಥಾನದ ಸಹಯೋಗದಲ್ಲಿ ಅಭಿಜಾತ ಕನ್ನಡದ ಅಧ್ಯಯನ ಶಿಬಿರ, ಸಹಕಾರ ಮಹಾ ಮಂಡಲದ ಸಹಯೋಗದಲ್ಲಿ ಕೃಷಿ ಸಾಹಿತ್ಯ ಸಮಾವೇಶ, ಸರ್.ಎಂ.ವಿಶ್ವೇಶ್ವಯ್ಯ ಜನ್ಮಭೂಮಿಯಲ್ಲಿ ವಿಜ್ಜಾನ ಸಮಾವೇಶ, ಇಸ್ರೋ ಸಹಯೋಗದಲ್ಲಿ ಚಂದ್ರಯಾನ ಕುರಿತಂತೆ ವಿಜ್ಞಾನ ವಸ್ತು ಪ್ರದರ್ಶನ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಕೈವಾರ ಶ್ರೀನಿವಾಸ್ ಹೇಳಿದರು.

    ರಾಷ್ಟಮಟ್ಟದ ಎರಡು, ರಾಜ್ಯಮಟ್ಟದ ಆರು ಕಾರ್ಯಕ್ರಮಗಳು, ಮೂರು ಜಿಲ್ಲಾ ಸಮ್ಮೇನಗಳು 13 ತಾಲೂಕು ಸಮ್ಮೇಳನಗಳ ಜತೆಗೆ ತತ್ವಾಮೃತ, ಗಾನಮೃತ ಮನೆಯಂಗಳದಲ್ಲಿ ನುಡಿಸಿರಿ, ಶಾಲೆಯಂಗಳದಲ್ಲಿ ನುಡಿಸಿರಿ, ಕಸಾಪ ನಡೆ ಸಾಧಕರ ಕಡೆ, ವನಸಿರಿ-ನುಡಿಸಿರಿ, ಪುಸ್ತಕ ಓದೋಣ ಬನ್ನಿ, ಸೈನಿಕರಿಗೊಂದು ಸಲಾಂ, ಅಕ್ಷರ ಸಂಕ್ರಾಂತಿ, ಗಡಿಸಿರಿ, ದಸರಾ ಕವಿಗೋಷ್ಟಿ, ಕನ್ನಡ ನಿತ್ಯೋತ್ಸವ, ಆಯ್ದ ಶಾಲೆಗಳಲ್ಲಿ ರಾಜ್ಯೋತ್ಸವ ಸ್ಮರಣೆಯಲ್ಲಿ ದ್ವಜಕಟ್ಟೆಗಳ ಸ್ಥಾಪಿಸುವ ಮೂಲಕ ಕನ್ನಡ ಕಟ್ಟುವ ಕಾರ್ಯ ಮಾಡಲಾಗಿದ ಎಂದರು.

    ಜಿಲ್ಲಾ ಕರವೇ ಅಧ್ಯಕ್ಷ ಅಂಬರೀಷ್, ಸಿಂಹಸೇನೆಯ ಸಂಚಾಲಕಿ ಪಂಕಜಲಕ್ಷ್ಮೀ, ಶಿಕ್ಷಕರಾದ ನಂಜಪ್ಪ, ಎಂ.ರಾಜಣ್ಣ, ರಾಮಚಂದ್ರಸಿಂಗ್, ಕಸಾಪ ಗೌರವ ಕಾರ್ಯದರ್ಶಿ ಬಿ.ಸಿ.ಜನಾರ್ಧನ್, ಕೋಶಾಧ್ಯಕ್ಷ ಇಸಾಕ್‌ಖಾನ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts