More

    ವಿದ್ಯುತ್​ಗೂ ತಗುಲಿದ ‘ಕರೊನಾ ಸೋಂಕು’

    ಸೊರಬ: ಮೆಸ್ಕಾಂ ಸಿಬ್ಬಂದಿಗೆ ಕರೊನಾ ವೈರಸ್ ಸೋಂಕು ಹರಡುತ್ತಿದ್ದಂತೆ ಗ್ರಾಮೀಣ ಪ್ರದೇಶಗಳಲ್ಲಿ ಕತ್ತಲು ಆವರಿಸಿದೆ.

    ಮೂರು ದಿನಗಳ ಹಿಂದೆ ತಾಲೂಕಿನ ಕೆಲವು ಮೆಸ್ಕಾಂ ಸಿಬ್ಬಂದಿಗೆ ಕರೊನಾ ವೈರಸ್ ದೃಢಪಟ್ಟಿರುವುದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಜತೆಗೆ ಸಂಪರ್ಕಕ್ಕೆ ಬಂದ ಹಲವರನ್ನು ಕ್ವಾರಂಟೈನ್ ಮಾಡಲಾಗಿದೆ.

    ಗ್ರಾಮೀಣ ಪ್ರದೇಶದಲ್ಲಿ ಮಳೆ ಆರಂಭವಾಗಿದ್ದು ದಿನನಿತ್ಯ ಜಂಗಲ್ ಲೈನ್​ಗಳ ತಪಾಸಣೆ ಹಾಗೂ ಫೀಡರ್​ಗಳನ್ನು ನೋಡಿಕೊಳ್ಳುತ್ತಿದ್ದ ಲೈನ್​ವುನ್​ಗಳು ಚಿಕಿತ್ಸೆ ಮತ್ತು ಕ್ವಾರಂಟೈನ್​ನಲ್ಲಿ ಇರುವುದರಿಂದ ಸೊರಬ, ಕೊಡಕಣಿ, ಶಿಗ್ಗಾ ಫೀಡರ್​ಗಳ ವ್ಯಾಪ್ತಿಗೆ ಬರುವ ನೂರಕ್ಕೂ ಹೆಚ್ಚಿನ ಹಳ್ಳಿಗಳು ವಿದ್ಯುತ್ ನಿರ್ವಹಣೆ ಇಲ್ಲದೆ ಜನರು ಕತ್ತಲಲ್ಲಿ ಕಾಲ ಕಳೆಯುವಂತಾಗಿದೆ. ವಿದ್ಯುತ್ ಸಮಸ್ಯೆಯಿಂದ ಕುಡಿಯುವ ನೀರಿಗೂ ತೊಂದರೆ ಉಂಟಾಗಿದೆ.

    ಮೆಸ್ಕಾಂ ಸಿಬ್ಬಂದಿಗೆ ಬಂದ ಸೋಂಕಿನ ಪರಿಣಾಮ ಗ್ರಾಮೀಣ ಪ್ರದೇಶದ ಜನರ ಮೇಲೆ ನೇರ ಪರಿಣಾಮ ಬೀರಿದೆ. ದೀಪ ಹಚ್ಚಲು ಸೀಮೆಎಣ್ಣೆ ಇಲ್ಲ. ಮೇಣದ ಬತ್ತಿ ತರಲು ಅಂಗಡಿ ಬಾಗಿಲು ತೆರೆದಿಲ್ಲ. ಹಿರಿಯ ಅಧಿಕಾರಿಗಳು ಎಷ್ಟೇ ಪ್ರಯತ್ನ ನಡೆಸಿದರೂ ಲೈನ್​ವುನ್​ಗಳಿಲ್ಲದೆ ವಿದ್ಯುತ್ ಪೂರೈಕೆ ಸಾಧ್ಯವಾಗುತ್ತಿಲ್ಲ. ಇರುವ ಎರಡು-ಮೂರು ಸಿಬ್ಬಂದಿ ಎಲ್ಲ ಕಡೆ ಕರ್ತವ್ಯ ನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ. ತಾಲೂಕಿನ ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ಲೈನ್​ವುನ್​ಗಳು ಕೆಲಸಕ್ಕೆ ಮರಳುವವರೆಗೆ ಕಾಯಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts