More

    ವಿದ್ಯುತ್ ಉಪವಿಭಾಗ ಸ್ಥಾಪನೆ ಶೀಘ್ರ

    ಕಮಲಾಪುರ (ಕಲಬುರಗಿ): ಪಟ್ಟಣದಲ್ಲಿ ವಿದ್ಯುತ್ ಉಪವಿಭಾಗ ಸ್ಥಾಪನೆಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಿದ್ದು, ಹಣಕಾಸು ಇಲಾಖೆಯ ಮಂಜೂರಾತಿ ಹಂತದಲ್ಲಿದೆ. ಎಲ್ಲ ಪ್ರಕ್ರಿಯೆ ಮುಗಿಸಿ, ಶೀಘ್ರ ವಿಭಾಗ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಬಸವರಾಜ ಮತ್ತಿಮಡು ಹೇಳಿದರು.

    ಪಟ್ಟಣದ ಆಕೃತಿ ಕಲ್ಯಾಣ ಮಂಟಪದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಉಜ್ವಲ್ ಭಾರತ ಉಜ್ವಲ್ ಭವಿಷ್ಯ ಇಂಧನ 2047 ವಿದ್ಯುತ್ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಪ್ರತಿ ಮನೆಗೂ ವಿದ್ಯುತ್ ಸಂಪರ್ಕ ಕಲ್ಪಿಸಲು ಪಂಡಿತ ದೀನ್ ದಯಾಳ್ ಉಪಾಧ್ಯಾಯ ಯೋಜನೆಯಡಿ ಅನುದಾನ ಒದಗಿಸುತ್ತಿದ್ದಾರೆ. ಅಲ್ಲದೇ ಸಿಎಂ ಬಸವರಾಜ ಬೊಮ್ಮಾಯಿ ಅವರು ಹಲವಾರು ಯೋಜನೆಗಳನ್ನು ಜಾರಿಗೊಳಿಸಿ ಗ್ರಾಮೀಣ ಪ್ರದೇಶದ ಪ್ರಗತಿಗೆ ಶ್ರಮಿಸುತ್ತಿದ್ದಾರೆ.

    ಜಿಪಂ ಮಾಜಿ ಸದಸ್ಯ ಶರಣಗೌಡ ಪಾಟೀಲ್, ಕಲಬುರಗಿ ಜೆಸ್ಕಾಂ ಮುಖ್ಯ ಇಂಜಿನಿಯರ್ ಆರ್.ಡಿ.ಚಂದ್ರಶೇಖರ್ ಮಾತನಾಡಿದರು.

    ಜೆಸ್ಕಾಂ ಅಧೀಕ್ಷಕ ಇಂಜಿನಿಯರ್ ಸಿದ್ದಪ್ಪ ಬೆಂಜಗೇರಿ, ಪ್ರಮುಖರಾದ ರಾಜಕುಮಾರ ಕೋಟೆ, ಸಂಗಮೇಶ ವಾಲಿ, ಬಸವರಾಜ ಪಾಟೀಲ್, ರಾಜೇಶ, ಬಾಬು ಕೋರೆ, ಸತೀಶ ಸೊರಡೆ, ದೀಪಕ ಹೊಡಲ್, ಶಿವಕುಮಾರ, ಗಣಪತಿ ಮರ್ಪಳ್ಳಿ, ಉದಯಕುಮಾರ ರಟಕಲ್, ಪರಮೇಶ್ವರ ಓಕಳಿ, ಅಮೃತ ಗೌರೆ, ಶರಣಗೌಡ ಹರಕಂಚಿ, ಸುರೇಶ ರಾಠೋಡ್, ಅಮೃತ ಸಾಗರ ಇತರರಿದ್ದರು.

    ಪ್ರತಿ ಹಳ್ಳಿಯ ಮನೆಗೂ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂಬುದು ಸರ್ಕಾರದ ಧ್ಯೇಯವಾಗಿದೆ. ಕ್ಷೇತ್ರದ ಕೆಲ ಗ್ರಾಮಗಳಲ್ಲಿ ನಿಗದಿತ ಸಮಯಕ್ಕೆ ವಿದ್ಯುತ್ ಪೂರೈಕೆಯಾಗುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ಜೆಸ್ಕಾಂ ಅಧಿಕಾರಿಗಳು ಗಮನಹರಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು.
    | ಬಸವರಾಜ ಮತ್ತಿಮಡು, ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts