More

    ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಸಾಧನೆ ಮಾಡಿ

    ಬೈಲಹೊಂಗಲ: ಸರ್ಕಾರ ಕ್ರೀಡಾಪಟುಗಳಿಗೆ ಅನೇಕ ಸೌಲಭ್ಯ ಒದಗಿಸುತ್ತಿದ್ದು, ಕ್ರೀಡೆಯಲ್ಲಿ ಸಾಧನೆ ಮಾಡಿ ಬದುಕು ಕಟ್ಟಿಕೊಳ್ಳಲು ವಿದ್ಯಾರ್ಥಿಗಳು ಮುಂದಾಗಬೇಕು ಎಂದು ಶ್ರೀ ಖಾಸ್ಗತೇಶ್ವರ ಶಿಣ ಸಂಸ್ಥೆಯ ಅಧ್ಯ ಕಾಶೀನಾಥ ಬಿರಾದಾರ ಹೇಳಿದರು.

    ಸಂಸ್ಥೆಯ ನೇತಾಜಿ ಸುಭಾಷಚಂದ್ರ ಬೋಸ್​ ಕನ್ನಡ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಾರ್ಷಿಕ ಕ್ರೀಡಾಕೂಟವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿ, ಶಿಣದೊಂದಿಗೆ ಕ್ರೀಡೆಗಳ ಕಡೆ ಆಸಕ್ತಿ ವಹಿಸಬೇಕು. ಕ್ರೀಡೆಗಳಲ್ಲಿ ಸೋಲು&ಗೆಲುವು ಮುಖ್ಯವಲ್ಲ. ಆಸಕ್ತಿಯಿಂದ ಪಾಲ್ಗೊಳ್ಳಬೇಕು ಎಂದರು.

    ಶಿಣ ಸಂಯೋಜಿಕ ಪ್ರಕಾಶ ಮಾಸ್ತಿಹೊಳಿ ಮಾತನಾಡಿ, ಕ್ರೀಡೆಯಿಂದ ಸ್ನೇಹ, ಪ್ರೀತಿ ಬೆಳೆಯುತ್ತದೆ. ಎಲ್ಲರೂ ಕ್ರೀಡಾ ಮನೋಭಾವನೆ ಬೆಳೆಸಿಕೊಂಡು ನಾಡಿನಲ್ಲಿ ಒಳ್ಳೆಯ ಕ್ರೀಡಾಪಟುಗಳಾಗಿ ಜೀವನದಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದರು. ತಾಲೂಕು ದೈಹಿಕ ಶಿಣ ಪರಿವೀಕ ಎಸ್​.ಜಿ.ಹೊರಟ್ಟಿ, ಉಪನ್ಯಾಸಕ ಗಜಾನನ ಸೂರ್ಯವಂಶಿ ಮಾತನಾಡಿದರು. ಮಹಾಂತೇಶ ರೇಶ್ಮಿ, ಮುಖ್ಯ ಶಿಕಿ ವೀಣಾ ಜೋಶಿ, ದೈಹಿಕ ಶಿಕ್ಷಣ ಶಿಕ ಕುಮಾರ ಬೋರಕನವರ ಇದ್ದರು. ಪಾರಿವಾಳ ಹಾರಿಸುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು. ಶಿಕ ವಿ.ಪಿ. ನಂದೇನವರ ಸ್ವಾಗತಿಸಿದರು. ಶಿಕ ಎಸ್​.ವೈ.ಕರಡಿಗುಡ್ಡ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ ಜಿ.ಎಂ. ಗಾಡದ ಪ್ರಮಾಣ ವಚನ ಬೋಧಿಸಿದರು. ಶಿಕ ಪ್ರಕಾಶ ಕಂಠಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts