More

    ವಿದ್ಯುತ್ ಪೂರೈಕೆ ವ್ಯವಸ್ಥೆ ಸರಿಪಡಿಸಿ

    ಕುಮಟಾ: ತಾಲೂಕಿನ ಅಳಕೋಡ ಪಂಚಾಯಿತಿ ವ್ಯಾಪ್ತಿಯ ಹೆಬೈಲ್ ಗ್ರಾಮದ ಹುಣಸೆಕೊಪ್ಪ ಮಜರೆಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ಗಂಭೀರ ಸಮಸ್ಯೆ ಇದೆ. ಈ ಬಗ್ಗೆ ಹೆಸ್ಕಾಂಗೆ ಸೂಕ್ತ ನಿರ್ದೇಶನ ನೀಡಿ ಸಮಸ್ಯೆ ಪರಿಹರಿಸಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಶಾಸಕ ದಿನಕರ ಶೆಟ್ಟಿ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

    ಹುಣಸೆಕೊಪ್ಪದಲ್ಲಿ 25ಕ್ಕೂ ಹೆಚ್ಚು ಮನೆಗಳಿವೆ. ಅಲ್ಲಿ ಹತ್ತಾರು ವರ್ಷಗಳ ಹಿಂದೆ ಅಳವಡಿಸಿರುವ ಟ್ರಾನ್ಸ್​ಫಾರ್ಮರ್ ಸಾಮರ್ಥ್ಯ ತೀರಾ ಕಡಿಮೆ ಇದೆ. ಇದರಿಂದಾಗಿ ಮನೆ ಬಳಕೆಗೂ ಸಮರ್ಪಕ ವಿದ್ಯುತ್ ಪೂರೈಕೆ ಇಲ್ಲ. ಜತೆಗೆ ನೀರಾವರಿ ಪಂಪ್​ಗಳು ಕೂಡ ಸರಿಯಾಗಿಲ್ಲ. ಮಳೆ ಕಡಿಮೆಯಾಗಿ ತೋಟಕ್ಕೆ ನೀರುಣಿಸಬೇಕಾದ ಸಂದರ್ಭದಲ್ಲಿ ಪಂಪ್ ಬಳಸಲಾಗದ ಸ್ಥಿತಿ ನಿರ್ವಣವಾಗಿದೆ. ತೋಟ ಒಣಗುತ್ತಿದೆ. ಹೆಸ್ಕಾಂ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದರೂ ಪ್ರಯೋಜನವಾಗಿಲ್ಲ. ಹೀಗಾಗಿ ಶೀಘ್ರದಲ್ಲಿ ಸಮಸ್ಯೆ ಪರಿಹರಿಸಬೇಕು ಎಂದು ಗ್ರಾಮಸ್ಥರು ವಿನಂತಿಸಿದರು.

    ಪ್ರತಿಕ್ರಿಯಿಸಿದ ಶಾಸಕ ದಿನಕರ ಶೆಟ್ಟಿ, ಕೂಡಲೆ ಹೆಸ್ಕಾಂ ಅಧಿಕಾರಿಗಳನ್ನು ಕರೆಯಿಸಿ ರ್ಚಚಿಸಿದರು. ಸಮಸ್ಯೆ ಪರಿಶೀಲಿಸಿ, ಸೂಕ್ತ ಕ್ರಮವಹಿಸಿ ವರದಿ ಕೊಡುವಂತೆ ಸೂಚಿಸಿದರು. ಈ ವೇಳೆ ಜಿಪಂ ಸದಸ್ಯ ಗಜಾನನ ಪೈ, ಹುಣಸೆಕೊಪ್ಪದ ವಿನಾಯಕ ನಾಯ್ಕ, ಗಣಪತಿ ನಾಯ್ಕ, ಜಟ್ಟಿ, ಸುಬ್ರಾಯ, ನಾಗರಾಜ, ವೆಂಕಟ್ರಮಣ, ಮಂಜುನಾಥ, ರಾಘವೇಂದ್ರ ಇತರರು ಇದ್ದರು.

    ಕರ್ನಾಟಕ ವಸತಿ ಶಿಕ್ಷಣ ನಿರ್ದೇಶನಾಲಯ ರಚಿಸಲು ಮನವಿ:
    ರಾಜ್ಯ ವಸತಿ ಶಿಕ್ಷಣ ಸಂಸ್ಥೆಗಳ ಸಂಘವನ್ನು ಕರ್ನಾಟಕ ವಸತಿ ಶಿಕ್ಷಣ ನಿರ್ದೇಶನಾಲಯ ಎಂದು ಬದಲಾಯಿಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನ ಮಾಡುವಂತೆ ವಸತಿ ಶಾಲೆಗಳ ನೌಕರರ ಸಂಘದ ಸದಸ್ಯರು ಶಾಸಕ ದಿನಕರ ಶೆಟ್ಟಿ ಅವರಿಗೆ ಸೋಮವಾರ ಮನವಿ ಮಾಡಿದರು.

    ಮೊರಾರ್ಜಿ ದೇಸಾಯಿ, ರಾಣಿ ಚನ್ನಮ್ಮ, ಅಟಲ್ ಬಿಹಾರಿ ವಾಜಪೇಯಿ, ಡಾ. ಅಂಬೇಡ್ಕರ್, ಇಂದಿರಾಗಾಂಧಿ ಹಾಗೂ ಪ.ಜಾ., ಪ.ಪಂ., ಹಿಂದುಳಿದ ವರ್ಗದ ವಸತಿ ಶಾಲೆಗಳು ಸೇರಿ ಒಟ್ಟು 826 ವಸತಿ ಶಾಲೆ- ಕಾಲೇಜ್​ಗಳನ್ನು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ನಿರ್ವಹಿಸುತ್ತಿದೆ. 16 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಸಂಘದ ಅಧೀನದ ಶಾಲೆ, ಕಾಲೇಜ್​ಗಳಲ್ಲಿ 2011 ರಿಂದ 5,132 ಕಾಯಂ ಶಿಕ್ಷಕರು, ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಅವರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಎಂದು ಒತ್ತಾಯಿಸಿದರು.

    ಈ ವೇಳೆ ವಸತಿ ಶಾಲೆಗಳ ನೌಕರರ ಸಂಘದ ಪದಾಧಿಕಾರಿಗಳಾದ ಲಕ್ಷ್ಮೀ ಶೆಟ್ಟಿ, ರಮೇಶ ನಾಯ್ಕ, ಅನುರಾಧಾ ಗಾಣಿಗೇರ, ನಾರಾಯಣ ನಾಯಕ, ಮನೋಹರ ನಾಯಕ, ಕೃಷ್ಣಮೂರ್ತಿ ಪಟಗಾರ, ಸುಪ್ರಿಯಾ ಮಣಕಿಕರ, ವಿಷ್ಣು ಗಾವಡಿ, ವಿನೋದ ನಾಯಕ, ಮಧುರಾ ದೇಸಾಯಿ, ಪ್ರವೀಣ ನಾಯ್ಕ, ಕವಿತಾ ಕಡವಿನಬಾಗಿಲು, ಸುಷ್ಮಾ, ಪ್ರಿಯಾ, ವಿಕ್ರಮ್ ನಾಗರಾಜ ಹೆದ್ದಾರಿಮನೆ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts