More

    ವಿದ್ಯಾರ್ಥಿಗಳಲ್ಲಿರಲಿ ದೇಶಸೇವೆಯ ಪಣ  – ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿಕೆ -ಸರ್.ಎಂ.ವಿ. ವೈಭವ್-2023 ಕಾರ್ಯಕ್ರಮ

    ದಾವಣಗೆರೆ: ದೇಶದ ಭವಿಷ್ಯ ಉಜ್ವಲಗೊಳಿಸುವ ದಿಸೆಯಲ್ಲಿ ವಿದ್ಯಾರ್ಥಿಗಳು ದೇಶ ಸೇವೆಗಾಗಿ ಪಣ ತೊಡಬೇಕು ಎಂದು ವಿಧಾನ ಪರಿಷತ್‌ನ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದರು.

    ನಗರದ ಸರ್.ಎಂ.ವಿ. ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸರ್.ಎಂ.ವಿ. ವೈಭವ್-2023 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಇಂದಿನ ಮಕ್ಕಳಲ್ಲಿ ರಾಷ್ಟ್ರಭಕ್ತಿ ಬೆಳೆಯಬೇಕು. ನನ್ನ ದೇಶ, ನನ್ನ ಕನಸು ಎಂಬ ಗುರಿ ಇರಬೇಕು. ಮೊಬೈಲ್‌ಗಳು ಸ್ಮಾರ್ಟ್ ಆಗಿರುವಂತೆಯೇ ವಿದ್ಯಾರ್ಥಿಗಳು ಸ್ಮಾರ್ಟ್ ಆಗುವ ಅಗತ್ಯವಿದೆ ಎಂದು ಹೇಳಿದರು.
    ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಜ್ಞಾನಿಗಳ ಕೊರತೆ ಇದೆ. ಇದನ್ನು ನೀಗುವತ್ತ ವಿದ್ಯಾರ್ಥಿಗಳು ಮುಂದಾಗಬೇಕು ಎಂದೂ ಕಿವಿಮಾತು ಹೇಳಿದರು.
    ಮೇಲ್ಮನೆ ಮಾಜಿ ಮುಖ್ಯ ಸಚೇತಕ ಡಾ. ಎ.ಎಚ್.ಶಿವಯೋಗಿಸ್ವಾಮಿ ಮಾತನಾಡಿ ಈಗಿನ ಯುವಸಮೂಹ ಸದಾ ಎಚ್ಚರವಾಗಿರಬೇಕು. ಸರಿದಾರಿಯಲ್ಲಿ ಸಾಗಬೇಕು ಎಂದು ಹೇಳಿದರು.
    ನೀಟ್ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕ ಪಡೆದು ವೈದ್ಯಕೀಯ ವಿಭಾಗದಲ್ಲಿರುವ ಎಚ್.ಪಿ.ಸಾಗರ ಅವರಿಗೆ 3 ಲಕ್ಷ ರೂ, ಶ್ರೀನಿವಾಸ ಬಸವನಗೌಡ ಮಾಲೀಪಾಟೀಲ್ ಅವರಿಗೆ 2 ಲಕ್ಷ ರೂ, ವಾಣಿಜ್ಯ ವಿಭಾಗದಲ್ಲಿ ಹೆಚ್ಚಿನ ಅಂಕ ಪಡೆದ ಯು. ಪ್ರೀತಿ ಅವರಿಗೆ 1 ಲಕ್ಷ ರೂ. ಬಹುಮಾನ ನೀಡಿ ಗೌರವಿಸಲಾಯಿತು. ಐಐಟಿ, ಎಐಎಂಎಸ್ ಸಂಸ್ಥೆಗಳಿಗೆ ದಾಖಲಾದ 12 ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ಗಳನ್ನು ವಿತರಿಸಲಾಯಿತು.
    ಎಸ್.ಜೆ. ಶ್ರೀಧರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಗನ್ ಸ್ವಾಗತಿಸಿದರು, ಕಾಲೇಜಿನ ಪ್ರಾಚಾರ್ಯ ಡಾ.ದೇವರಾಜ ಎಂ. ಸರಾಪದ ಕಾರ್ಯಕ್ರಮ ನಿರ್ವಹಿಸಿದರು. ಸುರೇಶ್ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts