More

    ವಿದ್ಯಾರ್ಥಿ ಸಾವಿನ ಪ್ರಕರಣವನ್ನು ಸಿಬಿಐಗೆ ವಹಿಸಿ

    • ಹುಣಸೂರು : ತಾಲೂಕಿನ ದಾಸನಪುರದ ವಿದ್ಯಾರ್ಥಿ ಮುತ್ತುರಾಜ್ ಅನುಮಾನಾಸ್ಪದ ಸಾವಿನ ಪ್ರಕರಣದ ಸಾಕ್ಷಿಗಳು ನಾಶವಾಗುವ ಮುನ್ನ ಸಿಬಿಐ ತನಿಖೆಗೆ ವಹಿಸಬೇಕೆಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಆಗ್ರಹಿಸಿದರು.

    • ತಾಲೂಕಿನ ರತ್ನಪುರಿಯ ದಾಸನಪುರದ ಮೃತ ವಿದ್ಯಾರ್ಥಿಯ ಮನೆಗೆ ಭಾನುವಾರ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿ ಮಾತನಾಡಿದರು. ಕೆಟ್ಟದ್ದು ಮಾಡುವವರಿಗೆ ಭಯವಿಲ್ಲದ ವಾತಾವರಣ ಈ ಸರ್ಕಾರದಲ್ಲಿದೆ. ಹಾಗಾಗಿ ಇಂತಹ ದುರ್ಘಟನೆಗಳು ಮರುಕಳಿಸುತ್ತಿವೆ. ಮುತ್ತುರಾಜ್ ನೇಣಿಗೆ ಶರಣಾಗಿದ್ದಾನೆಂದು ಬಿಂಬಿಸಲಾಗುತ್ತಿದೆ. ಆದರೆ ನೇಣಿಗೆ ಶರಣಾದ ಭಾವಚಿತ್ರದಲ್ಲಿ ಮುತ್ತುರಾಜ್‌ನ ಮೊಣಕಾಲು ನೆಲದ ಮೇಲೆ ತಾಗಿದೆ. ಹೀಗಾಗಿ ಆತನ ಸಾವು ಸಹಜ ಸಾವಲ್ಲ ಎನ್ನುವ ಅನುಮಾನ ಮೂಡುತ್ತಿದೆ ಎಂದರು.

    • ಸದನದಲ್ಲಿ ಪ್ರಸ್ತಾಪಿಸಲಿದ್ದೇವೆ: ಬಡ ಕೃಷಿಕ ರವಿಕುಮಾರ್ ಅವರ ಪುತ್ರ ಮುತ್ತುರಾಜ್‌ನದ್ದು ಸಹಜ ಸಾವಲ್ಲ ಎನ್ನುವುದು ನಿರ್ವಿವಾದ. ರಾಜ್ಯ ಸರ್ಕಾರ ತನಿಖೆ, ಸಮಿತಿ ನೇಮಕ ಮುಂತಾದ ಮಾತುಗಳನ್ನು ಹೇಳುತ್ತಿದ್ದರೆ ಸಾಕ್ಷಿಗಳು ನಾಶವಾಗುವ ಸಾಧ್ಯತೆ ಇದೆ. ಆರೋಪಿ ಎಷ್ಟೇ ಬಲಿಷ್ಠನಾಗಲಿ ಶಿಕ್ಷಿಸುವ ಕೆಲಸವಾಗಬೇಕಿದೆ.

    • ಮುಖ್ಯಮಂತ್ರಿ ಹಾಗೂ ಗೃಹಸಚಿವರನ್ನು ಭೇಟಿ ಮಾಡಿ ಸಿಬಿಐ ತನಿಖೆಗೆ ವಹಿಸಲು ಆಗ್ರಹಿಸುತ್ತೇವೆ. ಈಡಿಗ ಸಮಾಜದ ಸ್ವಾಮೀಜಿಗಳು ಕೂಡ ಸಿಬಿಐ ಅಥವಾ ಎಸ್‌ಐಟಿ ತನಿಖೆಗೆ ಒತ್ತಾಯಿಸಿ 50 ಲಕ್ಷ ರೂ.ಗಳ ಪರಿಹಾರಕ್ಕಾಗಿ ಒತ್ತಾಯಿಸಿದ್ದಾರೆ. ಅದು ನ್ಯಾಯಯುತವೂ ಹೌದು. ಬಡಕುಟುಂಬದ ಆಶ್ರಯವಾಗಿದ್ದ ಬಾಲಕ ಮರಣ ಹೊಂದಿರುವುದು ಎಲ್ಲರನ್ನೂ ದಂಗುಬಡಿಸಿದೆ. ವಿಧಾನಪರಿಷತ್‌ನ ವಿಪಕ್ಷದ ನಾಯಕನಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಡ ಕೃಷಿಕನ ಬೆಂಬಲಕ್ಕೆ ನಮ್ಮ ತಂಡ ಒಂದಾಗಿ ನಿಲ್ಲಲಿದೆ ಎಂದರು.

    • ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ತಾಲೂಕು ಅಧ್ಯಕ್ಷ ನಾಗಣ್ಣಗೌಡ, ನಗರಮಂಡಲ ಅಧ್ಯಕ್ಷ ಗಣೇಶ್ ಕುಮಾರಸ್ವಾಮಿ, ರೈತಮೋರ್ಚಾ ಅಧ್ಯಕ್ಷ ಪರಮೇಶ್, ಮುಖಂಡರಾದ ಜಾಬಗೆರೆ ರಮೇಶ್, ಶ್ಯಾಮ್, ವಿಶ್ವನಾಥ್, ಈಡಿಗ ಸಮಾಜದ ಮುಖಂಡ ಅನ್ನಪೂರ್ಣ ವಿಶ್ವನಾಥ್, ಹಿನ್‌ಕಲ್ ಪಾಪಣ್ಣ, ಹಿಂದು ಜಾಗರಣಾ ಸಮಿತಿ ಸಂಚಾಲಕ ಲೋಹಿತ್ ಅರಸ್ ಹಾಗೂ ಗ್ರಾಮಸ್ಥರು ಹಾಜರಿದ್ದರು.
      • ಈ ವೇಳೆ ವಿದ್ಯಾರ್ಥಿಯ ಪಾಲಕರಿಂದ ಘಟನಾವಳಿಯ ಸಮಗ್ರ ಮಾಹಿತಿಯನ್ನು ಶಾಸಕ ಶ್ರೀನಿವಾಸ ಪೂಜಾರಿ ಪಡೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts