More

    ವಿದ್ಯುತ್ ಶುಲ್ಕ ಪರಿಷ್ಕರಣೆಗೆ ಆಕ್ರೋಶ – ದಾವಣಗೆರೆ ಜಿಲ್ಲಾ ವಾಣಿಜ್ಯ ಮಹಾಸಂಸ್ಥೆ ಮನವಿ  

    ದಾವಣಗೆರೆ: ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ಇತ್ತೀಚೆಗೆ ವಿದ್ಯುತ್ ಶುಲ್ಕ ಪರಿಷ್ಕರಣೆ ಮಾಡಿರುವುದು ಅವೈಜ್ಞಾನಿಕವಾಗಿದ್ದು, ಇದನ್ನು ಕೂಡಲೆ ಕೈಬಿಡಬೇಕೆಂದು ದಾವಣಗೆರೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಆಗ್ರಹಿಸಿದೆ.

    ಈ ಸಂಬಂಧ ಗುರುವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮೆರವಣಿಗೆ ನಡೆಸಿದ ಪದಾಧಿಕಾರಿಗಳು, ವರ್ತಕರು ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
    ಇತ್ತೀಚೆಗೆ ಶುಲ್ಕ ಹೆಚ್ಚಿಸಿ ಮಾಡಲಾದ ಆದೇಶದಿಂದ ಎಲ್ಲ ರೀತಿಯ ಗ್ರಾಹಕರು ದಿಗ್ಭ್ರಾಂತರಾಗಿದ್ದಾರೆ. ಗೃಹ ವಿದ್ಯುತ್ ಹಾಗೂ ಕೈಗಾರಿಕೆಗಳ ವಿದ್ಯುತ್ ದರವನ್ನೂ ಹೆಚ್ಚಿಸಲಾಗಿದೆ. ಕೂಡಲೆ ಇದನ್ನು ಮರು ವಿಮರ್ಶಿಸಿ ಯಾರಿಗೂ ಹೊರೆ ಆಗದಂತೆ ಕಡಿಮೆ ಂಆಡಲು ಜನರು ಹಾಗೂ ಸಂಘ ಸಂಸ್ಥೆಗಳು ಮನವಿ ಮಾಡಿದ್ದರೂ ಸಮಸ್ಯೆ ಬಗೆಹರಿದಿಲ್ಲ.
    ಅನುಭವಿ ಮತ್ತು ನುರಿತ ರಾಜಕಾರಣಿಯಾಗಿರುವ ಸಿದ್ದರಾಮಯ್ಯ ಅವರು ಮತ್ತೊಮ್ಮೆ ಮುಖ್ಯಮಂತ್ರಿಯಾಗಿದ್ದಾರೆ. ಕಲ್ಯಾಣ ರಾಜ್ಯದ ಜನರಿಗೆ ಸುಖ- ಸಮೃದ್ಧಿಯ ಆಶಯಗಳನ್ನು ಪೂರೈಸಬೇಕು. ಎಷ್ಟೆ ತೊಂದರೆ ಎದುರಾದರೂ ಎದುರಿಸಿ ಉತ್ತಮ ಅಧಿಕಾರ ನೀಡುವ ಭರವಸೆಯಲ್ಲಿದ್ದೇವೆ. ಕೂಡಲೆ ಈ ಬಗ್ಗೆ ಗಮನ ಹರಿಸಬೇಕು ಎಂದು ಮನವಿ ಮಾಡಿದರು.
    ಈಗಾಗಲೆ ಸರ್ಕಾರದ ಗಮನ ಸೆಳೆಯಲು ಬಂದ್ ಮಾಡಲಾಗಿದೆ. ಮುಖ್ಯಮಂತ್ರಿಗಳು ಈ ವಿಚಾರದಲ್ಲಿ ಜಾಗ್ರತೆ ವಹಿಸಿ ಸಮಸ್ಯೆ ಪರಿಹರಿಸಲು ಗಮನ ನೀಡಬೇಕು ಎಂದು ಕೋರಿದರು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಕಾರ್ಯದರ್ಶಿ ಅಜ್ಜಂಪುರಶೆಟ್ರು ಶಂಭುಲಿಂಗಪ್ಪ, ಕಿರುವಾಡಿ ಸೋಮಶೇಖರ್, ಟಿ.ಎಸ್. ಜಯರುದ್ರೇಶ್, ಕಾಸಲ್ ಬದರೀನಾಥ್, ಕೆ. ಜಾವಿದ್, ಅಂದನೂರು ಮುಪ್ಪಣ್ಣ, ಬುಳ್ಳಾಪುರ ಮಲ್ಲಿಕಾರ್ಜುನ, ಎಸ್.ಟಿ.ಕುಸುಮಶೆಟ್ಟಿ, ಲೆಕ್ಕ ಪರಿಶೋಧಕ ಜಂಬಗಿ ರಾದೇಶ್, ಬಿ,.ಎಚ್.ಪ್ರಕಾಶ್, ಐನಳ್ಳಿ ನಾಗರಾಜ್, ಎಂ.ಎನ್. ಶ್ರೀಧರ್ ಇತರರಿದ್ದರು.
    —-

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts