More

    ವಿದ್ಯಾರ್ಥಿಗಳಲ್ಲಿ ಕ್ಷೀಣಿಸುತ್ತಿದೆ ಕಲಿಕೆ ಆಸಕ್ತಿ

    ಹುಕ್ಕೇರಿ: ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಕಲಿಕೆಯ ಆಸಕ್ತಿ ಕ್ಷೀಣಿಸುತ್ತಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಕಳವಳ ವ್ಯಕ್ತಪಡಿಸಿದರು.

    ತಾಲೂಕಿನ ಬೆಳವಿ ಗ್ರಾಮದಲ್ಲಿ ಶುಕ್ರವಾರ ನಬಾರ್ಡ್ ಯೋಜನೆಯಡಿ 22 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ 2 ಶಾಲಾ ಕೊಠಡಿ, ಯುವಜನ ಸಬಲೀಕರಣ ಕ್ರೀಡಾ ಇಲಾಖೆಯಿಂದ ನಿರ್ಮಿಸಿದ 11 ಲಕ್ಷ ರೂ. ವೆಚ್ಚದ ಗರಡಿಮನೆ ಉದ್ಘಾಟನೆ, 11 ಲಕ್ಷ ರೂ. ವೆಚ್ಚದ ಶಾಲಾ ಕೊಠಡಿ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಮೂರು ದಶಕಗಳ ಹಿಂದೆ ಶಿಕ್ಷಕರು ವಿದ್ಯಾರ್ಥಿಗಳಿಗೆ ಬೆದರಿಸಿ, ಶಿಕ್ಷಣ ಹೇಳುತ್ತಿದ್ದರು. ಇದಕ್ಕೆ ಪಾಲಕರು ಬೆಂಬಲಿಸುತ್ತಿದ್ದರು. ಈಗ ಕಲಿಕೆ ವಿಷಯದಲ್ಲಿ ಮಕ್ಕಳಿಗೆ ಶಿಕ್ಷಕರು ಬೆದರಿಸಿದರೆ, ಪಾಲಕರು ತಾಕೀತು ಮಾಡುತ್ತಿದ್ದಾರೆ. ಹೀಗಾಗಿ ಮಕ್ಕಳು ಕಲಿಕೆ ಬಗ್ಗೆ ಆಸಕ್ತಿ ಹೊಂದದಿರುವುದಕ್ಕೆ ಪಾಲಕರ ಮನಃಸ್ಥಿತಿಯೂ ಕಾರಣವಾಗುತ್ತಿದೆ.

    ಉತ್ತಮ ಶಾಲಾ ಕಟ್ಟಡ, ಆಟದ ಮೈದಾನ, ಪಠ್ಯ-ಪುಸ್ತಕ ಅಗತ್ಯ ಶಿಕ್ಷಕರಿದ್ದರೆ ಶಿಕ್ಷಣ ಪ್ರಗತಿ ಸಾಧ್ಯ ಎಂದರು. ಇದೇ ವೇಳೆ ವಿದ್ಯುತ್ ಸಹಕಾರಿ ಸಂಘಕ್ಕೆ ನಾಮ ನಿರ್ದೇಶನವಾದ ರಮೇಶ ಕುಲಕರ್ಣಿ ಅವರನ್ನು ಸತ್ಕರಿಸಲಾಯಿತು. ತಾಪಂ ಮಾಜಿ ಸದಸ್ಯ ಬಾಳಾಸಾಹೇಬ ನಾಯಿಕ, ಗ್ರಾಪಂ ಅಧ್ಯಕ್ಷೆ ಜಯಶ್ರೀ ಸತ್ಯಾಯಿಗೋಳ, ಉಪಾಧ್ಯಕ್ಷೆ ಶೋಭಾ ಮಗದುಮ್ಮ, ಸತ್ಯಪ್ಪ ನಾಯಿಕ, ಚನಮಲ್ಲ ನಾಯಿಕ, ರಾಮಣ್ಣ ತೇರದಾಳಿ, ಭಾಪು ಚಿಕ್ಕಣಗಿ, ಪಿಕೆಪಿಎಸ್ ಉಪಾಧ್ಯಕ್ಷ ಅಪ್ಪಾಸಾಹೇಬ ಸಾರಾಪುರೆ, ಭರತೇಶ ನಾಯಿಕ, ಸಂಜೀವ ಚಿಕ್ಕೋಡಿ, ಶಂಕರ ಗುಡಸಿ, ವಿಶ್ವನಾಥ ಗುಡಸಿ, ಸುರೇಶ ಖಡಕಭಾಂವಿ, ರಾಮಣ್ಣ ಬಹಾದ್ದೂರಿ, ಎಸ್.ಡಿ. ನಾಯಿಕ, ಶ್ರೀಶೈಲ ಹಿರೇಮಠ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts