More

    ವಿಜ್ಞಾನಿಗಳ ಸ್ಫೂರ್ತಿ ಪಡೆದು ಸಾಧಕರಾಗಿ-ಡಾ.ಶಂಕರಮೂರ್ತಿ

    ದಾವಣಗೆರೆ :ಅಬ್ದುಲ್ ಕಲಾಂ, ಸಿ.ವಿ.ರಾಮನ್, ಸುಬ್ರಹ್ಮಣ್ಯ ಚಂದ್ರಶೇಖರ್, ಹೋಮಿ ಜಹಾಂಗೀರ್ ಬಾಬಾ ಮೊದಲಾದ ವಿಜ್ಞಾನ ಕ್ಷೇತ್ರದ ಸಾಧಕರಿಂದ ಸ್ಪೂರ್ತಿ ಪಡೆದು ಸಾಧನೆ ಮಾಡಬೇಕು ಎಂದು ಬಿಐಇಟಿ ಕಾಲೇಜಿನ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಡೀನ್ ಡಾ.ಎ.ಜಿ.ಶಂಕರಮೂರ್ತಿ ಹೇಳಿದರು.
    ಇಲ್ಲಿನ ಬಾಪೂಜಿ ಹಿರಿಯ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಆವಿಷ್ಕಾರ-ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
    ನಾವು ಯಾವ ಸಾಧನೆ ಮಾಡಿದರೂ, ಕಲಿಸಿದ ಗುರುಗಳನ್ನು ಎಂದಿಗೂ ಮರೆಯಬಾರದು. ವಿದ್ಯಾರ್ಥಿಗಳು ಶಿಸ್ತು ಮತ್ತು ಶ್ರದ್ಧೆಯಿಂದ ಶಿಕ್ಷಣ ಪಡೆದು ಜ್ಞಾನವನ್ನು ಹೆಚ್ಚಿಸಿಕೊಂಡು ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸು ಕಾಣಬೇಕು ಎಂದು ಹೇಳಿದರು.
    ವಿದ್ಯಾರ್ಥಿಗಳಾಗಿ ಇರುವವರೆಗೂ ವಿಜ್ಞಾನ ಇರುತ್ತದೆ. ವಿಜ್ಞಾನ ಇರುವವರೆಗೆ ರಾಮನ್ ಪ್ರಭಾವ ಇರುತ್ತದೆ ಎಂದು ಸಾಂದರ್ಭಿಕವಾಗಿ ಮಾತನಾಡಿದ ಅವರು, ವೈಜ್ಞಾನಿಕ ಮಾಹಿತಿ, ಆವಿಷ್ಕಾರ ವಿಚಾರಗಳನ್ನು ಹಂಚಿಕೊಳ್ಳುವ ಮೂಲಕ ಯುವಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
    ಶಾಲೆಯ ಪ್ರಾಚಾರ್ಯೆ ಜೆ.ಎಸ್. ವನಿತಾ ಮಾತನಾಡಿ ನಮ್ಮಲ್ಲಿನ ಜ್ಞಾನವನ್ನು ಬಳಸಿಕೊಳ್ಳಬೇಕು. ಬಚ್ಚಿಟ್ಟ ಜ್ಞಾನ ಕೊಳೆಯಿತು, ಬಿಚ್ಚಿಟ್ಟ ಜ್ಞಾನ
    ಹೊಳೆಯಿತು ಎಂಬಂತೆ ಸಾಧನೆಯ ದಾರಿಯಲ್ಲಿ ಸಾಗಬೇಕು ಎಂದು ಹೇಳಿದರು.
    ಅರಣ್ಯ ನಾಶ, ಪರಿಸರ ರಕ್ಷಣೆ, ಯಾಂತ್ರೀಕೃತ ಕೃಷಿ, ಜೀರ್ಣಾಂಗ ವ್ಯವಸ್ಥೆ, ಮಿದುಳಿನ ಸಿದ್ಧಾಂತ, ಅಸ್ತಿಪಂಜರ, ಸೌರ ವಿದ್ಯುತ್, ದೇಹದ ಅಂಗರಚನೆ, ಹೊಲೊಗ್ರಾಮ್, ಕಸ ತೆಗೆಯುವ ಯಂತ್ರ, ಹುಲ್ಲು ಕಟಾವು ಯಂತ್ರ, ನೇತ್ರ ಪರೀಕ್ಷಣಾ ಸಾಧನ ಸೇರಿ 150ಕ್ಕೂ ಹೆಚ್ಚು ವಿಜ್ಞಾನ ಮಾದರಿಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.
    ಶಾಲೆಯ ಮುಖ್ಯಸ್ಥ ಮಂಜುನಾಥ್ ರಂಗರಾಜು, ಶೈಕ್ಷಣಿಕ ಮಾರ್ಗದರ್ಶಕರಾದ ಸಿ.ಮಂಜಪ್ಪ, ಸುಮಂಗಲಾ, ಸುಮಾ ಕುಲಕರ್ಣಿ, ಪಿ.ವಿ ಪ್ರಭು, ಶಾಲಾ ಚಟುವಟಿಕೆಗಳ ಪ್ರಭಾರಿ ಸವಿತಾ ರಮೇಶ್ ಮತ್ತು ಭೋದಕ- ಭೋದಕೇತರ ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts