More

    ವಿದ್ಯುತ್ ಪ್ರಸರಣ ಘಟಕಕ್ಕೆ ಮುತ್ತಿಗೆ

    ಮುಂಡರಗಿ: ನೀರಾವರಿ ಪಂಪ್​ಸೆಟ್​ಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಸಬೇಕು ಎಂದು ಒತ್ತಾಯಿಸಿ ಪಟ್ಟಣ ಮತ್ತು ಬರದೂರ ಗ್ರಾಮದ ರೈತರು ಬುಧವಾರ ಸಂಜೆ ಸ್ಥಳೀಯ ವಿದ್ಯುತ್ ಪ್ರಸರಣ ಘಟಕಕ್ಕೆ ದಿಢೀರ್ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

    ರೈತರ ಪಂಪ್​ಸೆಟ್​ಗಳಿಗೆ ಬೆಳಗಿನ ಸಮಯದಲ್ಲಿ ಒಮ್ಮೆ ಎರಡು ತಾಸು, ಮತ್ತೊಂದು ದಿನ ನಾಲ್ಕು ತಾಸು ವಿದ್ಯುತ್ ಪೂರೈಸಲಾಗುತ್ತಿದೆ. ನಿಗದಿತ ಸಮಯಕ್ಕೆ ವಿದ್ಯುತ್ ಪೂರೈಸುತ್ತಿಲ್ಲ. ಇದರಿಂದ ರೈತರಿಗೆ ತೊಂದರೆಯಾಗುತ್ತಿದ್ದು, ನಿಗದಿತ ಸಮಯಕ್ಕೆ ನೀರು ಹಾಯಿಸಲಾಗದೇ ಬೆಳೆಗಳು ಒಣಗುತ್ತಿವೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

    ಹಸಿರು ಸೇನೆ ಜಿಲ್ಲಾಧ್ಯಕ್ಷ ಶಿವಾನಂದ ಇಟಗಿ ಮಾತನಾಡಿ, ರೈತರ ಪಂಪ್​ಸೆಟ್​ಗಳಿಗೆ ಬೆಳಗ್ಗೆ 8ರಿಂದ 12 ಗಂಟೆಯವರೆಗೆ ಹಾಗೂ ರಾತ್ರಿ 10 ಗಂಟೆಯಿಂದ 1 ಗಂಟೆಯವರೆಗೆ ಸಮರ್ಪಕವಾಗಿ ವಿದ್ಯುತ್ ಪೂರೈಸಬೇಕು. ಸಮಸ್ಯೆ ಕುರಿತು ಹೇಳಲು ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿದರೆ ಅವರು ಕರೆ ಸ್ವೀಕರಿಸುವುದಿಲ್ಲ. ಕೆಲವರು ವಿನಾಕಾರಣ ನೆಟ್​ವರ್ಕ್ ಇಲ್ಲ ಎಂದು ಸಬೂಬು ಹೇಳುತ್ತಾರೆ. ರೈತರ ಬಗ್ಗೆ ನಿಷ್ಕಾಳಜಿ ತೋರುವುದು ಸರಿಯಲ್ಲ. ರೈತರಿಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.

    ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಹೆಸ್ಕಾಂ ಎಇಇ ಪಾಂಡುರಂಗ ತಳವಾರ, ರೈತರ ಸಮಸ್ಯೆಗಳನ್ನು ನಿವಾರಿಸಲಾಗುವುದು. ರೈತರ ಬೇಡಿಕೆಯಂತೆ ಸಮರ್ಪಕವಾಗಿ ನಿಯಮಿತ ಸಮಯದಲ್ಲಿ ವಿದ್ಯುತ್ ಪೂರೈಸಲಾಗುವುದು ಎಂದು ಭರವಸೆ ನೀಡಿದರು.

    ನಂತರ ರೈತರು ಪ್ರತಿಭಟನೆ ಹಿಂಪಡೆದರು.

    ರಾಘವೇಂದ್ರ ಕುರಿ, ಶರಣಪ್ಪ ಕೊಂಬಳಿ, ಹನುಮಂತ್ಪಪ್ಪ ಕುರಿ, ಬೀರಪ್ಪ ಮಲ್ಲಾರ್ಜಿ, ಕನಕಪ್ಪ ಕುರಿ, ದುರುಗಪ್ಪ ಚಿಕ್ಕಣ್ಣವರ, ಈರಣ್ಣ ಸೀರಿ, ರಾಮಣ್ಣ ಕುರಿ, ಬಸವರಾಜ ಗಡಾದ, ಸುಭಾಷ ಹಳ್ಯಾಳ, ಅಂದಪ್ಪ ಕುರಿ, ಷಣ್ಮುಖಪ್ಪ ಗಡಾದ ಇತರರಿದ್ದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts