More

    ವಿದ್ಯಾರ್ಥಿಗಳ ಅನುಕೂಲಕ್ಕೆ ಹಲವು ಯೋಜನೆ

    ಗೋಕರ್ಣ: ತಾರತಮ್ಯ ಭಾವವಿಲ್ಲದೆ ಎಲ್ಲ ವಿದ್ಯಾರ್ಥಿಗಳನ್ನು ಏಕ ಪ್ರಕಾರವಾಗಿ ನೋಡಿಕೊಳ್ಳುಂತಾಗಬೇಕು. ಅದರಿಂದ ಮಾತ್ರ ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸ ಬೆಳೆಸಲು ಸಾಧ್ಯ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.

    ನಾಡಮಾಸ್ಕೇರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಹಿಂದಿನ ಮೂರು ನಾಲ್ಕು ದಶಕಗಳಿಗೆ ಹೋಲಿಸಿದರೆ ಇಂದಿನ ವಿದ್ಯಾರ್ಥಿಗಳಿಗೆ ಸರ್ಕಾರ ಅನೇಕ ಅನುಕೂಲ ಒದಗಿಸಿಕೊಟ್ಟಿದೆ. ಈ ವಿಧಾನ ಸಭಾ ಕ್ಷೇತ್ರದ ಶಾಲೆಗಳ ಅಭಿವೃದ್ಧಿಗಾಗಿ ಸರ್ಕಾರದಿಂದ ಮಂಜೂರಾದ 4 ಕೋಟಿ ರೂ. ಗೂ ಅಧಿಕ ಸಹಾಯಧನದಿಂದ ವಿವಿಧ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ.ನಾಡುಮಾಸ್ಕೇರಿಯಲ್ಲಿ ಪಿಯು ಕಾಲೇಜ್​ಗೆ ಆಗ್ರಹವಿದ್ದು ಈ ಬಗ್ಗೆ ಪ್ರಯತ್ನ ಮಾಡಲಾಗುವುದು ಎಂದರು.

    ಪದ್ಮಶ್ರೀ ಪುರಸ್ಕಾರಕ್ಕೆ ಆಯ್ಕೆಯಾಗಿರುವ ತುಳಸಿ ಗೌಡ, ಕಾರವಾರ ಕಿಮ್್ಸ ನಿರ್ದೇಶಕ ಡಾ. ಗಜಾನನ ಎಚ್. ಗಾಂವಕರ, ಅಸಿಸ್ಟಂಟ್ ಕಮಾಂಡೆಂಟ್ ಹೇಮಕುಮಾರ ಬಿ., ಡಿಡಿಪಿಐ ಹರೀಶ ಗಾಂವಕರ, ಡಯಟ್ ಪ್ರಾಚಾರ್ಯ ಕೆ. ಮಂಜುನಾಥ, ಬಿಇಒ ಆರ್.ಎಲ್. ಭಟ್ಟ, ಎಎಸ್​ಐ ಎಂ.ಜಿ. ಗೌಡ ಅವರನ್ನು ಸನ್ಮಾನಿಸಲಾಯಿತು.

    ಸನ್ಮಾನ ಸ್ವೀಕರಿಸಿ ಮಾತನಾಡಿದ ಪದ್ಮಶ್ರೀ ಪುರಸ್ಕಾರಕ್ಕೆ ಆಯ್ಕೆಯಾದ ತುಳಸಿ ಗೌಡ, ಎಲ್ಲಿಯೂ ಖಾಲಿ ಜಾಗ ಬಿಡದೆ ಮರಗಳನ್ನು ನೆಡುವ ಕಾಯಕವಾಗಲಿ. ಮರಗಳು ನೆಟ್ಟವನನ್ನು ಮಾತ್ರವಲ್ಲದೆ ಆತನ ಹಲವು ತಲೆಮಾರುಗಳನ್ನು ತಂಪಾಗಿಸುವ ಕಾರ್ಯ ಮಾಡುತ್ತವೆ ಎಂದರು.

    ಹಿರಿಯ ಸಾಹಿತಿ ಮತ್ತು ನಿವೃತ್ತ ಪ್ರಾಚಾರ್ಯ ಆರ್.ಜಿ. ಗುಂದಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ತಮ್ಮ ಹುಟ್ಟೂರಾದ ನಾಡುಮಾಸ್ಕೇರಿಯಲ್ಲಿ ಶಿಕ್ಷಣ ಕುರಿತಾಗಿ ಉಂಟಾದ ಉತ್ತಮ ಬದಲಾವಣೆಯನ್ನು ಶ್ಲಾಘಿಸಿದರು.

    ವೇದಿಕೆಯಲ್ಲಿ ತಾಪಂ ಸದಸ್ಯ ರಾಜೇಶ ನಾಯಕ, ಊರ ಹಿರಿಯರಾದ ನಾರಾಯಣ ನಾಯಕ, ಶಾಂತಿಕಾ ಪರಮೇಶ್ವರಿ ಮಂದಿರ ಟ್ರಸ್ಟಿ ಮಾರುತಿ ತಾಂಡೇಲ, ಗಂಗಾಮಾತಾ ಮಂದಿರ ಟ್ರಸ್ಟಿ ನಾಗಪ್ಪ ಅಂಬಿಗ, ನಿವೃತ್ತ ಶಿಕ್ಷಕ ಲಾರೆನ್ಸ್ ಮಾಸ್ತರ್, ನಿವೃತ್ತ ಶಿಕ್ಷಕ ಶ್ರೀನಿವಾಸ ನಾಯ್ಕ, ಜಮಾದ್ ಮಸೀದೆ ಅಧ್ಯಕ್ಷ ಬಸೀರ್ ಸಾಬ್ ಉಪಸ್ಥಿತರಿದ್ದರು. ತಾಪಂ ಸದಸ್ಯ ರಾಜೇಶ ನಾಯಕ ತುಳಸಿ ಗೌಡ ಅವರಿಗೆ ವಿಶೇಷ ಧನ ಸಹಾಯ ನೀಡಿ ಗೌರವಿಸಿದರು. ಮುಖ್ಯಾಧ್ಯಾಪಕಿ ಪದ್ಮಾ ನಾಯಕ ಸ್ವಾಗತಿಸಿದರು. ಮಂಗಲಾ ನಾಯಕ, ಶ್ಯಾಮಲಾ ನಾಯಕ ಮತ್ತು ಅವಿನಾಶ ಗಾವಡಿ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts