More

    ವಿವಿಧೆಡೆ ಸರಳವಾಗಿ ನಡೆದ ಜಯಂತ್ಯುತ್ಸವ

    ಚಿಂಚೋಳಿ: ಪಟ್ಟಣ ಸೇರಿ ತಾಲೂಕಿನಾದ್ಯಂತ ಭಾನುವಾರ ಸರಳವಾಗಿ ಶ್ರೀ ಬಸವೇಶ್ವರ ಜಯಂತಿ ಆಚರಿಸಲಾಯಿತು.
    ಪಟ್ಟಣದ ಬಸವೇಶ್ವರ ವೃತ್ತದಲ್ಲಿ ತಹಸೀಲ್ದಾರ್ ಅರುಣಕುಮಾರ ಕುಲಕರ್ಣಿ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಡಿವೈಎಸ್ಪಿ ಇ.ಎಸ್. ವೀರಭಧ್ರಯ್ಯ, ಸಿಪಿಐ ಇಂಗಳೇಶ್ವರ, ಪಿಎಸ್ಐ ರಾಜಶೇಖರ ರಾಠೋಡ್ ಇತರರಿದ್ದರು.
    ಶಾಸಕ ಡಾ. ಅವಿನಾಶ ಜಾಧವ್, ಕಾಂಗ್ರೆಸ್ ವಕ್ತಾರ ಸುಭಾಷ ರಾಠೋಡ್ ಮಾಲಾರ್ಪಣೆ ಮಾಡಿದರು. ಬಾಬುರಾವ ಪಾಟೀಲ್, ಗೌತಮ ಪಾಟೀಲ್, ಅಜೀತ ಪಾಟೀಲ್, ಸಂತೋಷ ಗಡಂತಿ, ಶ್ರೀಮಂತ ಕಟ್ಟಿಮನಿ, ಜಗದೀಶಸಿಂಗ್ ಠಾಕೂರ್, ಆರ್.ಗಣಪತರಾವ, ಗೋಪಾಲರಾವ ಕಟ್ಟಿಮನಿ, ಕೆ.ಎಂ.ಬಾರಿ, ಅಬ್ದುಲ್ ಬಾಸೀದ್, ಲಕ್ಷ್ಮಣ ಅವಂಟಿ, ರವಿಕಾಂತ ಹೊಸಬಾಯಿ, ಭೀಮಶೆಟ್ಟಿ ಮುರುಡಾ ಇದ್ದರು.
    ಮಲ್ಲಿಕಾರ್ಜುನ ದೇವಾಲಯದಲ್ಲಿ ಬಸವಾಭಿಮಾನಿಗಳು, ಛತ್ರಪತಿ ಶಿವಾಜಿ ತರುಣ ಸಂಘದಿಂದ ಜಯಂತಿ ಆಚರಿಸಲಾಯಿತು. ವಸಂತ ಇಟಗಿ, ಸಚ್ಚಿದಾನಂದ ಸುಂಕದ, ರಾಜು ಸ್ವಾಮಿ, ನಾಗರಾಜ ಮಲಕೋಡ, ಸಂಕೇತ ಬಬಲಾದಿ, ಉದಯಕುಮಾರ ಮಾಕಾ, ಆನಂದ ಗೌಳಿ, ವಿರೇಶ ಸೀಳಿನ್, ಹಣಮಂತರಾವ ಕೋರಿ, ಸಂಗಮೇಶ ಸುಂಕದ ಇದ್ದರು.
    ಚಂದಾಪುರದ ಬಿಜೆಪಿ ಕಚೇರಿಯಲ್ಲಿ ಶಾಸಕ ಡಾ. ಅವಿನಾಶ ಜಾಧವ್ ಬಸವೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಬಿಜೆಪಿ ತಾಲೂಕು ಅಧ್ಯಕ್ಷ ಸಂತೋಷ ಗಡಂತಿ, ಪ್ರಮುಖರಾದ ಶ್ರೀಮಂತ ಕಟ್ಟಿಮನಿ, ಭೀಮಶೆಟ್ಟಿ ಮುರುಡಾ, ಬಾಬುರಾವ ಪಾಟೀಲ್, ಶಶಿಧರ ಸೂಗೂರ್, ಅಶೋಕ ಚವ್ಹಾಣ್, ಅಜೀತ ಪಾಟೀಲ್, ಅಲ್ಲಮಪ್ರಭು ಪಾಟೀಲ್, ಆಕಾಶ ಕೊಳ್ಳೂರ್, ಚಂದ್ರಶೆಟ್ಟಿ ಜಾಧವ್, ವಿಜಯಕುಮಾರ ರಾಠೋಡ್, ನೀಲಕಂಠ ರಾಠೋಡ್ ಇದ್ದರು.
    ಚೆಂಗಟಾದಲ್ಲಿ ಸರಳವಾಗಿ ಜಯಂತ್ಯುತ್ಸವ ನಿಮಿತ್ತ ಕರೊನಾ ನಿಯಂತ್ರಣಕ್ಕಾಗಿ ಶ್ರಮಿಸುತ್ತರುವ ಆಶಾ, ಅಂಗನವಾಡಿ ಕಾರ್ಯಕತರ್ೆಯರು ಹಾಗೂ ವೈದ್ಯರನ್ನು ಸನ್ಮಾನಿಸಲಾಯಿತು. ರೇವಣಸಿದ್ದಪ್ಪ ಸಾಹು, ಶಾಮರಾವ ಪ್ರಭು, ಮಹೇಶ ದೇಸಾಯಿ, ವಿಜಯಪ್ರಭು, ಶರಣು ಕೋಡ್ಲಿ, ಶರಣು ಪ್ರಭು, ಮಲ್ಲಾಗೌಡ ಪಾಟೀಲ್, ಶಿವು ಹೇನಿ, ಜಗನ್ನಾಥ ಹಾಗರಗಿ, ರಾಜು ಶರಣ, ನಾಗೇಶ ಡೊಂಗರಗಿ, ಸತೀಶ ಸಜ್ಜನ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts