More

    ವಿಡಿಯೋ ಕಾಲ್ ಮೂಲಕ ಪಾಠ

    ವಿಜಯವಾಣಿ ಸುದ್ದಿಜಾಲ ಶಿರಸಿ: ಲಾಕ್ ಡೌನ್ ಕಾರಣದಿಂದ ಮುಂಬರುವ ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆ ಎದುರಾಗಬಾರದೆಂಬ ಕಾರಣದಿಂದ ಇಲ್ಲಿನ ತೋಟಗಾರಿಕಾ ಮಹಾವಿದ್ಯಾಲಯದಲ್ಲಿ ಆನ್​ಲೈನ್ ತರಗತಿಗಳು ಆರಂಭವಾಗಿವೆ.

    ತೋಟಗಾರಿಕೆ ಪದವಿಯ ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳು ಮೊಬೈಲ್​ಫೋನ್​ನಲ್ಲಿ ಗ್ರೂಪ್ ವಿಡಿಯೋ ಕಾಲ್ ಮೂಲಕ ಪ್ರಾಧ್ಯಾಪಕರ ಪಾಠ ಕೇಳುತ್ತಿದ್ದಾರೆ.

    ಪ್ರತಿ ಕ್ಲಾಸಿನ ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಡೀನ್ ಒಳಗೊಂಡು ವಾಟ್ಸ್ ಆಪ್ ಗ್ರೂಪ್ ರಚಿಸಲಾಗಿದೆ. ಈ ಗ್ರೂಪ್​ಗಳಲ್ಲಿ ನೋಟ್ಸ್ ಶೇರ್ ಮಾಡಲಾಗುತ್ತದೆ.

    ಆನ್​ಲೈನ್ ಪಾಠದಲ್ಲಿ ಒಂದು ತಾಸಿನ ಟೈಮ್ೇಬಲ್ ಬದಲಾಗಿ, ಅರ್ಧ ದಿನಕ್ಕೆ ಒಂದು ಕೋರ್ಸ್ ಮೀಸಲಿಡಲಾಗಿದೆ. ಮೊಬೈಲ್​ಫೋನ್ ನೆಟ್​ವರ್ಕ್ ಸಮಸ್ಯೆಯ ಕಾರಣಕ್ಕೆ ಈ ಹೊಂದಾಣಿಕೆ ಮಾಡಿಕೊಳ್ಳಲಾಗಿದ್ದು, ಬೆಳಗ್ಗೆ 9ರಿಂದ 1 ಗಂಟೆ ಹಾಗೂ ಮಧ್ಯಾಹ್ನ 2ರಿಂದ 5ಗಂಟೆಯವರೆಗೆ ತರಗತಿಗಳು ನಡೆಯುತ್ತವೆ.

    ಸದಸ್ಯರ ಸಂಖ್ಯೆ ಹೆಚ್ಚಾದಂತೆ ಆಪ್​ನಲ್ಲಿ ಧ್ವನಿ ಸ್ಪಷ್ಟತೆ ಇರುವುದಿಲ್ಲ. ಹೀಗಾಗಿ, ಪಾಠದ ಧ್ವನಿ ಮುದ್ರಣವನ್ನು ಸಹ ವಿದ್ಯಾರ್ಥಿಗಳಿಗೆ ಕೊಡಲು ಪ್ರಾಧ್ಯಾಪಕರು ಯೋಚಿಸಿದ್ದಾರೆ.

    ಪದವಿ ಮೂರನೇ ವರ್ಷದ ವಿದ್ಯಾರ್ಥಿಗಳಿಗೆ ಶೇ. 90ರಷ್ಟು ಪಠ್ಯಕ್ರಮ ಪೂರ್ಣಗೊಂಡಿತ್ತು. ನಾಲ್ಕನೇ ವರ್ಷದ ವಿದ್ಯಾರ್ಥಿಗಳಿಗೆ ವರದಿ ಸಲ್ಲಿಕೆ ಹಾಗೂ ಅಂತಿಮ ಪರೀಕ್ಷೆ ಮಾತ್ರ ಉಳಿದುಕೊಂಡಿತ್ತು. ಅದನ್ನು ಪೂರ್ಣಗೊಳಿಸ ಲಿಕ್ಕೆ ಮತ್ತು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲು ಈ ವ್ಯವಸ್ಥೆ ಅನುಸರಿಸಲಾಗುತ್ತಿದೆ.

    ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಸೆಮಿಸ್ಟರ್ ಆರಂಭಿಕ ಹಂತದಲ್ಲಿತ್ತು. ಆಂತರಿಕ ಪರೀಕ್ಷೆ ಕೂಡ ನಡೆದಿರಲಿಲ್ಲ. ಈ ಹಂತದಲ್ಲಿ ತರಗತಿಗಳು ಬಂದಾಗಿದ್ದರಿಂದ, ಮುಂದಿನ ಶೈಕ್ಷಣಿಕ ಚಟುವಟಿಕೆಗೆ ತೊಂದರೆಯಾಗಬಾರದೆಂದು ಆನ್​ಲೈನ್ ಕ್ಲಾಸ್ ಪ್ರಾರಂಭಿಸಿದ್ದೇವೆ. ಬಾಗಲಕೋಟೆ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ಎಲ್ಲ ಒಂಬತ್ತು ತೋಟಗಾರಿಕಾ ಮಹಾವಿದ್ಯಾಲಯಗಳಲ್ಲಿಯೂ ಈ ಪಾಠ ಆರಂಭಗೊಂಡಿದೆ. | ಡಾ. ಇಂದಿರೇಶ ಕೆ.ಎಂ, ಬಾಗಲಕೋಟೆ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಉಪಕುಲಪತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts