More

    ವಿರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಅವ್ಯವಹಾರ

    ವಿರಾಜಪೇಟೆ: ವಿರಾಜಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆದಿದ್ದು, ದಾಖಲೆ ಸಹಿತ ಲೋಕಾಯುಕ್ತಕ್ಕೆ ದೂರು ನೀಡಲಾಗಿದ್ದು, ತನಿಖೆ ಆರಂಭಗೊಂಡಿದೆ ಎಂದು ಜಯಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ಮಂಡೇಟ್ಟಿರ ಅನಿಲ್ ಅಯ್ಯಪ್ಪ ಹೇಳಿದರು.


    ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಜೆ.ಶ್ರೀನಿವಾಸ್ ವಿರುದ್ಧ ಡಿಸೆಂಬರ್ 22ರಂದು ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಕಳೆದ 2 ವರ್ಷದ ಹಿಂದೆ ಖರೀದಿ ಮಾಡಿದ ಪೀಠೋಪಕರಣಗಳನ್ನು ಸಾರ್ವಜನಿಕ ಟೆಂಡರ್ ಕರೆಯದೆ ತಮಗೆ ಇಷ್ಟ ಬಂದವರಿಗೆ ಲಕ್ಷಾಂತರ ರೂ.ಗಳಿಗೆ ಮಾರಾಟ ಮಾಡಿ ಸರ್ಕಾರಕ್ಕೆ ಕೇವಲ 15 ಸಾವಿರ ರೂ. ಲೆಕ್ಕ ತೋರಿಸಲಾಗಿದೆ. ಹೊರರೋಗಿಗಳಿಗೆ ನೀಡುವ ಚೀಟಿ ದರವನ್ನು 5 ರೂ.ಗಳಿಂದ 10 ರೂ.ಗೆ ಏರಿಕೆ ಮಾಡಲಾಗಿದೆ. ಹಳೆಯ ಎ.ಸಿಗೆ ಹೊಸ ಹೊರ ಕವಚ ಹಾಕಿ ಹೊಸದೆಂದು ಬಿಂಬಿಸಲಾಗಿದೆ. ಹಿಂದೆ ಪಿರಿಯಾಪಟ್ಟಣದಲ್ಲಿ ಕರ್ತವ್ಯದಲ್ಲಿದ್ದಾಗ ಮೂರು ಕೋಟಿ ರೂ.ಗೂ ಅಧಿಕ ಅವ್ಯವಹಾರ ನಡೆಸಿ 2 ಬಾರಿ ಲೋಕಾಯುಕ್ತ ಬಲೆಗೆ ಬಿದ್ದು ಈಗಲೂ ತನಿಖೆ ಎದುರಿಸುತ್ತಿದ್ದಾರೆ. ತಮ್ಮ ಕೆಲಸಕ್ಕೆ ಉಪಯೋಗವಾಗುವಂತೆ ತಮಗೆ ಬೇಕಾದ ಇಬ್ಬರು ಸಿಬ್ಬಂದಿಯನ್ನು ಪಿರಿಯಾಪಟ್ಟಣದಿಂದ ಇಲ್ಲಿಗೆ ವರ್ಗ ಮಾಡಿಸಿಕೊಂಡಿದ್ದಾರೆ. ಇವರನ್ನು ಇಲ್ಲಿಯೇ ಮುಂದುವರೆಸಿದರೆ ಸರ್ಕಾರದ ಗಮನಕ್ಕೆ ತಾರದೆ ಆಸ್ಪತ್ರೆಯನ್ನು ಮಾರಾಟ ಮಾಡಿದರೂ ಅಚ್ಚರಿ ಪಡುವಂತಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.


    ಆಸ್ಪತ್ರೆಯ ಮುಂಭಾಗದಲ್ಲಿರುವ ಕ್ಯಾಂಟೀನ್ ನಿಯಮ ಬಾಹಿರವಾಗಿದ್ದು, ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಕ್ಯಾಂಟೀನ್ ಅಶುಚಿತ್ವದಿಂದ ಕೂಡಿದ್ದು, ದರಗಳಲ್ಲಿಯು ವ್ಯತ್ಯಾಸ ಕಂಡುಬರುತ್ತಿದೆ. ವೈದ್ಯಾಧಿಕಾರಿಗಳ ಬೇಡಿಕೆಯಂತೆ ಮಾಂಸಹಾರ ಮಾಡುತ್ತಿದ್ದಾರೆ. ರಜಾ ದಿನಗಳಲ್ಲಿ ಪಾನಗೋಷ್ಠಿಗಳು ನಡೆಯುತ್ತಿದೆ. ಎಲ್ಲರನ್ನು ಒಲೈಸಲು ಖಾಸಗಿ ಕೋಣೆಯನ್ನು ನಿರ್ಮಾಣ ಮಾಡಿಕೊಂಡಿದ್ದು, ಎಲ್ಲ ವ್ಯವಹಾರಗಳು ನಡೆಯುತ್ತಿದೆ. ರಾತ್ರಿ 8 ಗಂಟೆಯ ನಂತರ ಅನೈತಿಕ ಚಟುವಟಿಕೆಗಳು ನಡೆಯುತ್ತಿದೆ. ಇವೆಲ್ಲವನ್ನು ಪ್ರಶ್ನೆ ಮಾಡುತ್ತಿರುವ ನಮ್ಮ ಮೇಲೆ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸುತ್ತಿದ್ದಾರೆ ಎಂದು ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ ಎಂಬ ವಿಚಾರ ತಿಳಿದು ಬಂದಿದೆ. ಸಾರ್ವಜನಿಕರ ಹಿತಾದೃಷ್ಟಿಯಿಂದ ಪ್ರಕರಣವನ್ನು ಎದುರಿಸಲು ಸಿದ್ಧರಿದ್ದೇವೆ ಎಂದು ಹೇಳಿದರು.

    ಮಂಡೇಟಿರ ಪೊನ್ನಪ್ಪ, ಭೀಮಯ್ಯ, ಮತ್ಯಾಸ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts