More

    ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಅರಿಹಂತ ಸ್ಕಾಲರಶಿಪ್

    ಬೋರಗಾಂವ: ಅರಿಹಂತ ಸಹಕಾರಿ ಸೌಹಾರ್ದ ಸಂಸ್ಥೆ ವತಿಯಿಂದ ಸದಸ್ಯರ ಕಲ್ಯಾಣಕ್ಕೆ ಮಾದರಿ ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ರಾವಸಾಹೇಬ ಪಾಟೀಲ ಕರೆ ನೀಡಿದರು. ಇಲ್ಲಿನ ಅರಿಹಂತ ಸಭಾಭವನದಲ್ಲಿ ಪಿಯುಸಿ ಮತ್ತು ಹತ್ತನೇ ತರಗತಿಯಲ್ಲಿ ಹೆಚ್ಚು ಅಂಕ ಗಳಿಸಿದ ಒಟ್ಟು 152 ವಿದ್ಯಾರ್ಥಿಗಳಿಗೆ ಮಂಗಳವಾರ 6 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿ ವೇತನ ಚೆಕ್ ವಿತರಿಸಿ ಮಾತನಾಡಿ, ಸಂಸ್ಥೆಯು ಸಹಕಾರ, ಸಾಮಾಜಿಕ, ಧಾರ್ಮಿಕ ಹಾಗೂ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದೆ. ಎಲ್ಲ ಶಾಖೆಗಳ ಸದಸ್ಯರ ಮಕ್ಕಳಿಗೆ ಉನ್ನತ ಶಿಕ್ಷಣ ಪಡೆಯಲು 2015ರಿಂದ ಅರಿಹಂತ ಸ್ಕಾಲರ್‌ಶಿಪ್ ಯೋಜನೆ ಆರ್ಥಿಕ ಸಹಾಯ ಮಾಡಲಿದ್ದು, ಅರ್ಹರು ಲಾಭ ಪಡೆಯಬೇಕು. ಯುವ ಮುಖಂಡ ಉತ್ತಮ ಪಾಟೀಲ ಮಾತನಾಡಿದರು. ಮೀನಾಕ್ಷಿ ಪಾಟೀಲ, ಸಂಸ್ಥೆಯ ಉಪಾಧ್ಯಕ್ಷ ಸುಭಾಷ ಶೆಟ್ಟಿ, ನಿರ್ದೇಶಕ ಅಭಯಕುಮಾರ ಕರೋಲೆ, ಶ್ರೀಕಾಂತ ವಸವಾಡೆ, ಜನರಲ್ ಮ್ಯಾನೇಜರ್ ಅಶೋಕ ಬಂಕಾಪುರೆ, ಸಹಾಯಕ ಶಾಂತಿನಾಥ ತೇರದಾಳೆ, ಪಟ್ಟಣ ಪಂಚಾಯಿತಿ ಸದಸ್ಯ ಅಭಯಕುಮಾರ ಮಗದುಮ್ಮ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts